ಗುಂಡ್ಲುಪೇಟೆಯಲ್ಲಿದೆ ಅಚ್ಚರಿಯ ಸಮಾಧಿ: ಈ ಸಮಾಧಿ ಹಿಂದಿದೆ ಮಹಿಳಾ ಸಾಧಕಿಯ ಕಥೆ!
ಚಾಮರಾಜನಗರ, ಜೂನ್ 06: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿರುವ ಇದೊಂದು ಸಮಾಧಿ ಅಚ್ಚರಿ ಮೂಡಿಸುತ್ತದೆ. ಜೊತೆಗೆ ಸಮಾಧಿ ಯಾರದ್ದು? ಎಂದು ತಿಳಿದ ತಕ್ಷಣವೇ ಇವತ್ತಿನ ಮಹಿಳಾ ರಾಜಕಾರಣಿಗಳಿಗೆ ಬದುಕಿದರೆ ಅವರಂತೆ ಬದುಕ ಬೇಕು ಎಂಬ ಉತ್ಸಾಹ ಮೂಡುತ್ತದೆ.
ಹಾಗೆನೋಡಿದರೆ ದೇಶದ ರಾಜಕಾರಣದಲ್ಲಿ ಮಹೋನ್ನತ ಸಾಧನೆಯನ್ನು ಹಲವು ಮಹಿಳೆಯರು ಮಾಡಿದ್ದು, ಮಾಡುತ್ತಲೇ ಇದ್ದಾರೆ. ಆದರೂ ರಾಜಕೀಯದಲ್ಲಿ ಮಹಿಳೆಯರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇದೆ. ಇವತ್ತು ಮಹಿಳೆಯರಿಗೆ ಮುಕ್ತ ವಾತಾವರಣವಿದೆ. ಆದರೆ ಮಹಿಳೆಯರು ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದ ಕಾಲದಲ್ಲಿಯೇ ರಾಜಕೀಯಕ್ಕೆ ಧುಮುಕಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ವಿಧಾನಸಭೆಯ ಸ್ಪೀಕರ್ ಆಗುವುದೆಂದರೆ ಅದು ಸುಲಭದ ಮಾತಲ್ಲ.

ಇಂತಹ ಸಾಧನೆ ಮಾಡಿದವರು ದಿವಂಗತ ಕೆ.ಎಸ್.ನಾಗರತ್ನಮ್ಮರವರು. ಇವರನ್ನು ಜನ ಅಮ್ಮಾ ಎಂದೇ ಕರೆಯುತ್ತಿದ್ದರು. ಸ್ಪೀಕರ್ ವಿಚಾರ ಬಂದಾಗಲೆಲ್ಲ ಅವರ ನೆನಪು ಮಾಡಿಕೊಳ್ಳುತ್ತೇವೆ, ಏಕೆಂದರೆ ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆ ಅವರಿಗಿದೆ. ಅವರು ಇವತ್ತು ನಮ್ಮೊಂದಿಗಿಲ್ಲ. ಆದರೆ ಅವರ ಸಮಾಧಿ ಇವತ್ತಿಗೂ ಮಹಿಳಾ ರಾಜಕಾರಣಗಳಿಗೆ ಸ್ಪೂರ್ತಿಯ ಸೆಲೆಯಾಗಿದೆ. ಅವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ ಜನರಿಗೆ ಅವರ ಸಾಧನೆಯನ್ನು ಸಾರಿ ಹೇಳುವ ಕೆಲಸ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಆದರೆ ಅವರ ಸಮಾಧಿ ಎಲ್ಲರ ಸಮಾಧಿಯಂತೆ ಉಳಿದು ಹೋಗಿರುವುದು ಬೇಸರದ ಸಂಗತಿಯಾಗಿದೆ.
ಕೆ.ಎಸ್.ನಾಗರತ್ನಮ್ಮರವರ ರಾಜಕೀಯ ಇತಿಹಾಸ
ಬಹಳಷ್ಟು ಜನ ನಾಗರತ್ನಮ್ಮ ಅವರ ಸಮಾಧಿಯನ್ನು ಅಚ್ಚರಿಯಿಂದ ನೋಡುತ್ತಾರೆ. ಅದು ಕೇವಲ ಸಮಾಧಿಯಾಗಿ ಉಳಿಯದೆ ಸ್ಮಾರಕವಾಗಿ ಗಮನಸೆಳೆಯುತ್ತಿದೆ. ಹೀಗಾಗಿ ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತಾರೆ. ಇವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ ಸಾಧನೆಯನ್ನು ಜಗತ್ತಿಗೆ ತಿಳಿಸುವ ಕೆಲಸವನ್ನು ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅದು ಇದುವರೆಗೂ ಸಾಧ್ಯವಾಗಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

ಇನ್ನು ಕೆ.ಎಸ್.ನಾಗರತ್ನಮ್ಮ ಅವರ ರಾಜಕೀಯ ಬದುಕಿನ ಬಗ್ಗೆ ನೋಡಿದ್ದೇ ಆದರೆ ಅವರ ಸಾಧನೆ ಗಮನಾರ್ಹವಾಗಿದೆ. 1957, 1962, 1967, 1972, 1979, 1983, 1989ರಲ್ಲಿ ನಡೆದ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ 7 ಬಾರಿ ಶಾಸಕರಾಗಿ 2 ದಶಕಗಳ ಕಾಲ ರಾಜಕಾರಣ ಮಾಡಿದ ಸಾಧಕಿ ಮಹಿಳೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
1972 ರಿಂದ 1978 ರವರೆಗೆ ಕರ್ನಾಟಕದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದ ಮೊಟ್ಟ ಮೊದಲ ಮಹಿಳಾ ಸ್ಪೀಕರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. 1985ರಲ್ಲಿ ಪ್ರತಿಪಕ್ಷದ ನಾಯಕಿಯಾಗಿ, 1989ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪರವರ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಜ್ಯದ ಮೊದಲ ಮಹಿಳಾ ಸ್ಪೀಕರ್
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ನಾಗರತ್ನಮ್ಮ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷರಾಗಿದ್ದರು ಮತ್ತು ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು 1957 ರಲ್ಲಿ ಗುಂಡ್ಲುಪೇಟೆ ಕ್ಷೇತ್ರವನ್ನು ರಚಿಸಿದಾಗ, ಅವರು ಸ್ವತಂತ್ರ ರಾಜಕಾರಣಿಯಾಗಿ ಮೈಸೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಲ್ಲದೆ, 24,955 ಮತಗಳನ್ನು ಪಡೆಯುವ ಮೂಲಕ ಎದುರಾಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಚ್.ಕೆ.ಶಿವರುದ್ರಪ್ಪ ಅವರನ್ನು ಸೋಲಿಸಿದ್ದರು. 1967ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ಸ್ಪರ್ಧಿಸಿ ಗೆಲುವು ಕಂಡರು. 1972 ರಿಂದ 1978 ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು ಮತ್ತು ಸದನದ ಮೊದಲ ಮಹಿಳಾ ಸ್ಪೀಕರ್ ಆದರು.
ಸಚಿವೆಯಾಗಿ, ಸ್ಪೀಕರ್ ಆಗಿ ಕೆಲಸ ಮಾಡಿರುವ ನಾಗರತ್ನಮ್ಮ ಅವರು ತಮ್ಮ ಜಿಲ್ಲೆಗೆ ತಾಲೂಕಿಗೆ ಏನು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ ಎಂಬುದನ್ನು ನೋಡಿದ್ದೇ ಆದರೆ ಅವರ ಅಧಿಕಾರವಧಿಯಲ್ಲಿ ಗುಂಡ್ಲುಪೇಟೆ ಹಲವು ರೀತಿಯ ಅಭಿವೃದ್ಧಿಯನ್ನು ಕಂಡಿದ್ದಾಗಿ ಜನ ಹೇಳುತ್ತಾರೆ. ನಲ್ಲೂರು ಜಲಾಶಯ ಹಾಗೂ ಶಿವಪುರ ಗ್ರಾಮದಲ್ಲಿ ಕಲ್ಕಟ್ಟಕೆರೆ ಇವರ ಅಧಿಕಾರವಧಿಯಲ್ಲಿ ನಿರ್ಮಾಣವಾಗಿದೆ.
ರಾಜಕೀಯ ಬದುಕಿನ ಕಥೆ ಹೇಳುತ್ತಿದೆ
ಇನ್ನೊಂದೆಡೆ ಕೆ.ಎಸ್.ನಾಗರತ್ನಮ್ಮ ಅವರ ಮೇಲಿನ ಅಭಿಮಾನದಿಂದಾಗಿ ಕಬ್ಬಳ್ಳಿ ಸಾಹುಕಾರ್ ಕೆ.ಸಿ.ಸುಬ್ಬಣ್ಣ ಹೆಸರಿನಲ್ಲಿ ಪಟ್ಟಣದಲ್ಲಿ ಸಾರ್ವಜನಕರ ಆಸ್ಪತ್ರೆಯನ್ನು ತೆರೆಯಲಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜನ್ನು ಸ್ಥಾಪಿಸಲಾಗಿದೆ. ಕಾಂಗ್ರೆಸ್ ನ್ನು ಪ್ರತಿನಿಧಿಸುತ್ತಿದ್ದ ಕೆ.ಎಸ್.ನಾಗರತ್ಮಮ್ಮ ಅವರನ್ನು ಜೊತೆಗೆ ಜನ 'ಅಮ್ಮಾ' ಎಂದೇ ಕರೆಯುತ್ತಿದ್ದರು. ಅವರು 17 ಅಕ್ಟೋಬರ್ 1993ರಲ್ಲಿ ನಿಧನರಾದ ಬಳಿಕ ನೆನಪಿಗಾಗಿ ಕಬ್ಬಳ್ಳಿಯಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದ್ದು, ಈ ಸಮಾಧಿ ನಾಗರತ್ನಮ್ಮ ಅವರ ರಾಜಕೀಯ ಬದುಕಿನ ಕಥೆಯನ್ನು ಹೇಳುತ್ತಾ ನಿಂತಿದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications