Tirupati Tour Package: ಬೆಂಗಳೂರು-ತಿರುಪತಿ ವಿಶೇಷ ಟೂರ್ ಪ್ಯಾಕೇಜ್, ಒಂದೇ ದಿನದಲ್ಲಿ ದರ್ಶನ ಭಾಗ್ಯ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ರಾಜಧಾನಿ ಬೆಂಗಳೂರಿನಿಂದ ತೆರಳುವವರ ಸಂಖ್ಯೆ ಹೆಚ್ಚು ಎನ್ನಬಹುದು. ಈ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ಬೆಂಗಳೂರು-ತಿರುಮಲ-ಮಂಗಾಪುರಂಗೆ ಟೂರ್ ಪ್ಯಾಕೇಜ್ ಆರಂಭಿಸಿದೆ. ಮೂರು ವಿಧದ ಲಕ್ಸುರಿ ಡಿಲಕ್ಸ್ ಬಸ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ದರ, ದೇವರ ದರ್ಶನ ಸಮಯ, ಎಲ್ಲೆಲ್ಲಿ ಭೇಟಿ ನೀಡಬಹುದು ಪೂರ್ಣ ಮಾಹಿತಿ ಮುಂದಿದೆ.
ಬೆಂಗಳೂರಿನಿಂದ ಒಂದು ದಿನದಲ್ಲಿ ತಿರುಪತಿ ದರ್ಶನ್ ಮಾಡಿಸಿ ಮರಳಿ ಕರೆದುಕೊಂಡು ಬರುವ ವಿಶೇಷ ಟೂರ್ ಪ್ಯಾಕೇಜ್ ಇದಾಗಿದ್ದು. ಯಾರೆಲ್ಲ ಬೆಂಗಳೂರಿನಿಂದ ಹೊರಬೇಕೆನ್ನುವವರು, ಒಮ್ಮೆಯಾದರೂ ತಿರುಪತಿ ನೋಡಿಲ್ಲ, ನೋಡಬೇಕು ಎಂದುಕೊಂಡವರು ಹಾಗೂ ಆಗಾಗ ಭೇಟಿ ನೀಡುವವರಿಗೆ ಈ ಟೂರ್ ಪ್ಯಾಕೇಜ್ ಸಾಕಷ್ಟು ಅನುಕೂಲ ಒದಗಿಸಲಿದೆ.

ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ (ತಿರುಪತಿ) ಹಿಂದೂಗಳಿಗೆ ಧಾರ್ಮಿಕ ವಿಚಾರದಲ್ಲಿ ಮಹತ್ವದ ಸ್ಥಳವಾಗಿದೆ. ಕತ್ತಲೆಯ ಯುಗದಲ್ಲಿ ಮಾನವಕುಲಕ್ಕೆ ಸಹಾಯ ಮಾಡಲು ವಿಷ್ಣು ತನ್ನನ್ನು ತಾನು ಶಿಲೆಯಾಗಿ ಪರಿವರ್ತಿಸಿಕೊಂಡನೆಂದು ಭಕ್ತರು ನಂಬಿದ್ದಾರೆ. ಈ ದೇವಾಲಯಕ್ಕೆ ಭೇಟಿ ನೀಡಿ ಪುನೀತ ಭಾವ ಹೊಂದುತ್ತಾರೆ. ಈ ಕಾರಣದಿಂದಲೇ ತಿರುಪತಿ ದೇವಸ್ಥಾನ ವರ್ಷಪೂರ್ತಿಯು ಸದಾ ಭಕ್ತರಿಂದ ತುಂಬಿರುತ್ತದೆ.
ಒಂದೇ ದಿನದಲ್ಲಿ ತಿಮ್ಮಪ್ಪನ ದರ್ಶನ ಭಾಗ್ಯ
ಮೂರು ವಿಧದ ಎ/ಸಿ ವೋಲ್ವೋ ಬಸ್‌ಗಳನ್ನು ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ ಮಾಡಿದ್ದು, ಬೆಂಗಳೂರಿನ ಇಲಾಖೆಯ ಕಚೇರಿ ಇರುವ ಯಶವಂತಪುರದ ಬಸ್ ನಿಲ್ದಾಣದಿಂದ ಪ್ರತಿ ದಿನ ಬಸ್ ಹೊರಡುತ್ತವೆ. ತಿರುಪತಿ, ಮಂಗಾಪುರ ಮತ್ತು ತಿರುಮಲಕ್ಕೆ ಭೇಟಿ ನೀಡಲಿದೆ. ಭಕ್ತರಿಗೆ ಒಂದೇ ದಿನದಲ್ಲೇ ಬಾಲಾಜಿ ದರ್ಶನ ಮಾಡಿಕೊಂಡು ಬರಬಹುದಾದ ಪ್ಯಾಕೇಜ್ ಇದಾಗಿದೆ.
ಯಾವೆಲ್ಲ ಸ್ಥಳಗಳಿಗೆ ಭೇಟಿ
ತಿರುಮಲ, ತಿರುಪತಿ ಹಾಗೂ ಮಂಗಾಪುರದಲ್ಲಿರುವ ದೇವಾಲಯ, ದೇವರ ದರ್ಶನ ಮಾಡಿಕೊಂಡು ಅಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ, ಸಾಕಷ್ಟು ಸಮಯ ವೀಕ್ಷಣೆಗೆ ಅವಕಾಶ ನೀಡುವಂತೆ ಈ ಟೂರ್ ಪ್ಯಾಕೇಜ್ ಅನ್ನು ರೂಪಿಸಿರುವುದು ಮತ್ತೊಂದು ವಿಶೇಷ. ಪ್ರವಾಸಿ ತಾಣಗಳು ಮತ್ತು ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಒಬ್ಬರಿಗೆ ಟಿಕೆಟ್ ದರ ಎಷ್ಟು?:
ಬೆಂಗಳೂರು-ತಿರುಪತಿ ಟೂರ್ ಪ್ಯಾಕೇಜ್ ಡಿಲಕ್ಸ್ ಎಸಿ ಬಸ್ ಮೊತ್ತ 2270 ರೂಪಾಯಿ. ವೋಲ್ವೋ ಎಸಿ ಬಸ್ ನಲ್ಲಿ ಪ್ರಯಾಣಿವವರಿದ್ದರೆ ಆ ಆಯ್ಕೆ ಸಹ ಇದ್ದು, ಒಬ್ಬರಿಗೆ 2300 ರೂಪಾಯಿ ಇದೆ. ಇನ್ನೂ ಮಲ್ಟಿ - ಆಕ್ಸಲ್ ಬಸ್ ಸಹ ನಿಯೋಜಿಸಲಾಗಿದ್ದು, ಅದನ್ನು ಬುಕ್ ಮಾಡಿದ ಪ್ರತಿಯೊಬ್ಬರಿಗೂ 2405 ರೂಪಾಯಿ ನಿಗದಿಗೊಳಿಸಲಾಗಿದೆ. ಆಸಕ್ತರು ತಮ್ಮ ತಮ್ಮ ಅನುಕೂಲ ನೋಡಿಕೊಂಡು ಯಾವ ಬಸ್ ಆದರೂ ಬುಕ್ ಮಾಡಿಕೊಳ್ಳಬಹುದಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಸಮಯ, ವಿವರ
ಈ ಮೂರು ಬಸ್‌ಗಳು ಪ್ರತಿದಿನ ರಾತ್ರಿ 8 ಗಂಟೆ ಬೆಂಗಳೂರಿನ ಯಶವಂತಪುರದ ನಿಗದಿತ ಸ್ಥಳದಿಂದ ನಿರ್ಗಮಿಸಲಿವೆ. ಮರುದಿನ ಬೆಳಗಿನ ಜಾವ 2 ಗಂಟೆಗೆ ತಿರುಪತಿ ತಲುಪುವ ಬಸ್ ಪ್ರಯಾಣಿಕರಿಗೆ ಫ್ರೆಶ್ ಅಪ್ ಆಗಲು ಬೆಳಗ್ಗೆ 4.30 ವರೆಗೂ ಸಮಯ ನೀಡಲಾಗುತ್ತದೆ. ಆ ಹೊತ್ತಿಗೆ ಉಪಹಾರ ಸಿದ್ಧವಿರುತ್ತದೆ. ಬೆಳಗಿನ ಉಪಹಾರ ಮುಗಿಸಿಕೊಂಡು ಅಲ್ಲಿಂದ ತಿರುಮಲ ಸರ್ವ ದರ್ಶನಕ್ಕೆ ಹೊರಡಲಾಗುತ್ತದೆ. ಜನಸಂದಣಿ ಅವಲಂಬಿಸಿ ದರ್ಶನದ ವ್ಯವಸ್ಥೆ ಮಾಡಲಾಗಿರುತ್ತದೆ. ವೆಂಕಟೇಶ್ವರನ ದರ್ಶನ ಬಳಿಕ ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದರ್ಶನ, ದೇವಾಲಯ ವೀಕ್ಷಣೆ ಬಳಿಕ ಬೆಂಗಳೂರಿಗೆ ಬಸ್ ಹಿಂತಿರುಗುತ್ತದೆ.
ಟಿಕೆಟ್ ಬುಕ್ಕಿಂಗ್ ಹೇಗೆ?
ತಿರುಪತಿ ಬಾಲಾಜಿ ಭಕ್ತರು ಪ್ರಯಾಣಿಕರು/ಪ್ರವಾಸಿಗರು ಪ್ರವಾಸೊದ್ಯಮ ಇಲಾಖೆಯ ಅಧಿಕೃತ ಜಾಲತಾಣದ ಈ https://kstdc.co/tour_packages/tirupathi-mangapura-tptf/ ಲಿಂಕ್ ಬಳಸಿ ನೀವು ಬುಕ್ ಮಾಡಬೇಕು. ದೂರವಾಣಿ 080-43344334 ಇಲ್ಲವೇ ಮೊಬೈಲ್ 8970650070 ಸಂಖ್ಯೆಗೆ ಕರೆ ಮಾಡಿಯೂ ನೀವು ಬುಕ್ ಮಾಡಿಕೊಳ್ಳಬಹುದು. ಇಲ್ಲವೇ ಖದ್ದು ಇಲಾಖೆ ಕಚೇರಿಗೆ ತೆರಳಿಯು ಬುಕ್ ಮಾಡಬಹುದಾಗಿದೆ. ಅನುಕೂಲಕರ ದಿನಾಂಕ ನೋಡಿಕೊಂಡು ಟಿಕೆಟ್ ಬುಕ್ ಮಾಡುವಂತೆ ಇಲಾಖೆ ಕೋರಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications