ಹುಬ್ಬಳ್ಳಿ ವಿಭಾಗದ ಕಾಮಗಾರಿ; ರೈಲು ರದ್ದು, ಮಾರ್ಗ ಬದಲಾವಣೆ ವಿವರ

ಬೆಂಗಳೂರು, ಡಿಸೆಂಬರ್ 12; ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಕಾರಣ ಕೆಲವು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕುರಿತು ಇಲಾಖೆ ಮಾಹಿತಿ ನೀಡಿದೆ.

ಯಾರ್ಡ್‌ ರಿಮಾಡಲಿಂಗ್ ಕಾಮಗಾರಿಗಳ ಕಾರಣ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ರೈಲು ಪ್ರಯಾಣ ಮಾಡುವ ಪ್ರಯಾಣಿಕರು ಬದಲಾವಣೆ ಬಗ್ಗೆ ಗಮನದಲ್ಲಿಟ್ಟುಕೊಂಡು ಸಂಚಾರ ನಡೆಸಬಹುದಾಗಿದೆ.

Hubballi Division Work List Of Partial Cancel And Diversion Of Trains

ಭಾಗಶಃ ರದ್ದುಗೊಂಡಿರುವ ರೈಲು

* ರೈಲು ನಂಬರ್ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ 11/12/2023 ರಿಂದ 20/12/2023ರ ತನಕ ಗಂಗಾವತಿ ಮತ್ತು ಕಾರಟಗಿ ನಡುವೆ ಭಾಗಶಃ ರದ್ದುಗೊಂಡಿದೆ. ರೈಲು ಗಂಗಾವತಿಯಲ್ಲಿಯೇ ನಿಲ್ಲಲಿದೆ.

* ರೈಲು ನಂಬರ್ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು 12/12/2023 ರಿಂದ 21/12/2023ರ ತನಕ ಕಾರಟಗಿ ಬದಲು ಗಂಗಾವತಿ ನಿಲ್ದಾಣದಿಂದ ಹೊರಡಲಿದೆ. ಕಾರಟಗಿ ಮತ್ತು ಗಂಗಾವತಿ ನಡುವ ಭಾಗಶಃ ರದ್ದಾಗಿದೆ.

* ರೈಲು ನಂಬರ್ 17303 ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ 11/12/2023 ರಿಂದ 20/12/2023ರ ತನಕ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದು. ರೈಲು ಗಂಗಾವತಿ ನಿಲ್ದಾಣದಲ್ಲಿಯೇ ನಿಲುಗಡೆ.

* ರೈಲು ನಂಬರ್ 17304 ಕಾರಟಗಿ-ಎಸ್ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ 12/12/2023 ರಿಂದ 21/12/2023ರ ತನಕ ಕಾರಟಗಿ ಬದಲು ಗಂಗಾವತಿಯಿಂದ ಹೊರಡಲಿದೆ. ಗಂಗಾವತಿ ಮತ್ತು ಕಾರಟಗಿ ನಡುವೆ ಭಾಗಶಃ ರದ್ದು.

* ರೈಲು ನಂಬರ್ 07381 ಎಸ್‌ಎಸ್ಎಸ್‌ ಹುಬ್ಬಳ್ಳಿ-ಕಾರಟಗಿ ಪ್ಯಾಸೆಂಜರ್ ರೈಲು 11/12/2023 ರಿಂದ 20/12/2023ರ ತನಕ ಗಂಗಾವತಿ ಮತ್ತು ಕಾರಟಗಿ ನಡುವೆ ಭಾಗಶಃ ರದ್ದು. ರೈಲು ಗಂಗಾವತಿಯಲ್ಲಿ ನಿಲುಗಡೆ.

* ರೈಲು ನಂಬರ್ 07382 ಕಾರಟಗಿ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಪ್ಯಾಸೆಂಜರ್ ರೈಲು 11/12/2023 ರಿಂದ 20/12/2023ರ ತನಕ ಕಾರಟಗಿ ಬದಲು ಗಂಗಾವತಿಯಿಂದ ಹೊರಡಲಿದೆ. ಕಾರಟಗಿ ಮತ್ತು ಗಂಗಾವತಿ ನಡುವ ಭಾಗಶಃ ರದ್ದು.

ರೈಲು ಮಾರ್ಗ ಬದಲಾವಣೆ

* ರೈಲು ನಂಬರ್ 12295 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಂಗಮ್ ಮಿತ್ರ ಪ್ರತಿದಿನದ ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ 16/12/2023 ಮತ್ತು 17/12/2023 ಮಾರ್ಗವನ್ನು ಧರ್ಮಾವರಂ, ರಾಯಚೂರು, ಕಾಚಿಗುಡ, ಕಾಜಿಪೇಟ್ ಮೂಲಕ ಸಂಚಾರ ನಡೆಸಲಿದೆ. ಕೆಆರ್‌ ಪುರಂ ಮತ್ತು ವಾರಂಗಲ್‌ ನಿಲ್ದಾಣಗಳ ಮೂಲಕ ಸಾಗುವುದಿಲ್ಲ.

* ರೈಲು ನಂಬರ್ 12296 ದಾನಾಪುರ- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಂಗಮ್‌ ಮಿತ್ರ ರೈಲು ದಾನಾಪುರದಿಂದ 16/12/2023 ಮತ್ತು 17/12/2023ರಂದು ಕಾಜಿಪೇಟ್‌, ಕಾಚಿಗುಡ, ರಾಯಚೂರು, ಧರ್ಮಾವರಂ ಮೂಲಕ ಸಂಚಾರ ನಡೆಸಲಿದೆ. ವಾರಂಗಲ್ ಮತ್ತು ಕೆಆರ್‌ಪುರ ನಿಲ್ದಾಣಕ್ಕೆ ಸಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+