Get Updates
Get notified of breaking news, exclusive insights, and must-see stories!

Bengaluru to Manchanabele Dam Trip: ಬೆಂಗಳೂರಿನಿಂದ ಮಂಚನಬೆಲೆ ಡ್ಯಾಮ್‌ಗೆ ಪ್ರವಾಸ: ಸಂಗಾತಿಯೊಂದಿಗೆ ಹೋದರೆ ಆಗದು ಆಯಾಸ

ಬೆಂಗಳೂರಿಗೆ ಹತ್ತಿರ ಇರುವ ವೀಕ್ಷಣೀಯ ಸ್ಥಳಗಳಲ್ಲಿ ಮಂಚಿನಬೆಲೆ ಡ್ಯಾಮ್ ಕೂಡ ಒಂದು. ನೀವೇನಾದ್ರು ಒಂದು ದಿನದ ಪ್ರವಾಸ ಹೋಗಬೇಕು ಅಂದುಕೊಂಡರೆ ಈ ಪ್ಲೇಸ್ ಬೆಸ್ಟ್. ಅದರಲ್ಲೂ ನೀವು ನಿಮ್ಮ ಸಂಗಾತಿಯೊಂದಿಗೆ ಏಕಾಂಗಿಯಾಗಿ ಕಳೆಯಬೇಕು ಅಂದುಕೊಂಡಿದ್ದರೆ ಈ ಸ್ಥಳ ನಿಮಗೆ ಸೂಟೆಬಲ್ ಆಗಿದೆ.

ಹಾಗಾದರೆ ಮಂಚಿನಬೆಲೆ ಡ್ಯಾಮ್ ಬೆಂಗಳೂರಿನಿಂದ ಎಷ್ಟು ದೂರವಿದೆ? ಇಲ್ಲಿ ಏನೆಲ್ಲಾ ನೋಡಬಹುದು? ಈ ಸ್ಥಳ ಹೇಗಿದೆ ಅನ್ನೋದ ಸಂಪೂರ್ಣ ವಿವರ ಇಲ್ಲಿದೆ. ನೇವೇನಾದ್ರು ಇವತ್ತು ಹೊರಗೆ ಹೋಗಬೇಕು ಅಂದುಕೊಂಡಿದ್ದರೆ ಈ ಸ್ಥಳಕ್ಕೆ ಹೋಗಬಹುದು. ಒಂದೇ ದಿನದಲ್ಲಿ ವಾಪಸ್ ಕೂಡ ಬೆಂಗಳೂರಿಗೆ ಬರಬಹುದು.

Bengaluru to Manchanabele Dam Trip Manchanabele Dam - History Timings amp amp Entry Fee In kannada

ಮಂಚಿನಬೆಲೆ ಡ್ಯಾಮ್‌ಗೆ ಭೇಟಿ ನೀಡುವ ಸಮಯ

ಬೆಂಗಳೂರಿನಿಂದ ಮಂಚಿನಬೆಲೆ ಡ್ಯಾಮ್‌ 36 ಕಿಮೀ ದೂರವಿದೆ. 1 ರಿಂದ 2 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿಗೆ ನೀವು ಬಸ್ ಅಥವಾ ಕ್ಯಾಬ್ ಮೂಲಕ ಹೋಗಬಹುದು. ಇಲ್ಲವಾದಲ್ಲಿ ನಿಮ್ಮ ಸ್ವಂತ ಟೂವಿಲ್ಲರ್ ಅಥವಾ ಕಾರಲ್ಲಿ ಕೂಡ ಹೋಗಬಹುದು. ಇಲ್ಲಿಗೆ 6 AM - 6 PMವರೆಗೆ ಹೋಗಲು ಅವಕಾಶವಿರುತ್ತದೆ. ಉಚಿತವಾಗಿ ಪ್ರವೇಶ ಇರುತ್ತದೆ.

ಜೊತೆಗೆ ಮಾಗಡಿಯಿಂದ ಕೇವಲ 19 ಕಿಮೀ ದೂರದಲ್ಲಿರುವ ಈ ಮಂಚನಬೆಲೆ ಅಣೆಕಟ್ಟು ಕರ್ನಾಟಕದ ರಾಮನಗರ ಜಿಲ್ಲೆಯ ಮಂಚನಬೆಲೆ ಗ್ರಾಮದಲ್ಲಿದೆ. ದಟ್ಟವಾದ ಸಸ್ಯವರ್ಗದ ನಡುವೆ ಈ ಸುಂದರವಾದ ಜಲಾಶಯವಿದೆ. ಬೆಂಗಳೂರಿನ ಸಮೀಪದಲ್ಲಿ ಭೇಟಿ ನೀಡಲು ಇದು ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ.

ನೈಸರ್ಗಿಕ ಸೌಂದರ್ಯ

ಮಂಚನಬೆಲೆ ಅಣೆಕಟ್ಟನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ಮಾಗಡಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರನ್ನು ಒದಗಿಸುತ್ತದೆ. ಈ ಸ್ಥಳದಲ್ಲಿ ಪ್ರಶಾಂತವಾದ ವಾತಾವರಣವಿರುತ್ತದೆ. ಕಣ್ಣಾಯಿಸಿದಲೆಲ್ಲ ಹಸಿರು ಕಾಣಿಸುತ್ತದೆ.

Bengaluru to Manchanabele Dam Trip Manchanabele Dam - History Timings amp amp Entry Fee In kannada

ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆಯಿಂದಾಗಿ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಮಂಚನಬೆಲೆ ಅಣೆಕಟ್ಟು ತಂಪಾದ ವಾತಾವರಣ ಕೂಡಿದ್ದು ಆಣೆಕಟ್ಟಿನ ಸ್ಪಷ್ಟ ನೀರಿನ್ನು ದೂರದಿಂದ ಕಾಣಬಹುದು. ಈ ಅಣೆಕಟ್ಟಿನ ಸುತ್ತಲೂ ಹಚ್ಚ ಹಸಿರಿನ ಮರಗಳು ಚಿಕ್ಕ ಬೆಟ್ಟಗಳಲ್ಲಿದ್ದು, ಈ ಸ್ಥಳವನ್ನು ಇನ್ನಷ್ಟು ಮೋಡಿಮಾಡುವಂತೆ ಮಾಡುತ್ತದೆ. ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಕರ್ಷಕವಾಗಿ ಕಾಣುತ್ತದೆ. ಏಕೆಂದರೆ ಹಚ್ಚ ಹಸಿರಿನ ಈ ಸ್ಥಳ, ನೀಲಿ ಆಕಾಶ, ಆಣೆಗಟ್ಟಿನ ನೀರು ನೋಡುಗರನ್ನು ಆಕರ್ಷಿಸುತ್ತದೆ.

ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಿನ ಸ್ಥಳ

ಟ್ರೆಕ್ಕಿಂಗ್‌ನಿಂದ ಹಿಡಿದು ರಾಪ್ಪೆಲಿಂಗ್‌ ಮಾಡಲು ಈ ಸ್ಥಳಕ್ಕೆ ಜನ ಭೇಟಿ ನೀಡುತ್ತಾರೆ. ಜಲ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಪ್ರಕೃತಿ ಪ್ರಿಯರು ಮತ್ತು ಸಾಹಸ ಉತ್ಸಾಹಿಗಳು ಈ ತಾಣಕ್ಕೆ ಆದ್ಯತೆ ನೀಡುತ್ತಾರೆ. ಈ ಸ್ಪಷ್ಟ ಜಲಾಶಯದಲ್ಲಿ ಬೋಟಿಂಗ್ ಅನುಭವವು ಅದ್ಬುತ ಆನಂದವನ್ನು ನೀಡುತ್ತದೆ.

Bengaluru to Manchanabele Dam Trip Manchanabele Dam - History Timings amp amp Entry Fee In kannada

ಮಂಚನಬೆಲೆ ಅಣೆಕಟ್ಟಿಗೆ ಪ್ರಯಾಣಿಸಲು ಸೂಕ್ತವಾದ ಸಮಯವೆಂದರೆ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಚಳಿಗಾಲದ ಅವಧಿಯಲ್ಲಿ ಅಣೆಕಟ್ಟು ನೀರಿನಿಂದ ತುಂಬಿರುತ್ತದೆ ಮತ್ತು ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಈ ಸ್ಥಳ ಅದ್ಭುತವಾಗಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+