ಭಾರತದ ಮೊದಲ ಬುಲೆಟ್‌ ರೈಲಿನ ಬಿಗ್‌ ಅಪ್ಡೇಟ್‌; ಇಲ್ಲಿವೆ ಪ್ರಮುಖಾಂಶಗಳು

Mumbai-Ahmedabad Bullet Train: ಬಹುನಿರೀಕ್ಷಿತ ಭಾರತದ ಮೊಸಲ ಹೈಸ್ಪೀಡ್‌ ಬುಲೇಟ್‌ ರೈಲು ಸಂಚಾರದ ಬಗ್ಗೆ ಅಪ್ಡೇಟ್‌ ಮಾಹಿತಿಯೊಂದು ಲಭ್ಯವಾಗಿದೆ. ಮುಂಬೈ-ಅಹಮದಾಬಾದ್ ನಡುವೆ ಸಂಚಾರ ಆರಂಭ ಮಾಡುವ ಬುಲೆಟ್ ರೈಲು ಕ್ರಾಂತಿಯನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದು ಯಾವ್ಯಾವ ಮಾರ್ಗಗಳಲ್ಲಿ ಓಡಲಿದೆ ಎಂದು ಇಲ್ಲಿ ತಿಳಿಯಿರಿ.

ಬುಲೆಟ್ ರೈಲು ದೇಶಾದ್ಯಂತ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಮೂಲಸೌಕರ್ಯಕ್ಕೆ ಹೆಚ್ಚಿನ ಅನುಕೂಲತೆ ಕಲ್ಪಿಸಲಿದೆ. ಮುಂಬೈ-ಅಹಮದಾಬಾದ್ ನಡುವೆ ಸಂಚರಿಸಲಿರುವ ಬುಲೆಟ್ ರೈಲು ಭಾರತದ ಮೊದಲ ಹೈಸ್ಪೀಡ್ ರೈಲಾಗಲಿದೆ. ಈ ರೈಲು ಮಾರ್ಗದ ಒಟ್ಟು ಉದ್ದ 508 ಕಿಲೋ ಮೀಟರ್ ಆಗಿದೆ.

India s First Bullet Train big update Know details

ಈ ಪ್ರಮುಖ ಯೋಜನೆಯು ಭಾರತದ ಎರಡು ಪ್ರಮುಖ ನಗರಗಳಾದ ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ಅನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಬುಲೆಟ್ ರೈಲು ಪ್ರಯಾಣಿಕರಿಗೆ ಪ್ರಸ್ತುತ ಸಾರಿಗೆಗಳಿಗಿಂತ ಹೆಚ್ಚು ವೇಗದ ಪ್ರಯಾಣದ ಸೇವೆಯನ್ನು ನೀಡಲಿದೆ.

ಪ್ರಮುಖ ವಿವರಗಳು

* ರೈಲು ಮಾರ್ಗದ ಉದ್ದ 508 ಕಿಲೋ ಮೀಟರ್ ಆಗಿದೆ.
* ಬುಲೆಟ್ ರೈಲು ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ.
* ಈ ಯೋಜನೆಯು ಮುಂಬೈ-ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ ಕೇವಲ 2-3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.

ನಿಲ್ದಾಣಗಳ ವಿವರ: ಈ ರೈಲು ಮುಂಬೈ, ಥಾಣೆ, ವಿರಾರ್, ಬೋಯ್ಸರ್, ವಾಪಿ, ಬಿಲ್ಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿ 12 ಪ್ರಮುಖ ನಿಲ್ದಾಣಗಳ ಮೂಲಕ ಹಾದುಹೋಗಲಿದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ನಿರ್ಮಾಣವು ಈಗಾಗಲೇ ನಡೆಯುತ್ತಿದ್ದು, ಬಹುತೇಕ ಕಾಮಗಾರಿಗಳು ಮುಗಿದಿವೆ. 2028ರ ವೇಳೆಗೆ ಅಧಿಕೃತವಾಗಿ ಉದ್ಘಾಟನೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 21 ಕಿಲೋ ಮೀಟರ್ ನೀರೊಳಗಿನ ಸುರಂಗದೊಳಗಿನ ಕಾಮಗಾರಿ ಪ್ರಾರಂಭ ಸೇರಿದಂತೆ ಹಲವು ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.

ಹೀಗೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜೊತೆಗೆ ರೈಲ್ವೇ ಸಚಿವಾಲಯವು 7 ಹೆಚ್ಚುವರಿ ಹೈಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಿದ್ಧಪಡಿಸಲು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ ವಹಿಸಿದೆ.

1. ನವದೆಹಲಿ - ವಾರಣಾಸಿ
2. ನವದೆಹಲಿ - ಅಹಮದಾಬಾದ್
3. ನವದೆಹಲಿ - ಅಮೃತಸರ
4. ಮುಂಬೈ - ನಾಗ್ಪುರ
5. ಮುಂಬೈ - ಪುಣೆ - ಹೈದರಾಬಾದ್
6. ಚೆನ್ನೈ - ಬೆಂಗಳೂರು - ಮೈಸೂರು
7. ವಾರಣಾಸಿ - ಹೌರಾ

ನವದೆಹಲಿದೆಹಲಿ-ವಾರಣಾಸಿ ಮತ್ತು ವಾರಣಾಸಿ-ಹೌರಾ ಕಾರಿಡಾರ್‌ಗಳು ಉತ್ತರ ಪ್ರದೇಶದ ಮೂಲಕ ಹಾದು ಹೋಗಲಿವೆ. ಇನ್ನು ಈ ಯೋಜನೆಗಳ ಡಿಪಿಆರ್‌ಗಳ ಫಲಿತಾಂಶಗಳು, ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆ ಮತ್ತು ಹಣಕಾಸಿನ ಮೇಲೆ ನಿಂತಿದೆ. ಈ ಯೋಜನೆಯನ್ನು ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ಬೆಂಬಲದೊಂದಿಗೆ ನಿರ್ಮಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+