ಬೆಂಗಳೂರು-ಕರಾವಳಿ ಸಂಪರ್ಕಿಸುವ ಪ್ರತಿದಿನದ ರೈಲಿನ ವೇಳಾಪಟ್ಟಿ ಬದಲು

ಬೆಂಗಳೂರು, ಜುಲೈ 06: ನೈಋತ್ಯ ರೈಲ್ವೆ ಕರ್ನಾಟಕದ ರಾಜಧಾನಿ ಬೆಂಗಳೂರು, ಕರಾವಳಿ ಸಂಪರ್ಕಿರುವ ಪ್ರಮುಖ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಈ ಬದಲಾವಣೆ ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, ಯಾವ ನಿಲ್ದಾಣಕ್ಕೆ ರೈಲು ಯಾವಾಗ ಬರಲಿದೆ? ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ಮತ್ತು ಮುರುಡೇಶ್ವರ ನಡುವಿನ ಪ್ರತಿದಿನದ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಕೆಎಸ್ಆರ್ ಬೆಂಗಳೂರು- ಬಂಗಾರಪೇಟೆ ಮೆಮು ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯೂ ಬದಲಾಗಿದೆ.

Bengaluru Murudeshwar Daily Train Schedule Change

ರೈಲು ಸಂಖ್ಯೆ 16585 ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಆದರೆ ರೈಲು ಹಾಸನ-ಮುರುಡೇಶ್ವರ ನಿಲ್ದಾಣದ ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಬೆಂಗಳೂರು ಕಂಟೋನ್ಮೆಂಟ್, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು, ಕೃಷ್ಣರಾಜನಗರ, ಹೊಳೆನರಸೀಪುರ ಮೂಲಕ ಸಂಚಾರ ನಡೆಸುತ್ತದೆ.

ಪರಿಷ್ಕೃತ ವೇಳಾಪಟ್ಟಿ ವಿವರ: ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ಮತ್ತು ಮುರುಡೇಶ್ವರ ನಡುವಿನ ಪ್ರತಿದಿನದ ರೈಲು ವೇಳಾಪಟ್ಟಿ ಬದಲಾಗಲಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ರೈಲು 19:45ಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿಯಿಂದ ನಿರ್ಗಮಿಸಲಿದೆ.

ಉಳಿದಂತೆ ಬೆಂಗಳೂರು ಕಂಟೋನ್ಮೆಂಟ್ 20.01/ 20.03, ಕೆಎಸ್ಆರ್‌ ಬೆಂಗಳೂರು 20.15/ 20.25, ಕೆಂಗೇರಿ 20.43/ 20.44, ರಾಮನಗರ 21.09/ 21.10, ಚನ್ನಪಟ್ಟಣ 21.20/ 21.21, ಮದ್ದೂರು 21.34/ 21.35, ಮಂಡ್ಯ 21.51/ 21.53, ಮೈಸೂರು 23.15/ 23.35, ಕೃಷ್ಣರಾಜನಗರ 00.10/ 00.11, ಹೊಳೆನರಸೀಪುರ 01.01/ 01.03 ಆಗಮನ/ ನಿರ್ಗಮನವಾಗಲಿದೆ.

ಹೊಳೆನರಸೀಪುರದ ನಂತರ ಹಾಸನ ಮಾರ್ಗವಾಗಿ ರೈಲು ಮುರುಡೇಶ್ವರ ತಲುಪಲಿದೆ. ಆದರೆ ಹಾಸ-ಮುರುಡೇಶ್ವರ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವ ವೇಳಾಪಟ್ಟಿಯಂತೆಯೇ ರೈಲು ಸಂಚಾರ ನಡೆಸಲಿದೆ.

ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ಮೆಮು ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ರೈಲು ಸಂಖ್ಯೆ 16522 ವೇಳಾಪಟ್ಟಿ ಆಗಸ್ಟ್‌ 1, 2024ರಿಂದ ಬದಲಾಗಲಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ 19.40ಕ್ಕೆ ನಿರ್ಗಮಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ 19.49/ 19.50, ಬೆಂಗಳೂರು ಪೂರ್ವ 19.54/ 19.55, ಕೃಷ್ಣರಾಜಪುರಂ 20.06/ 20.07, ವೈಟ್‌ಫೀಲ್ಡ್‌ 20.17/ 20.18, ಮಾಲೂರು 20.33/ 20.34, ಟೇಕಲ್ 20.45/ 20.46 ಮತ್ತು ಬಂಗಾರಪೇಟೆ 21.15ಕ್ಕೆ ನಿರ್ಗಮಿಸಲಿದೆ.

ಜುಲೈ ತಿಂಗಳಿನಲ್ಲಿ ಎರಡು ರೈಲುಗಳು ಈಗಿರುವ ವೇಳಾಪಟ್ಟಿಯಂತೆಯೇ ಸಂಚಾರ ನಡೆಸಲಿವೆ. ಆಗಸ್ಟ್‌ 1ರಿಂದ ಎರಡು ರೈಲುಗಳ ವೇಳಾಪಟ್ಟಿ ಬದಲಾವಣೆಯಾಗಲಿದೆ. ಆಗ ಸಂಚಾರ ನಡೆಸುವ ಜನರು ಹೊಸ ವೇಳಾಪಟ್ಟಿಯನ್ನು ತಿಳಿದು, ಅದರ ಅನ್ವಯ ಸಂಚಾರದ ಯೋಜನೆ ರೂಪಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+