Get Updates
Get notified of breaking news, exclusive insights, and must-see stories!

Davanagere Travel Guide: ದಾವಣಗೆರೆ ಜಿಲ್ಲೆಯಲ್ಲಿವೆ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳು

Davanagere Travel Guide: ಕರ್ನಾಟಕದಲ್ಲಿರುವ ಒಂದೊಂದು ಜಿಲ್ಲೆಗಳು ಒಂದೊಂದು ರೀತಿಯಲ್ಲಿ ಪ್ರಸಿದ್ಧಿ ಪಡೆದಿವೆ. ಹಾಗೆಯೇ ದಾವಣಗೆರೆಯನ್ನು ಮಧ್ಯಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಇನ್ನೂ ಹಲವು ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಾಗೆಯೇ ಈ ಜಿಲ್ಲಯು ಇತಿಹಾಸ ಪ್ರಸಿದ್ಧ ತಾಣಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಹಾಗಾದ್ರೆ ಯಾವೆಲ್ಲಾ ತಣಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಾಮಾನ್ಯವಾಗಿ ದಾವಣಗೆರೆಯನ್ನು ಬೆಣ್ಣೆನಗರಿ ಅಂತಲೇ ಕರೆಯಲಾಗುತ್ತದೆ. ಇಲ್ಲಿಗೆ ಬಂದವರು ಬೆಣ್ಣೆ ದೋಸೆ, ಮಿರ್ಚಿ, ಮಂಡಕ್ಕಿ ಸವಿಯದೇ ಹಿಂದಿರುಗುವುದಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಕೂಡ ಕಾಣಬಹುದಾಗಿದೆ.

Historical Tourist Spots in Davanagere District

ಗ್ಲಾಸ್‌ ಹೌಸ್‌: ದಾವಣಗೆರೆಯಲ್ಲಿನ ಗ್ಲಾಸ್ ಹೌಸ್ ಏಷ್ಯಾ ಖಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಲ್ಲದೆ, ಭಾರತದ ಎರಡನೇ ಅತೀ ದೊಡ್ಡ ಗಾಜಿನ ಮನೆ ಎಂಬ ಖ್ಯಾತಿಯನ್ನೂ ಪಡೆದಿದೆ. ದಾವಣಗೆರೆಯಲ್ಲಿ ಮೈದೆಳೆದಿರುವ ಗಾಜಿನ ಮನೆ ಅಥವಾ ಗ್ಲಾಸ್ ಹೌಸ್ ನೋಡಲು ಬರಬಹುದು.

ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಈ ಗಾಜಿನ ಮನೆ ಇರುವುದು ದಾವಣಗೆರೆ-ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ. ಇಲ್ಲಿಗೆ ಬಂದರೆ ಮನಸಿಗೆ ನೆಮ್ಮದಿ ಸಿಗುದುರಲ್ಲಿ ಯಾವುದೇ ಅನುಮಾನವಿಲ್ಲ. ವಿದೇಶಿ ಗಿಡಗಳು, ಗಾಜಿನ ಮನೆ ಆಕಾರವನ್ನು ನೋಡಿ ಸಂತೋಷಪಡಬಹುದು. ದಾವಣಗೆರೆಯಿಂದ ಕೇವಲ ಏಳೆಂಟು ಕಿಲೋ ಮೀಟರ್ ದೂರ ಕ್ರಮಿಸಿದರೆ ಈ ಗಾಜಿನ ಮನೆ ಸಿಗುತ್ತದೆ.

ಶಾಮನೂರು ಸೇತುವೆ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗಬಹುದು. ಇನ್ನು ಹರಿಹರ ತಾಲೂಕಿನಿಂದ ಬರುವವರಿಗೆ ಸುಲಭ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹರಿಹರದಿಂದ ಕೇವಲ 8 ಕಿಲೋ ಮೀಟರ್‌ವರೆಗೆ ಕ್ರಮಿಸಿದರೆ ಗಾಜಿನ ಮನೆ ಸಿಗುತ್ತದೆ. ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿಗೆ ಭೇಟಿ ನೀಡಿ. ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯಬಹುದು.

ಸೂಳೆಕೆರೆ: ಚನ್ನಗಿರಿ ತಾಲ್ಲೂಕಿನ ಶಾಂತಿ ಸಾಗರ ಅಥವಾ ಸೂಳೆಕೆರೆ ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೆರೆ. ದಾವಣಗೆರೆಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಶಾಂತಿಸಾಗರಕ್ಕೆ ಚನ್ನಗಿರಿಯಿಂದಲೂ ಹೋಗಬಹುದು. ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ನೀರೋ ನೀರು.

ಸೂಳೆಕೆರೆಯಿಂದ ಸ್ವಲ್ಪ ಮುಂದೆ ಅಂದರೆ ಸುಮಾರು 1 ಕಿಲೋ ಮೀಟರ್ ಹೋದರೆ ಬೋಟಿಂಗ್ ವ್ಯವಸ್ಥೆ ಕೂಡ ಇದೆ. ಎಲ್ಲಾ ರೀತಿಯಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಗಾರ್ಡ್‌ಗಳೂ ಕೂಡ ಇರುತ್ತಾರೆ. ವಿಸ್ತಾರವಾದ ನೀರಿನೊಳಗೆ ಬೋಟಿಂಗ್ ಮಾಡುವ ಮೂಲಕ ಆನಂದಿಸಬಹುದು.

ಸಂತೆಬೆನ್ನೂರಿನ ಪುಷ್ಕರಣಿ: ಮತ್ತೊಂದು ತಾಣ ಚನ್ನಗಿರಿ ತಾಲೂಕಿನಲ್ಲಿದೆ. ಸಂತೆಬೆನ್ನೂರಿನ ಐತಿಹಾಸಿಕ ಸುಂದರ ಪುಷ್ಕರಣಿ ತುಂಬಾ ವಿಶೇಷತೆಗಳನ್ನು ಹೊಂದಿದೆ. ಚನ್ನಗಿರಿಯಿಂದ 23 ಕಿಲೋ ಮೀಟರ್ ಹಾಗೂ ದಾವಣಗೆರೆಯಿಂದ 36 ಕಿಲೋ ಮೀಟರ್ ದೂರದಲ್ಲಿದೆ. ಇದು ಶಾಸನಸ್ತ ಐತಿಹಾಸಿಕ ಸ್ಥಳವೂ ಹೌದು.

ಬಸವಾಪಟ್ಟಣದ ಒಡೆಯರು ಸಂತೆಬೆನ್ನೂರು ಗ್ರಾಮವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ದಾಖಲಾತಿಗಳು ಇಲ್ಲಿವೆ. 16ನೇ ಶತಮಾನದ ಮಧ್ಯ ಭಾಗದಲ್ಲಿ ವಿಜಯನಗರ ಅರಸರ ಅಧೀನರಾಗಿದ್ದ ಪಾಳೇಗಾರರು ಆ ಮೇಲೆ ಸ್ವತಂತ್ರವಾಗಿ ಈ ಪಾಳೆಯ ಪಟ್ಟಿಗಳನ್ನು ಆಳ್ವಿಕೆ ಮಾಡಿದ್ದಾರೆ. ಕ್ರಿ. ಶ. 1783ರಲ್ಲಿ ಭಾರತದ ಸರ್ವೆಯರ್ ಜನರಲ್ ಬರೆಸಿದ ಸಂತೆಬೆನ್ನೂರು ಸೀಮೆ ಇದು.

ಇನ್ನು ಸಂತೆಬೆನ್ನೂರಿನ ಸುಂದರ ಪುಷ್ಕರಣಿ ನೋಡಲು ಚೆಂದವೋ ಚೆಂದ. 238 ಅಡಿ ಉದ್ದ, 245 ಅಡಿ ಅಗಲ ಇದ್ದು, 30 ಅಡಿ ಆಳವಾಗಿದೆ. ಇದಕ್ಕೆ ಸ್ಥಳೀಯರು ಹೊಂಡ ಎಂಬುದಾಗಿಯೂ ಕರೆಯುತ್ತಾರೆ. ಈ ಹೊಂಡದ ಸುತ್ತ 3 ಅಡಿ ಅಗಲದ ಪೌಳಿಗೋಡೆ ಇದೆ. ನಾಲ್ಕು ದಿಕ್ಕಿನಿಂದಲೂ ಹೊಂಡಕ್ಕೆ ಇಳಿಯಲು ಪಾವಟಿಗೆಗಳಿವೆ. ಈ ಕೊಳ ಕಟ್ಟಿದಾಗ ಹೊಂಡ ಸುತ್ತ ಅಷ್ಟ ದಿಕ್ಕುಗಳಲ್ಲಿಯೂ ಅಷ್ಟಮಂಟಪಗಳಿದ್ದು, ಈಗ ಆರು ಮಂಟಪಗಳು ಮಾತ್ರ ಉಳಿದಿವೆ.

ಮುಖ್ಯ ಪ್ರವೇಶ ದ್ವಾರದಿಂದ ಕೊಳಕ್ಕೆ ಇಳಿಯಲು 52 ದೊಡ್ಡ ದೊಡ್ಡ ಪಾವಟಿಗಳಿವೆ. ಉಳಿದ ಮೂರು ಭಾಗದಲ್ಲಿ 44 ಮೆಟ್ಟಿಲುಗಳಿವೆ. ಕಲ್ಯಾಣಿಯ ತಳಭಾಗದ ಉದ್ದ 150 ಅಡಿ, ಅಗಲ 160 ಅಡಿ ಇದ್ದು, ಮೊದಲು ಈ ಹೊಂಡದಿಂದಲೇ ಕುಡಿಯುವ ನೀರು ಆಸರೆಯಾಗಿತ್ತು. ಇನ್ನು ಇಲ್ಲಿನ ಮಂಟಪಗಳ ಮಧ್ಯೆ ಭವ್ಯ ಹಾಗೂ ನಯನ ಮನೋಹರವಾದ ವಸಂತಮಂಟಪವಿದೆ. ಇದಕ್ಕೆ ಸ್ಥಳೀಯರು ಕಾರಂಜಿ ಮಂಟಪ ಅಂತಾನೂ ಹೆಸರಿಸುತ್ತಾರೆ. ಇದೂ ಸಹ ಪ್ರವಾಸಿಗರ ಕಣ್ಮನ ಸೆಳೆಯುವ ಐತಿಹಾಸಿಕ ತಾಣವಾಗಿದೆ.

ದುರ್ಗಾಂಬಿಕಾ ದೇವಸ್ಥಾನ: ದಾವಣಗೆರೆ ನಗರದ ಶಕ್ತಿ ದೇವತೆ ದುರ್ಗಾಂಬಿಕೆ ತಾಯಿ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ದೇವತೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದೇಗುಲದಲ್ಲಿ ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಹರಿಹರೇಶ್ವರ ದೇವಾಲಯ: ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನವು ದಾವಣಗೆರೆಯಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದ ಹರಹರದಲ್ಲಿದೆ. ಇಲ್ಲಿನ ದೇವರ ವಿಗ್ರವು ಪೂರ್ವಭಿಮುಖವಾಗಿ ನಿಂತಿದ್ದು, ಮೂರ್ತಿಯ ಬಲಭಾಗವು ಪರಮೇಶ್ವರನೆಂದು (ಹರ), ಎಡ ಭಾಗವು ವಿಷ್ಣುವಿನದೆಂದು (ಹರಿ) ಎರಡು ಭಾಗ ಸೇರಿ ಹರಿಹರೇಶ್ವರನಾಡಿ ಒಡಮೂಡಿದ ಸ್ವಯಂಭುಮೂರ್ತಿ, ಹರನ ಭಾಗದಲ್ಲಿ ತ್ರಿಶೂಲವಿದ್ದು, ತಲೆ ಜಟಾಧಾರಿಯಾಗಿ ಗಂಗೆ ಮತ್ತು ಚಂದ್ರನಿಂದ ಕೂಡಿದೆ.

ಶಂಖಚಕ್ರವನ್ನು ಕೂಡ ಇಲ್ಲಿ ಕಾಣಬಹುದಾಗಿದ್ದು, ಬಲಗಿವಿಯಲ್ಲಿ ನಾಗಭೂಷಣ, ಎಡಗಿವಿಯಲ್ಲಿ ಕರ್ಣಕುಂಡಲಗಳಿವೆ. ಹರಿ ಕಿರೀಟ, ರುಂಡಮಾಲೆ, ವೈಜಯಂತಿಮಾಲೆಗಳನ್ನು ಧರಿಸಿದ್ದಾನೆ. ಬಲಗಡೆ ಗಣಪತಿ ಪಾರ್ವತಿಯರ, ಎಡಭಾಗದಲ್ಲಿ ಲಕ್ಷ್ಮೀದೇವಿ, ಋಷ್ಯಶೃಂಗ ಋಷಿಗಳ ವಿಗ್ರಹಗಳಿವೆ. ಹರಿಹರೇಶ್ವರನ ದೇವಾಲಯದ ಆವರಣದಲ್ಲಿ ಅಮೃತಶಿಲೆಯ ಪೇಶ್ವೆಗಳ ಕಾಲದ ಮಹಿಷ ಮರ್ಧಿನಿ ವಿಗ್ರಹವಿದೆ. ದಕ್ಷಿಣದಲ್ಲಿ ಪಾರ್ವತಿ ದೇವಾಲಯವಿತ್ತೆಂದು ಹಿರಿಕರು ಹೇಳುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+