ಹಬ್ಬಕ್ಕೆ ಮುಂಬೈ ಮಂಗಳೂರು ನಡುವೆ ಹಬ್ಬಕ್ಕೆ ವಿಶೇಷ ರೈಲು ಓಡಾಟ

ನವದೆಹಲಿ, ಅ .16: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಸುವುದಾಗಿ ಸೆಂಟ್ರಲ್ ರೈಲ್ವೆ ಘೋಷಿಸಿದೆ. ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣ ನೀಡುವ ಉದ್ದೇಶದಿಂದ ಹಬ್ಬದ ವಿಶೇಷ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ.

ಈ ಮೂರು ವಿಶೇಷ ಹಬ್ಬದ ಸಮಯದಲ್ಲಿ ಸೇವೆ ನೀಡುವ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.

01185 ಗಾಡಿ ಸಂಖ್ಯೆಯ ವಿಶೇಷ ರೈಲು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಅಕ್ಟೋಬರ್ 21 ರಿಂದ ನವೆಂಬರ್ 11 ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15 ಕ್ಕೆ ಹೊರಡುತ್ತದೆ. ಒಟ್ಟು ನಾಲ್ಕು ಟ್ರಿಪ್‌ಗಳು. ಮುಂಬೈನಿಂದ ರಾತ್ರಿ 10:15 ಕ್ಕೆ ಹೊರಟು ಮರುದಿನ ಸಂಜೆ 5:05 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ. ಇನ್ನಷ್ಟು ವಿವರ ಮುಂದಿದೆ...

ಮುಂಬೈನಿಂದ ಅ.21 ಕ್ಕೆ ವಿಶೇಷ ರೈಲು ಸೇವೆ

ಮುಂಬೈನಿಂದ ಅ.21 ಕ್ಕೆ ವಿಶೇಷ ರೈಲು ಸೇವೆ

ಇತ್ತ, 01186 ಗಾಡಿ ಸಂಖ್ಯೆಯ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಅಕ್ಟೋಬರ್ 22 ರಿಂದ ನವೆಂಬರ್ 21 ರವರೆಗೆ ಪ್ರತಿ ಶನಿವಾರ ಸಂಜೆ 6:45 ಕ್ಕೆ ಹೊರಡುತ್ತದೆ. ಇದು ಕೂಡ ನಾಲ್ಕು ಟ್ರಿಪ್‌ಗಳು. ಮಂಗಳೂರಿನಿಂದ ಸಂಜೆ 6:45 ಕ್ಕೆ ಹೊರಟು ಮರುದಿನ ಬೆಳಗ್ಗೆ 11.45 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಆಗಮಿಸಲಿದೆ.

ಮುಂಬೈ-ಮಂಗಳೂರು ವಿಶೇಷ ರೈಲು ನಿಲುಗಡೆ ವಿವರ

ಮುಂಬೈ-ಮಂಗಳೂರು ವಿಶೇಷ ರೈಲು ನಿಲುಗಡೆ ವಿವರ

01185 ಮತ್ತು 01186 ವಿಶೇಷ ರೈಲುಗಳು ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಉಡುಪಿ ಕುಂದಾಪುರ, ಮೂಲ್ಕಿ ಮತ್ತು ಸುರತ್ಕಲ್‌ ರೈಲು ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ.

ಎರಡು ರೈಲುಗಳು, ಐದು ಟ್ರಿಪ್‌ಗಳಲ್ಲಿ ಸಂಚಾರ

ಎರಡು ರೈಲುಗಳು, ಐದು ಟ್ರಿಪ್‌ಗಳಲ್ಲಿ ಸಂಚಾರ

ಗಾಡಿ ಸಂಖ್ಯೆ 01187 ವಿಶೇಷವು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಪ್ರತಿ ಭಾನುವಾರ ರಾತ್ರಿ 10:15 ಕ್ಕೆ ಹೊರಡುತ್ತದೆ. ಇದು ಐದು ಟ್ರಿಪ್‌ಗಳನ್ನು ನೀಡಲಿದೆ. ಮುಂಬೈನಿಂದ ರಾತ್ರಿ 10:15 ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.30 ಕ್ಕೆ ಮಡಗಾಂವ್ ಜಂಕ್ಷನ್‌ಗೆ ಆಗಮಿಸುತ್ತದೆ.

ಗಾಡಿ ಸಂಖ್ಯೆ 01188 ವಿಶೇಷ ರೈಲುಗಳು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಪ್ರತಿ ಸೋಮವಾರ ಮಧ್ಯಾಹ್ನ 1:30 ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡುತ್ತವೆ. ಈ ರೈಲು ಕೂಡ ಐದು ಟ್ರಿಪ್‌ಗಳನ್ನು ನೀಡಲಿದೆ . ಮಧ್ಯಾಹ್ನ 1:30 ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಟು ಅದೇ ದಿನ ರಾತ್ರಿ 11:45 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ.

ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್ ಮತ್ತು ಕರ್ಮಾಲಿಯಲ್ಲಿ ನಿಲುಗಡೆ ನೀಡಲಾಗಿದೆ.

ವಾರ ಪೂರ್ತಿ ಸೇವೆ ನೀಡಲಿವೆ ಮುರು ರೈಲುಗಳು

ವಾರ ಪೂರ್ತಿ ಸೇವೆ ನೀಡಲಿವೆ ಮುರು ರೈಲುಗಳು

ಗಾಡಿ ಸಂಖ್ಯೆ 01189 ವಿಶೇಷವು ಪುಣೆ ಜಂಕ್ಷನ್‌ನಿಂದ ಅಕ್ಟೋಬರ್ 18 ರಿಂದ ನವೆಂಬರ್ 29 ರವರೆಗೆ ಪ್ರತಿ ಮಂಗಳವಾರ ಮಧ್ಯಾಹ್ನ 3:15 ಕ್ಕೆ ಹೊರಡುತ್ತದೆ. ಈ ರೈಲು 7 ಟ್ರಿಪ್‌ಗಳನ್ನು ನೀಡಲಿದೆ. ಮಧ್ಯಾಹ್ನ 3:15 ಕ್ಕೆ ಹೊರಟು ಮರುದಿನ 04.50 ಗಂಟೆಗೆ ಅಜ್ನಿ ತಲುಪಲಿದೆ.

ಗಾಡಿ ಸಂಖ್ಯೆ 01190 ವಿಶೇಷವು ಅಕ್ಟೋಬರ್ 19 ರಿಂದ ನವೆಂಬರ್ 30 ರವರೆಗೆ ಪ್ರತಿ ಬುಧವಾರ ರಾತ್ರಿ 7:50 ಕ್ಕೆ ಅಜ್ನಿಯಿಂದ ಹೊರಡುತ್ತದೆ. ಈ ರೈಲು ಕೂಡ 7 ಟ್ರಿಪ್‌ಗಳನ್ನು ನೀಡಲಿದೆ. ರಾತ್ರಿ 7:50 ಕ್ಕೆ ಅಜ್ನಿಯಿಂದ ಹೊರಟು ಮರುದಿನ ಬೆಳಗ್ಗೆ 11.35 ಕ್ಕೆ ಪುಣೆ ಜಂಕ್ಷನ್‌ಗೆ ಆಗಮಿಸುತ್ತದೆ.

ದೌಂಡ್ ಕಾರ್ಡ್ ಲೈನ್, ಕೋಪರ್ಗಾಂವ್, ಮನ್ಮಾಡ್, ಭೂಸಾವಲ್, ನಂದೂರಾ, ಅಕೋಲಾ, ಬದ್ನೇರಾ, ಧಮಂಗಾವ್ ಮತ್ತು ವಾರ್ಧಾದಲ್ಲಿ ಸ್ಟಾಪ್‌ಗಳಿವೆ.

ಇವುಗಳ ಜೊತೆಗೆ ಗಾಡಿ ಸಂಖ್ಯೆ 01185/01186 ಮತ್ತು 01187/01188 ವಿಶೇಷ ರೈಲುಗಳು ಅಕ್ಟೋಬರ್ 30 ರವರೆಗೆ ಮಾನ್ಸೂನ್ ಸಮಯಕ್ಕೆ ಮತ್ತು ನವೆಂಬರ್ 6 ರಿಂದ ರೋಹಾ, ಮಂಗಳೂರು ಜಂಕ್ಷನ್‌ಗಳು ಮತ್ತು ಮಡ್ಗಾಂವ್ ನಡುವೆ ಮಾನ್ಸೂನ್ ಮುಗಿದ ಬಳಿಕ ಚಲಿಸುತ್ತವೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+