Get Updates
Get notified of breaking news, exclusive insights, and must-see stories!

ಪ್ರವಾಸಿಗರು, ಚಾರಣಿಗರ ಗಮನಕ್ಕೆ: ಈ ಜಲಪಾತಗಳ ಭೇಟಿಗೆ ನಿಷೇಧ

ಬೆಳಗಾವಿ, ಜೂನ್ 17: ಮಳೆಗಾಲ ಆರಂಭವಾಗಿದೆ ಹಲವು ಜಲಪಾತಗಳಿಗೆ ಜೀವಕಳೆ ಬಂದಿದೆ. ರಜೆ ಹಾಕಿ ಪ್ರವಾಸ, ಚಾರಣ ಕೈಗೊಳ್ಳುವವರ ಗಮನಕ್ಕೆ ಪ್ರಮುಖವಾದ ಮಾಹಿತಿಯೊಂದಿದೆ. ಹಲವು ಜಲಪಾತಗಳನ್ನು ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ನೀವು ಪ್ರವಾಸದ ಯೋಜನೆ ತಯಾರಿಸಿದ್ದರೆ ಅದನ್ನು ಬದಲಾಯಿಸುವುದು ಉತ್ತಮ.

ಅರಣ್ಯ ಇಲಾಖೆ ಬೆಳಗಾವಿ ಜಿಲ್ಲೆಯ ಖಾನಾಪುರದ ಎಲ್ಲಾ ಜಲಪಾತಗಳ ಭೇಟಿಗೆ ನಿಷೇಧ ಹೇರಿದೆ. ಮುಂದಿನ ಆದೇಶದ ತನಕ ಯಾವುದೇ ಜಲಪಾತಗಳನ್ನು ವೀಕ್ಷಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Entry Banned For All Waterfalls In Khanapur Belagavi

ಕರ್ನಾಟಕ ಅರಣ್ಯ ಇಲಾಖೆ, ಬೆಳಗಾವಿ ವಿಭಾಗ, ಕಣಕುಂಬಿ ವಲಯ ಈ ಕುರಿತು ಪ್ರಕಟಣೆ ಮೂಲಕ ಪ್ರವಾಸಿಗರಿಗೆ, ಚಾರಣ ಕೈಗೊಳ್ಳುವವರಿಗೆ ಮಾಹಿತಿ ನೀಡಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡುವುದು ಕರ್ನಾಟಕ ಅರಣ್ಯ ಕಾಯ್ದೆ, 1963ರ ಕಲಂ 24ರ ಪ್ರಕಾರ ಶಿಕ್ಷಾರ್ಹ ಅಪರಾಧ (ಒಂದು ವರ್ಷ ಜೈಲು ಮತ್ತು ದಂಡ). ಸೂಚನೆ ಜಲಪಾತ ವೀಕ್ಷಣೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಏಕೆ ಪ್ರವಾಸಿಗೆ ಭೇಟಿ ನಿಷೇಧ?; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಹಲವು ಜಲಪಾತಗಳಿವೆ. ಇವುಗಳಲ್ಲಿ ಕಣಕುಂಬಿ, ಚಿಗುಲೆ, ಪಾರವಾಡ, ಚಿಕಲೆ, ವಜ್ರಾ ಪ್ರಮುಖವಾದವುಗಳು. ಖಾನಾಪುರ ತಾಲೂಕಿನ ಬಹುತೇಕ ಅರಣ್ಯ ಪ್ರದೇಶಗಳು ಭೀಮಗಡ ವನ್ಯಧಾಮದ ವ್ಯಾಪ್ತಿಗೆ ಸೇರಿದ್ದು, ರಕ್ಷಿತ ಅಭಯಾರಣ್ಯ ಎಂದು ಘೋಷಣೆಯಾಗಿದೆ.

ಆದ್ದರಿಂದ ಈ ವ್ಯಾಪ್ತಿಯಲ್ಲಿರುವ ಜಲಪಾತಗಳನ್ನು ನೋಡು ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕಿದೆ. ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದು ಸೊಗಸು. ಆದರೆ ಅಲ್ಲಿಗೆ ತೆರಳುವ ಮಾರ್ಗ ಅಷ್ಟೇ ಅಪಾಯಕಾರಿ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಜಲಪಾತದ ವೀಕ್ಷಣೆಗೆ ನಿಷೇಧ ಹೇರುತ್ತದೆ.

ಹಿಂದಿನ ಹಲವು ವರ್ಷ ಜಲಪಾತ ನೋಡಲು ಆಗಮಿಸಿದ ಪ್ರವಾಸಿಗರ ಜೀವಕ್ಕೆ ಅಪಾಯ ತರುವಂತಹ ಪ್ರಕರಣಗಳು ನಡೆದಿವೆ. ಆದ್ದರಿಂದ ಮಳೆಗಾಲದ ಆರಂಭದಲ್ಲಿಯೇ ಖಾನಾಪುರ ಎಲ್ಲಾ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಸ್ಥಳೀಯ ಆಡಳಿತವೂ ಸಹ ಅರಣ್ಯ ಇಲಾಖೆ ಕ್ರಮಕ್ಕೆ ಬೆಂಬಲ ಸೂಚಿಸಿದೆ.

ಖಾನಾಪುರ ತಾಲೂಕಿನಲ್ಲಿ ಸುಮಾರು 92 ಸಾವಿರ ಹೆಕ್ಟೇರ್ ಅರಣ್ಯವಿದೆ. ಮಲಪ್ರಭಾ, ಮಹದಾಯಿ, ಮಾರ್ಕಂಡೇಯ, ಪಾಂಡರಿ ಸೇರಿದಂತೆ ವಿವಿಧ ನದಿಗಳ ಉಗಮಸ್ಥಾನವಿದೆ. ಅರಣ್ಯ ಪ್ರದೇಶದಲ್ಲಿ ಹರಿಯುವ ನದಿಗಳು ಎತ್ತರದ ಗುಡ್ಡ, ಬೆಟ್ಟಗಳಿಂದ ಧುಮ್ಮಿಕ್ಕಿ ಹಲವು ಜಲಪತಾಗಳನ್ನು ಸೃಷ್ಟಿಸಿವೆ.

ಆದರೆ ಕಾಡಿದಾದ ಕಾಡಿನಲ್ಲಿರುವ ಈ ಜಲಪಾತಗಳನ್ನು ನೋಡಲು ಹೋಗುವುದು ಅಪಾಯಕಾರಿಯಾಗಿದೆ. ಕೆಲವು ಜಲಪಾತಗಳಿಗೆ ಸಾಗುವ ಹಾದಿ ಸರಿಯಾಗಿಲ್ಲ. ಮತ್ತೆ ಕೆಲವು ಕಡೆ ವನ್ಯಜೀವಿಗಳ ದಾಳಿಯ ಭಯವಿದೆ. ಸ್ಥಳೀಯ ಪರಿಸ್ಥಿತಿ ಅರಿಯದೇ ಎಲ್ಲಿಂದಲೂ ಆಗಮಿಸುವ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಬಾರದು ಎಂದು ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ.

ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಕಾಡಿನ ಪರಿಸ್ಥಿತಿ ಭಿನ್ನವಾಗಿರುತ್ತದೆ. ತೀವ್ರವಾದ ಮಳೆಯಿಂದಾಗಿ ಹಾದಿ ಕಠಿಣವಾಗಿರುತ್ತದೆ. ಜಲಪಾತಕ್ಕೆ ಸಾಗುವ ರಸ್ತೆ ಜಾರುತ್ತದೆ. ಹಲವಾರು ವಿಷಜಂತುಗಳು ಸಹ ಸಂಚಾರ ನಡೆಸುತ್ತಿರುತ್ತವೆ. ಆದ್ದರಿಂದ ಪ್ರವಾಸಿಗರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಜಲಪಾತಗಳ ವೀಕ್ಷಣೆ ನಿಷೇಧಿಸಲಾಗಿದೆ.

ಜಲಪಾತ ನೋಡಲು ಆಗಮಿಸುವ ಪ್ರವಾಸಿಗರು, ಚಾರಣ ನಡೆಸುವವರು ಅರಣ್ಯದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತಾಜ್ಯಗಳನ್ನು ಎಸೆದು ಹೋಗುತ್ತಿದ್ದರು. ಇದರಿಂದಾಗಿ ಮಾಲಿನ್ಯ ಉಂಟಾಗುತ್ತಿತ್ತು. ಅಲ್ಲದೇ ಚಾರಣಿಗರು ದಾರಿ ತಪ್ಪಿ, ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯೂ ಇರುವುದರಿಂದ ಪ್ರವಾಸಿಗರಿಗೆ ಸದ್ಯಕ್ಕೆ ಜಲಪಾತ ನೋಡುವ ಭಾಗ್ಯವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+