Indigo flight: ಪ್ರಯಾಣಿಕರಿಕರಿಗೆ ಬೆಲೆ ಏರಿಕೆ ಶಾಕ್.!, ಯಾವ್ಯಾವ ಆಸನಗಳಿಗೆ ಎಷ್ಟು?-ಇಲ್ಲಿದೆ ಮಾಹಿತಿ
ನವದೆಹಲಿ, ಜನವರಿ, 09: ಇಂಡಿಗೋ ಇದೀಗ ಪ್ರಯಾಣಿಕರಿಗೆ ಶಾಕ್ ಆಗುವ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಬಯಸಿದ ಆಸನಗಳನ್ನು ಪಡೆಯಬೇಕೆಂದರೆ ಪ್ರಯಾಣಿಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾದರೆ ಯಾವ್ಯವ ಆಸನಗಳಿಗೆ ಎಷ್ಟು ಶುಲ್ಕ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದ ಅತೀ ದೊಡ್ಡ ಇಂಡಿಗೋ ಸಂಸ್ಥೆಗಳಲ್ಲೊಂದಾದ ವಿಮಾನಗಳಲ್ಲಿ ಹೆಚ್ಚು ಸೀಟ್ ಫ್ರಂಟ್ ರೋಆಯ್ಕೆಗೆ 2 ಸಾವಿರ ರೂಪಾಯಿಗೆ ದರ ಏರಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಇಂಡಿಗೋ ಕಂಪನಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವಿಧ ಸೇವೆಗಳಿಗೆ ನಮೂದಿಸಲಾದ ಶುಲ್ಕಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

232 ಆಸನಗಳ ಏರ್‌ಬಸ್ ಎ-321 ವಿಮಾನದಲ್ಲಿ ಮುಂಭಾಗದ ಸಾಲಿನ ಕಿಟಕಿ ಪಕ್ಕದ ಆಸನ ಬೇಕೆಂದರೆ 2 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಮಧ್ಯದ ಸೀಟಿಗೆ 1,500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಅದೇ 222-ಸೀಟ್ ಎ321, 186-ಸೀಟ್ ಎ320 ಮತ್ತು 180-ಸೀಟ್ ಎ320 ಗೆ ಅದೇ ದರಗಳು ಅನ್ವಯಿಸುತ್ತವೆ. ಎಟಿಆರ್ ವಿಮಾನಗಳಲ್ಲಿ ಆಸನಗಳನ್ನು ಆಯ್ಕೆ ಮಾಡಲು, 3ನೇ ವಿಭಾಗಕ್ಕೆ ಹೆಚ್ಚುವರಿ 500 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ವಿಮಾನಯಾನ ವಿಶ್ಲೇಷಕ ಅಮಿ ಜೋಶಿ ಅವರು ದರ ಏರಿಕೆಯ ಬಗ್ಗೆ ಮಾಹಿತಿ ನೀಡಿದ್ದು, ಇಂಡಿಗೋ ವಿಮಾನದಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ಮುಂಭಾಗದ ಸಾಲಿನ ಆಸನಗಳನ್ನು ಆಯ್ಕೆ ಮಾಡುವ ದರವನ್ನು ಗರಿಷ್ಠ 2 ಸಾವಿರ ರೂಪಾಯಿವರೆಗೆ ಹೆಚ್ಚಳ ಮಾಡಿದೆ. ಮೊದಲು 1,500 ರೂಪಾಯಿ ಸೀಟು ಆಯ್ಕೆ ಶುಲ್ಕ ಹೆಚ್ಚಳದ ಬಗ್ಗೆ ಇಂಡಿಗೋ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಜನವರಿ 22ರಿಂದ ಬೆಂಗಳೂರು-ಮುಂಬೈ ಏರ್‌ಬಸ್ ಸೇವೆ
ಇನ್ನು ಏರ್ ಇಂಡಿಯಾ ಕಂಪನಿಯು ಆಗಾಗ ಸಿಹಿಸುದ್ದಿಯನ್ನು ಕೊಡುತ್ತಲೇ ಬಂದಿದೆ. ಹಾಗೆಯೇ ಇದೀಗ ಈ ಕಂಪನಿಯ ಮೊದಲ ಏರ್‌ಬಸ್ ಎ350 ವಿಮಾನ ಸೇವೆ ಇದೇ ಜನವರಿ 22ರಿಂದ ಆರಂಭವಾಗಲಿದೆ. ಹಾಗಾದರೆ ಯಾವಲ್ಲ ಮಾರ್ಗಗಳಲ್ಲಿ ಈ ಹೊಸ ಸೇವೆ ಇರಲಿದೆ ಎಂದು ಇಲ್ಲಿ ತಿಳಿಯಿರಿ.
ಏರ್‌ಬಸ್ ಎ350 ವಿಮಾನ ಸೇವೆ ಇದೇ ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭ ಆಗಲಿದೆ. ಎ 350-900 ವಿಮಾನವು ಮೂರು ವರ್ಗದ ಕ್ಯಾಬಿನ್ ಹೊಂದಿದ್ದು, ಒಟ್ಟು 316 ಸೀಟುಗಳನ್ನು ಹೊಂದಿದೆ. 24 ಬ್ಯುಸಿನೆಸ್ ಕ್ಲಾಸ್, 24 ಪ್ರೀಮಿಯಂ ಎಕಾನಮಿ ಮತ್ತು 264 ಎಕಾನಮಿ ದರ್ಜೆಯ ಸೀಟುಗಳು ಈ ವಿಮಾನದಲ್ಲಿ ಇವೆ.
ದೇಶೀಯ ಮಾರ್ಗದಲ್ಲಿ ಏರ್‌ಬಸ್‌ನ ಪ್ರಥಮ ವಾಣಿಜ್ಯ ಸಂಚಾರ ಸೇವೆ ಆರಂಭಕ್ಕೆ ಸಿದ್ಧತೆ ಪೂರ್ಣವಾಗಿದೆ. ಹಾಗೂ ಎಲ್ಲಾ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ತಿಂಗಳ ಸೋಮವಾರ ಅಂದರೆ ಜನವರಿ 22ರಂದು ಏರ್‌ಬಸ್‌ನ ಪ್ರಯಾಣ ಸೇವೆಗೆ ಸಂಬಂಧಿಸಿದಂತೆ ಬುಕ್ಕಿಂಗ್ ಕೂಡ ಆರಂಭ ಆಗಲಿದೆ. ಫ್ರಾನ್ಸ್‌ನ ಏರ್‌ಬಸ್ ಕಂಪನಿ ನಿರ್ಮಿಸಿರುವ ಈ ವಿಮಾನವು ಡಿಸೆಂಬರ್ 23ರಂದು ನವದೆಹಲಿಯಲ್ಲಿ ಲ್ಯಾಂಡ್ ಆಗಿತ್ತು.












Click it and Unblock the Notifications