ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಪರಿಷ್ಕರಣೆ
ಮೈಸೂರು, ಆಗಸ್ಟ್ 28: ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಧಾರವಾಡ-ಮೈಸೂರು ನಡುವಿನ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅಕ್ಟೋಬರ್ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ರೈಲು ನಂಬರ್ 17302 ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಸದ್ಯ ರೈಲು ಧಾರವಾಡದಿಂದ 22:10ಕ್ಕೆ ಹೊರಟು, 7:10ಕ್ಕೆ ಮೈಸೂರಿಗೆ ತಲುಪುತ್ತಿದೆ.

ಪ್ರಯಾಣಿಕರ ಬೇಡಿಕೆ, ವಿವಿಧ ಕಾರಣಗಳಿಗಾಗಿ ಧಾರವಾಡ-ಮೈಸೂರು ನಡುವಿನ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಅನ್ವಯ ರೈಲು 2023ರ ಅಕ್ಟೋಬರ್ 1ರಿಂದ ಸಂಚಾರ ನಡೆಸಲಿದೆ.
ಹೊಸ ವೇಳಾಪಟ್ಟಿ ಅನ್ವಯ ಇನ್ನು ಮುಂದೆ ರೈಲು ನಂಬರ್ 17302 ಧಾರವಾಡದಿಂದ 20:45ಕ್ಕೆ ಹೊರಡಲಿದೆ. ಮೈಸೂರು ನಗರಕ್ಕೆ 5:55ಕ್ಕೆ ತಲುಪಲಿದೆ. ರೈಲಿನ ನಿಲುಗಡೆ, ಬೋಗಿಯ ಸಂಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಿಲ್ದಾಣಗಳು; ಧಾರವಾಡ-ಮೈಸೂರು ಎಕ್ಸ್‌ಪ್ರೆಸ್ ರೈಲು ಧಾರವಾಡ (20:45), ಎಸ್ಎಸ್‌ಎಸ್ ಹುಬ್ಬಳ್ಳಿ (21:10, 21:20), ಯಲವಗಿ (21:59, 22:00), ಹಾವೇರಿ (22:28, 22:30), ಬ್ಯಾಡಗಿ (22:46, 22:47), ರಾಣೆಬೆನ್ನೂರು (23:05, 23:07), ಹರಿಹರ (23:25, 23:27), ದಾವಣಗೆರೆ (23:43, 23:45).
ಚಿಕ್ಕಜಾಜೂರು ಜಂಕ್ಷನ್ (00:20, 00: 21), ಬೀರೂರು (00:58, 01:00), ಕಡೂರು (01:09, 01:11), ಅರಸೀಕೆರೆ ಜಂಕ್ಷನ್ (02:00, 02:10), ಹಾಸನ (03:00, 03:02), ಹೊಳೆನರಸೀಪುರ (03:37, 03:38), ಕೃಷ್ಣರಾಜನಗರ (04:28, 04:29), ಮೈಸೂರು ಜಂಕ್ಷನ್ (05:55).
ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ರೈಲುಗಳನ್ನು (06569/ 06570) ಓಡಿಸಲಾಗುತ್ತಿದೆ.
ರೈಲು ಸಂಖ್ಯೆ 06569 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಮಂಗಳೂರು ಸೆಂಟ್ರಲ್ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಆಗಸ್ಟ್ 28ರಂದು (ಸೋಮವಾರ) ಮಧ್ಯಾಹ್ನ 4:35 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಈ ರೈಲು ಮಾರ್ಗದಲ್ಲಿ ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶೋರನೂರ, ತಿರೂರ್, ಕೋಝಿಕ್ಕೋಡ್, ವಡಕರ, ತಲಶೈರಿ, ಕಣ್ಣೂರು, ಪಯ್ಯನೂರು, ಕಾಣಂಗಾಡ್ ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ರೈಲು ಸಂಖ್ಯೆ 06570 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಆಗಸ್ಟ್ 29ರ (ಮಂಗಳವಾರ) ರಾತ್ರಿ 8.05 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 11:45 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಮಾರ್ಗದಲ್ಲಿ ಕಾಸರಗೋಡು, ಕಾಣಂಗಾಡ್, ಪಯ್ಯನೂರು, ಕಣ್ಣೂರು, ತಲಶೈರಿ, ವಡಕರ, ಕೋಝಿಕ್ಕೋಡ್, ತಿರೂ, ಶೋರನೂರ, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ, ಓಮಲೂರ, ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲುಗಳು 24 ಬೋಗಿಗಳನ್ನು ಹೊಂದಿದೆ. ಎಸಿ-ಟು ಟೈಯರ್ ಬೋಗಿಗಳು (2), ಎಸಿ ತ್ರಿ ಟೈಯರ್ ಬೋಗಿಗಳು (7), ಸ್ಲೀಪರ್ ಕ್ಲಾಸ್ ಬೋಗಿಗಳು (10), ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು (2), ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳು (2) ಮತ್ತು (1) ಪ್ಯಾಂಟ್ರಿ ಕಾರ್ ಬೋಗಿ (ಮುಚ್ಚಿದ ಸ್ಥಿತಿಯಲ್ಲಿ)ಯನ್ನು ಹೊಂದಿರಲಿದೆ. ಈ ರೈಲಿನ ದರ 1.3 ಪಟ್ಟು ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications