ಗೋವಾಗೆ ಹೋಗುವ ಮುನ್ನ ಎಚ್ಚರ: ಗೋವಾ ಸರ್ಕಾರ ಹೊಸ ನಿಯಮ
ಬೇಸಿಗೆ ರಜೆಗಳು ಶುರುವಾಗಿದೆ. ಈ ದಿನಗಳಲ್ಲಿ ಬಹುತೇಕ ಜನ ಆಯ್ಕೆ ಮಾಡಿಕೊಳ್ಳುವುದು ಗೋವಾ ಪ್ರವಾಸವನ್ನ. ಆದರೆ ನೀವೇನಾದ್ರು ಗೋವಾ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಈ ಸುದ್ದಿ ಓದಲೇಬೇಕು. ಯಾಕೆಂದರೆ ಗೋವಾ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವನ್ನು ಪಾಲಿಸದೇ ಇದ್ದರೆ ಜೈಲಿಗೆ ಕಳುಹಿಸುವುದು ಗ್ಯಾರಂಟಿ.
ಹೌದು ಗೋವಾಕ್ಕೆ ಪ್ರವಾಸಕ್ಕೆಂದು ಹೋಗುವ ಪ್ರವಾಸಿಗರು ವಾಹನದಲ್ಲಿ ಸ್ಟೌ ಹಾಗೂ ಸಿಲಿಂಡರ್ ಇಟ್ಟುಕೊಂಡು ಹೋಗುವಂತಿಲ್ಲ. ಕಂಡಕಂಡಲ್ಲಿ ಅಡುಗೆ ಮಾಡಿಕೊಂಡು ಸೇವಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಪಾಲಿಸದೇ ಇದ್ದರೆ ಅಂತವರನ್ನು ಜೈಲಿಗೆ ಕಳುಹಿಸಲಾಗುತ್ತದೆ.

ಗೋವಾ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ ವಾಹನದಲ್ಲಿ ಸ್ಟೌ ಹಾಗೂ ಸಿಲಿಂಡರ್ ಇಟ್ಟುಕೊಂಡಿದ್ದರೆ ವಾಹನವನ್ನು ಸೀಜ್ ಮಾಡಲಾಗುವುದು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಗೋವಾ ಸರ್ಕಾರ ಪರಿಸರ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆದರೆ ಈ ನಿಮಯದಿಂದಾಗಿ ಗೋವಾ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತೊಂದರೆಯಾಗಿದ್ದು ಮಾತ್ರವಲ್ಲ ಗೋವಾ ಸರ್ಕಾರ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಈ ಹೊಸ ನಿಯಮ ಜಾರಿ ಮಾಡಿದಾಗಿನಿಂದ ಗೋವಾಕ್ಕೆ ಹೋಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಗೋವಾ ಸರ್ಕಾರ ಈ ನಿಯಮ ಜಾರಿಗೆ ತರುವುದರ ಜೊತೆಗೆ ನೇರವಾಗಿ ಪರಿಣಾಮವನ್ನು ಎದುರಿಸುವಂತಾಗಿದೆ.

ಸ್ಥಳೀಯರು ಕೂಡ ಈ ನಿಯಮ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಬೇರೆ ರಾಜ್ಯಗಳಿಂದ ಹೋಗುವವರಿಗೆ ಗೋವಾ ಆಹಾರ ಸರಿ ಹೊಂದುವುದಿಲ್ಲ. ಜೊತೆಗೆ ಎಲ್ಲಂದರಲ್ಲಿ ಆಹಾರ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಹೀಗಾಗಿ ಅದೆಷ್ಟೋ ಜನ ತಮಗಿಷ್ಟವಾದ ಆಹಾರವನ್ನು ಬೇಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡೇ ಗೋವಾ ಪ್ರವಾಸಕ್ಕೆ ತೆರಳುತ್ತಾರೆ. ಗುಂಪು ಗುಂಪಾಗಿ ಸ್ನೇಹಿತರು, ಕುಟುಂಬಸ್ಥರು ಅಲ್ಲದೆ ಕೆಲ ಟೂರ್ ಎಜೆನ್ಸಿಗಳು ಖರ್ಚನ್ನು ತಪ್ಪಿಸಲು ಪ್ರವಾಸದ ನಡುವೆ ಆಹಾರವನ್ನು ಮಾಡಿಕೊಳ್ಳುತ್ತಾರೆ.

ಆದರೆ ಗೋವಾ ಸರ್ಕಾರದ ಈ ನಿಯಮ ಪ್ರವಾಸ ಬರುವವರ ಸಂಖ್ಯೆಯನ್ನು ತೀರಾ ಕಡಿಮೆ ಮಾಡಿದೆ. ಈ ನಿಯಮದ ಬದಲಿಗೆ ಗೋವಾ ಸರ್ಕಾರ ಸ್ವಚ್ಚತೆ ಕಾಪಾಡದವರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಸ್ವಚ್ಚತೆ ಹೆಸರಿನಲ್ಲಿ ಸ್ಥಳೀಯ ದುಬಾರಿ ಹೋಟೆಲ್, ರೆಸ್ಟೋರೆಂಟ್ ಹೊಟ್ಟೆ ತುಂಬಿಸಲು ಹೋಗಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ.

ಈ ನಿಯಮದ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಬೇರೆ ರಾಜ್ಯದಿಂದ ಬರುವಾಗ ಎಲ್ಲವನ್ನೂ ತೆಗೆದುಕೊಂಡು ಬರುತ್ತೇವೆ. ಸ್ವಚ್ಚತೆಯ ಬಗ್ಗೆ ನಿಯಮ ತರಲಿ. ಸ್ವಚ್ಚತೆ ಕಾಪಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಸ್ಟೌ ಸಿಲಿಂಡರ್ ತಂದು ಅಡುಗೆ ಮಾಡಿಕೊಳ್ಳುವುದೇ ಬೇಡ ಅಂದರೆ ಹೇಗೆ? ನಮಗೆ ಇಲ್ಲಿನ ಆಹಾರ ಇಷ್ಟವಾಗುವುದಿಲ್ಲ. ಆಹಾರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲು ನಮಗೆ ಸಾಮಾರ್ಥ್ಯ ಇಲ್ಲ ಎಂದಿದ್ದಾರೆ.
ಈ ನಿಯಮ ಜಾರಿಯಾದಾಗಿನಿಂದ ಗೋವಾಕ್ಕೆ ಹೋಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಈ ನಿಯಮ ಗೊತ್ತಿಲ್ಲದೆ ತೆರಳುವ ಅದೆಷ್ಟೋ ಪ್ರವಾಸಿಗರು ಕಾರವಾರದಲ್ಲಿ ಅಡುಗೆ ಮಾಡಿಕೊಂಡು ತಮ್ಮ ಪ್ರವಾಸ ಮುಂದುರೆಸುವಂತಾಗಿದೆ. ಅಲ್ಲದೆ ಕೆಲ ಟೂರ್ಸ್ ಟ್ರಾವೆಲ್ ಎಜೆನ್ಸಿಗಳಿಗೂ ಈ ನಿಯಮ ಭಾರೀ ತೊಂದರೆಯನ್ನುಂಟು ಮಾಡಿದೆ.
ಒಟ್ಟಿನಲ್ಲಿ ಗೋವಾ ಸರ್ಕಾರದಿಂದ ಪ್ರವಾಸಿಗರಿಗೆ ಮಾತ್ರ ತೊಂದರೆಯಾಗಿಲ್ಲ ಬದಲಿಗೆ ಗೋವಾ ಪ್ರವಾಸೋದ್ಯಮಕ್ಕೂ ಭಾರೀ ದೊಡ್ಡ ಹೊಡೆತ ನೀಡಿದ್ದು ಸುಳ್ಳಲ್ಲ. ನೀವೇನಾದ್ರು ಗೋವಾ ಪ್ರವಾಸ ಹೋಗುತ್ತಿದ್ದರೆ ಇದರ ಬಗ್ಗೆ ಜಾಗರೂಕರಾಗಿರಿ.












Click it and Unblock the Notifications