ಹಲವು ದಿನಗಳವರೆಗೆ ಮೆಮು ಸೇರಿದಂತೆ ಹಲವು ರೈಲುಗಳು ರದ್ದು: ವೇಳಾಪಟ್ಟಿ ಬದಲಾವಣೆ
ನೈಋತ್ಯ ರೈಲ್ವೇ ವಿಭಾಗವು ಹಲವು ಮಾರ್ಗಗಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ಮಾರ್ಗಗಳಲ್ಲಿ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಮೆಮು ರೈಲುಗಳು ಭಾಗಶಃ ರದ್ದಾಗಿದ್ದು, ಹುಬ್ಬಳ್ಳಿ, ಅರಸೀಕೆರೆ, ಬೆಂಗಳೂರು ನಡುವಿನ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಪೆನುಕೊಂಡ-ನಾರಾಯಣಪುರಂ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಬೆಳಗ್ಗೆ 8.50 ರಿಂದ 11.50 ರವರೆಗೆ 8 ದಿನಗಳವರೆಗೆ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ.

1. ರೈಲುಗಳ ಸಂಖ್ಯೆ 06515/06516 ಕೆಎಸ್‌ಆರ್ ಬೆಂಗಳೂರು - ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ - ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜುಲೈ 13ರಿಂದ ಜುಲೈ 20ರವರೆಗೆ ಹಿಂದೂಪುರ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ - ಹಿಂದೂಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲುಗಳು ತನ್ನ ಪ್ರಯಾಣವನ್ನು ಹಿಂದೂಪುರದಿಂದ ಹೊರಡಲಿದ್ದು, ಹಿಂದೂಪುರಕ್ಕೆ ಕೊನೆಯಾಗಿಸಲಿದೆ.
2. ರೈಲುಗಳ ಸಂಖ್ಯೆ 06595/06596 ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ-ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜುಲೈ 13ರಿಂದ ಜುಲೈ 20ರವರೆಗೆ ಹಿಂದೂಪುರ-ಧರ್ಮಾವರಂ-ಹಿಂದೂಪುರ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲುಗಳು ತನ್ನ ಪ್ರಯಾಣವನ್ನು ಹಿಂದೂಪುರದಿಂದ ಹೊರಡುವುದು ಮತ್ತು ಕೊನೆಗೊಳಿಸಲಿದೆ.
ಬನ್ನಿಕೊಪ್ಪ ನಿಲ್ದಾಣದಲ್ಲಿ ನಿಲುಗಡೆ ಇಲ್ಲ
ಅಗತ್ಯ ಕಾಮಗಾರಿಯ ನಿಮಿತ್ತ ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಬನ್ನಿಕೊಪ್ಪ ದೃಷ್ಟಿಯಿಂದ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ 10 ದಿನಗಳ ಕಾಲ ಪ್ಲಾಟ್‌ಫಾರ್ಮ್-4 ಸ್ಥಗಿತಗೊಳಿಸುವುದರಿಂದ ಬನ್ನಿಕೊಪ್ಪ ನಿಲ್ದಾಣಗದಲ್ಲಿ ಹಲವು ರೈಲುಗಳ ನಿಲುಗಡೆ ಸ್ಥಗಿತವಾಗಲಿದೆ.
1) ರೈಲು ಸಂಖ್ಯೆ 07394 ಎಸ್ಎಸ್ಎಸ್ ಹುಬ್ಬಳ್ಳಿ - ಹೊಸಪೇಟೆ ಡೆಮು ಜುಲೈ 16 ರವರೆಗೆ ನಿಲುಗಡೆ ಇರುವುದಿಲ್ಲ.
2) ರೈಲು ಸಂಖ್ಯೆ 07658 ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ವಿಶೇಷ ರೈಲು ಜುಲೈ 12 ರಿಂದ 21ರವರೆಗೆ ನಿಲುಗಡೆ ಇರುವುದಿಲ್ಲ.
3) ರೈಲು ಸಂಖ್ಯೆ 07337 ಎಸ್ಎಸ್ಎಸ್ ಹುಬ್ಬಳ್ಳಿ-ಗುಂತಕಲ್ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ.
4) ರೈಲು ಸಂಖ್ಯೆ 07381 ಎಸ್ಎಸ್ಎಸ್ ಹುಬ್ಬಳ್ಳಿ-ಕಾರಟಗಿ ವಿಶೇಷ ರೈಲು ಜುಲೈ 12 ರಿಂದ 21ರವರೆಗೆ.
5) ರೈಲು ಸಂಖ್ಯೆ 17303 ಎಸ್ಎಸ್ಎಸ್ ಹುಬ್ಬಳ್ಳಿ-ಕಾರಟಗಿ ವಿಶೇಷ ರೈಲು ಜುಲೈ 12 ರಿಂದ 21 ರವರೆಗೆ. ಈ ರೈಲುಗಳು ತಾತ್ಕಾಲಿಕವಾಗಿ ನಿಲುಗಡೆ ಇರುವುದಿಲ್ಲ.
ಈ ರೈಲುಗಳ ನಿಯಂತ್ರಣ
ರಾಮಗಾರಿ, ಹೊಸದುರ್ಗ ರಸ್ತೆ, ಅಜ್ಜಂಪುರ ಮತ್ತು ಚಿಕ್ಕಜಾಜೂರು ನಿಲ್ದಾಣದಲ್ಲಿ ಹಳಿ ದುರಸ್ಥಿಯ ತುರ್ತು ಕಾಮಗಾರಿಯ ಸಲುವಾಗಿ ಹಲವು ರೈಲುಗಳನ್ನು ಮಾರ್ಗ ಮಧ್ಯ ನಿಯಂತ್ರಣ ಮತ್ತು ತಡವಾಗಿ ಪ್ರಾರಂಭಿಸಲಾಗುತ್ತದೆ.
ಜುಲೈ 14 ಮತ್ತು 15ರಂದು ಅರಸೀಕೆರೆಯಿಂದ ಪ್ರಾರಂಭಿಸುವ ರೈಲು ಸಂಖ್ಯೆ 16123 ಅರಸೀಕೆರೆ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 70 ನಿಮಿಷಗಳ ಕಾಲ ನಿಯಂತ್ರಿಲಸಲಾಗುತ್ತದೆ.
ಜುಲೈ 19 ಮತ್ತು 26 ರಂದು ಬೆಂಗಳೂರಿನಿಂದ ಪ್ರಾರಂಭಿಸುವ ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು -ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಕೆಎಸ್‌ಆರ್ ಬೆಂಗಳೂರಿನಲ್ಲಿ 45 ನಿಮಿಷ ತಡವಾಗಿ ಮತ್ತು 100 ನಿಮಿಷ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.
ಬಳ್ಳೆಕರೆ ಮತ್ತು ಕಡೂರು ನಿಲ್ದಾಣಗಳ ರೈಲ್ವೆ ಸಂಬಂಧಿತ ಕಾಮಗಾರಿಯ ಸಲುವಾಗಿ 3 ಗಂಟೆಗಳ ಕಾಲ ರೈಲುಗಳನ್ನು ನಿಯಂತ್ರಿಸಲಾಗುತ್ತದೆ. ಜುಲೈ 13 ರಿಂದ 18ರವರೆಗೆ ಮತ್ತು ಜುಲೈ 20ರಿಂದ 25ರವರೆಗೆ ಹುಬ್ಬಳ್ಳಿಯಿಂದ ಪ್ರಾರಂಭಿಸುವ ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ರೈಲನ್ನು 60 ನಿಮಿಷ ತಡವಾಗಿ ಮತ್ತು 20 ನಿಮಿಷ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.
ಜುಲೈ 17ರಿಂದ 24ರವರೆಗೆ ಹಜರತ್ ನಿಜಾಮುದ್ದಿನ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದಿನ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತದೆ.












Click it and Unblock the Notifications