Central Railway Stations: ಮಂಗಳೂರು ಸೇರಿ ಭಾರತಲ್ಲಿ ಎಷ್ಟು ಸೆಂಟ್ರಲ್ ರೈಲ್ವೆ ನಿಲ್ದಾಣಳಿವೆ ಗೊತ್ತಾ?-ಇಲ್ಲಿದೆ ಮಾಹಿತಿ
Central Railway Stations: ಭಾರತವು ಎಷ್ಟು ಸೆಂಟ್ರಲ್ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ?, ಅವುಗಳು ಎಲ್ಲೆಲ್ಲಿವೆ ಹಾಗೂ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೂರದ ಊರುಗಳಿಗೆ ಪ್ರಯಾಣ ಮಾಡುವ ಬಹುತೇಕ ಜನರು ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ದಿನದಿಂದ ದಿನಕ್ಕೆ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಎಲ್ಲಾ ಸಾರಿಗೆಗಳಿಗೂ ಹೋಲಿಕೆ ಮಾಡಿದರೆ, ಕಡಿಮೆ ದರದ ಟಿಕೆಟ್ ದೊರೆಯುವುದು ರೈಲು ಪ್ರಯಾಣದಲ್ಲಿ ಮಾತ್ರ. ಅಲ್ಲದೆ, ಹೆಚ್ಚಿನ ಸುರಕ್ಷತೆ, ಆರಾಮದಾಯಕ ಪ್ರಯಾಣ ಮಾಡಲು ಇದನ್ನೇ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಇನ್ನು ಭಾರತದಲ್ಲಿ 5 ಸೆಂಟ್ರಲ್ ರೈಲ್ವೆ ನಿಲ್ದಾಣಗಳಿದ್ದು, ಈ ನಿಲ್ದಾಣಗಳಿಗೆ ಹೆಚ್ಚಿನ ಪ್ರಯಾಣಿಕರು ಬರುತ್ತಾರೆ. ಜೊತೆಗೆ ಹೆಚ್ಚಿನ ರೈಲುಗಳು ಈ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡುತ್ತವೆ. ಆದ್ದರಿಂದ ಇಂತಹ ಸ್ಟೇಷನ್ ಅನ್ನು ಸೆಂಟ್ರಲ್ ರೈಲ್ವೆ ಸ್ಟೇಷನ್ ಅಂತಾ ಕರೆಯಲಾಗುತ್ತದೆ. ಹಾಗಾದರೆ ಆ ರೈಲ್ವೆ ನಿಲ್ದಾಣಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ಮುಂಬೈ ಸೆಂಟ್ರಲ್, ಚೆನ್ನೈ ಸೆಂಟ್ರಲ್, ಮಂಗಳೂರು ಸೆಂಟ್ರಲ್, ಮುಂಬೈ ಸೆಂಟ್ರಲ್, ಕಾನ್ಫುರ ರೈಲ್ವೆ ಸ್ಟೇಷನ್ ಇವುಗಳು ಭಾರತದಲ್ಲಿರುವ ಸೆಂಟ್ರಲ್ ರೈಲ್ವೆ ನಿಲ್ದಾಣಗಳಾಗಿವೆ.
ಈ ಮಾರ್ಗಕ್ಕೆ ವಿಶೇಷ ರೈಲು: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆ ನಿಯಂತ್ರಿಸುವ ಸಲುವಾಗಿ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಈ ಬೆಂಗಳೂರಿನ ಯಶವಂತಪುರದಿಂದ ಈ ಮಾರ್ಗಕ್ಕೆ ವಿಶೇಷ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ಸಮಯ, ಟಿಕೆಟ್ ದರ, ಮಾರ್ಗ ಹಾಗೂ ದಿನಾಂಕಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಗ ಬೇಸಿಗೆ ರಜೆ ಹಿನ್ನೆಲೆ ತುಂಬಾ ಜನರು ಬೆಂಗಳೂರಿನಿದ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ. ಅದರಲ್ಲೂ ಈ ವೇಳೆ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಈ ಮಾರ್ಗಗಳ ಮಧ್ಯೆ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಬಿಡಲು ರೈಲ್ವೆ ಇಲಾಖೆ ಮುಂದಾಗಿದೆ.
ಹೌರಾ-ಯಶವಂತಪುರ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಸಂಚಾರ ಮಾಡಲಿದೆ ಎಂದು ಆಗ್ನೇಯ ರೈಲ್ವೆ ಮಾಹಿತಿ ನೀಡಿದೆ. ರೈಲು ಸಂಖ್ಯೆ 02863 ಹೌರಾ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 11ರಂದು ಮಧ್ಯಾಹ್ನ 12:40ಕ್ಕೆ ಹೌರಾದಿಂದ ಹೊರಡಲಿದ್ದು, ಏಪ್ರಿಲ್ 14ರ ಬೆಳಗ್ಗೆ 12:15ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
ರೈಲು ಸಂಖ್ಯೆ 02864 ಯಶವಂತಪುರ-ಹೌರಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 6 ಮತ್ತು 13ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಯಶವಂತಪುರದಿಂದ ಹೊರಡಲಿದ್ದು, ಕ್ರಮವಾಗಿ ಏಪ್ರಿಲ್ 15 ಮತ್ತು 22ರಂದು ಮಧ್ಯಾಹ್ನ 1:25ಕ್ಕೆ ಹೌರಾಗೆ ಆಗಮಿಸಲಿದೆ ಎಂದು ತಿಳಿಸಿದೆ.












Click it and Unblock the Notifications