ಬೆಂಗಳೂರು-ಬಿಹಾರ ನಡುವೆ ವಿಶೇಷ ರೈಲು ಸಂಚಾರ, ವೇಳಾಪಟ್ಟಿ
ಬೆಂಗಳೂರು, ಜುಲೈ 14; ನೈಋತ್ಯ ರೈಲ್ವೆ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಬಿಹಾರದ ದಾನಾಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಜುಲೈ 20 ರಿಂದ ಆಗಸ್ಟ್ 31ರ ತನಕ ಈ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ರೈಲಿನ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಬಿಹಾರದ ದಾನಾಪುರ ಮತ್ತು ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿದೆ.
ರೈಲು ಸಂಖ್ಯೆ 03247/ 03248 ಎರಡೂ ನಗರಗಳ ನಡುವೆ ಸಂಚಾರ ನಡೆಸಲಿದೆ. ರೈಲು ಪ್ರಯಾಣ ಮಾಡುವ ಮುನ್ನ ವೇಳಾಪಟ್ಟಿ, ನಿಲ್ದಾಣದ ಮಾಹಿತಿಯನ್ನು ತಿಳಿಯಿರಿ. ಪ್ರಯಾಣಿಕರು ಈ ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವೇಳಾಪಟ್ಟಿ ಹೀಗಿದೆ; ರೈಲುಗಳ ಸಂಖ್ಯೆ 03247/ 03248 ದಾನಾಪುರ- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ (7 ಟ್ರಿಪ್)
ಜುಲೈ 20 ರಿಂದ ಆಗಸ್ಟ್ 31ರವರೆಗೆ ರೈಲು ಸಂಖ್ಯೆ 03247 ಪ್ರತಿ ಗುರುವಾರ ಮಧ್ಯಾಹ್ನ 3 ಗಂಟೆಗೆ ದಾನಾಪುರದಿಂದ ಹೊರಟು, ಶನಿವಾರ ಮಧ್ಯಾಹ್ನ 1 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 03248 ಜುಲೈ 22 ರಿಂದ ಸೆಪ್ಟೆಂಬರ್ 2 ರವರೆಗೆ ಪ್ರತಿ ಶನಿವಾರ ರಾತ್ರಿ 11:25ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಸೋಮವಾರ ರಾತ್ರಿ 11:30ಕ್ಕೆ ದಾನಾಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಅರಾ, ಬಕ್ಸರ್, ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್‌ರಾಜ್ ಛೌಕಿ, ಮಾಣಿಕಪುರ, ಸತ್ನಾ, ಜಬಲ್‌ಪುರ, ಇಟಾರ್ಸಿ, ನಾಗಪುರ, ಬಲ್ಹರ್‌ಷಾ, ವಾರಂಗಲ್, ವಿಜಯವಾಡ, ಪೆರಂಬೂರ, ಕಟ್ಪಾಡಿ, ಜೋಲಾರ್‌ಪೆಟ್ಟೆ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು 2 ಎಸಿ ತ್ರಿ ಟೈಯರ್ ಬೋಗಿಗಳು (3), ಸ್ಲೀಪರ್ ಕ್ಲಾಸ್ ಬೋಗಿಗಳು (12), ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು (4), ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಬೋಗಿಗಳು (2) ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.
ರೈಲುಗಳ ಸಂಖ್ಯೆ 03259/03260 ದಾನಾಪುರ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ ಎಕ್ಸ್‌ಪ್ರೆಸ್ (7 ಟ್ರಿಪ್)
ಜುಲೈ 18 ರಿಂದ ಆಗಸ್ಟ್ 29 ರವರೆಗೆ ರೈಲು ಸಂಖ್ಯೆ 03259 ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3ಕ್ಕೆ ದಾನಾಪುರದಿಂದ ಹೊರಟು, ಗುರುವಾರ ಮಧ್ಯಾಹ್ನ 1ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ
ಟರ್ಮಿನಲ್ ಬೆಂಗಳೂರಿಗೆ ಆಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 03260 ಜುಲೈ 20 ರಿಂದ ಆಗಸ್ಟ್ 31 ರವರೆಗೆ ಪ್ರತಿ ಗುರುವಾರ ರಾತ್ರಿ 11:25ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಶನಿವಾರ ರಾತ್ರಿ 11:30 ಗಂಟೆಗೆ ದಾನಾಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಅರಾ, ಬಕ್ಸರ್, ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್‌ರಾಜ್ ಛೌಕಿ, ಮಾಣಿಕ್‌ಪುರ್, ಸತ್ನಾ, ಜಬಲ್‌ಪುರ್, ಇಟಾರ್ಸಿ, ನಾಗಪುರ, ಬಲ್ಹರ್‌ಷಾ, ವಾರಂಗಲ್, ವಿಜಯವಾಡ, ಪೆರಂಬೂರ, ಕಟ್ಪಾಡಿ, ಜೋಲಾರ್‌ಪೆಟ್ಟೆ ಮತ್ತು ಬಂಗಾರಪೇಟೆಯಲ್ಲಿ ನಿಲುಗಡೆಯನ್ನು ಹೊಂದಿರುತ್ತವೆ.
ಈ ರೈಲುಗಳು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು (18) ಮತ್ತು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಬೋಗಿಗಳು (2) ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳ ಆಗಮಿಸುವ ಮತ್ತು ನಿರ್ಗಮಿಸುವ ಸಮಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 139 ನಂಬರಿಗೆ ಡಯಲ್ ಮಾಡಿ.












Click it and Unblock the Notifications