ಬೇಸಿಗೆ ವಿಶೇಷ ರೈಲು: ಹುಬ್ಬಳ್ಳಿ, ಬೆಳಗಾವಿ ಪ್ರಯಾಣಿಕರಿಗೆ ಅನುಕೂಲ
ಹುಬ್ಬಳ್ಳಿ, ಮೇ 09: ಹುಬ್ಬಳ್ಳಿ, ಬೆಳಗಾವಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಬೇಸಿಗೆಯಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಳಗಾವಿ-ಗೋಮತಿ ನಗರ ನಡುವೆ ವಿಶೇಷ ರೈಲು ಓಡಲಿದ್ದು, ಹುಬ್ಬಳ್ಳಿ ಮೂಲಕ ಸಂಚಾರ ನಡೆಸಲಿದೆ.
ಭಾರತೀಯ ರೈಲ್ವೆ ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದೆ. ರೈಲು ನಂಬರ್ ಬೆಳಗಾವಿ-ಗೋಮತಿ ನಗರ ನಡುವೆ 8 ಟ್ರಿಪ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಬೆಳಗಾವಿ-ಗೋಮತಿ ನಗರ-ಬೆಳಗಾವಿ ನಡುವೆ ರೈಲು ನಂಬರ್ 07389/ 07390 ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ವಿಜಯಪುರ, ಸುರಪುರ, ದಾಂಡ್, ಇಟಾರ್ಸಿ, ಕಾನ್ಪುರ ಸೆಂಟ್ರಲ್ ಮೂಲಕ ಸಂಚಾರ ನಡೆಸಲಿದೆ.
ರೈಲು ವೇಳಾಪಟ್ಟಿ: ರೈಲು ನಂಬರ್ 07389 ದಿನಾಂಕ 12/5/2024 ರಿಂದ 30/6/2024ರ ತನಕ ಬೆಳಗಾವಿಯಿಂದ 12.30ಕ್ಕೆ ಹೊರಟು ಗೋಮತಿ ನಗರಕ್ಕೆ 3ನೇಯ ದಿನ 7.45ಕ್ಕೆ ತಲುಪಲಿದೆ. ರೈಲು ನಂಬರ್ 07390 ಗೋಮತಿ ನಗರದಿಂದ 14/5/2024 ರಿಂದ 2/7/2024ರ ತನಕ 20:30ಕ್ಕೆ ಹೊರಟು, ಬೆಳಗಾವಿಗೆ 3ನೇ ದಿನ 15:15ಕ್ಕೆ ತಲುಪಲಿದೆ.
ಸಾಮಾಜಿಕ ಜಾಲತಾಣದಲ್ಲಿ ಬೆಳಗಾವಿ-ಗೋಮತಿ ನಗರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. 'ಗದಗ ರೈಲು ಬಳಕೆದಾರರು' ಪೇಜ್‌ನಲ್ಲಿ 'ಗದಗ ಜಿಲ್ಲೆಯ vote ಬೇಕು ಆದರೆ ಗದಗ ಜಿಲ್ಲೆಯ ಜನತೆಗೆ ರೈಲು ನಿಲುಗಡೆಗೊಳಿಸದೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರ ಎಂದು' ರೈಲು ವೇಳಾಪಟ್ಟಿ ಹಾಕಿ ಆಕ್ರೋ ವ್ಯಕ್ತಪಡಿಸಲಾಗಿದೆ.
ಬೆಳಗಾವಿಯಿಂದ ಹೊರಡುವ ಈ ವಿಶೇಷ ರೈಲು ಲೋಂಡಾ ಜಂಕ್ಷನ್, ಧಾರವಾಡ, ಎಸ್‌ಎಸ್ಎಸ್ ಹುಬ್ಬಳ್ಳಿ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸುರಪುರ ಮೂಲಕ ಸಂಚಾರ ನಡೆಸುತ್ತದೆ. ಆದರೆ ಗದಗದಲ್ಲಿ ನಿಲುಗಡೆ ನೀಡಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಗದಗ ಜಿಲ್ಲೆಯ vote ಬೇಕು ಆದರೆ ಗದಗ ಜಿಲ್ಲೆಯ ಜನತೆಗೆ ರೈಲು ನಿಲುಗಡೆ ಗೊಳಿಸದೆ ಅನ್ಯಾಯ ಮಾಡುತ್ತಿರುವ .@narendramodi ಸರ್ಕಾರ@AshwiniVaishnaw@JoshiPralhad@BSBommai @BSYBJP @BYVijayendra@BJP4Karnataka @BJP4Gadag @SWRRLY @GMSWR @drmubl https://t.co/ALTl4I43YE
— ಗದಗ ರೈಲು ಬಳಕೆದಾರರು Gadag Railway Users (@GadagRailUsers) May 8, 2024
ವಂದೇ ಭಾರತ್ ರೈಲು: ಬೆಳಗಾವಿಯ ಜನರು ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇಡುತ್ತಲೇ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದಾಗಲೂ ಇದೇ ಬೇಡಿಕೆ ಇಡಲಾಗಿತ್ತು.
ಈಗಾಗಲೇ ಕೆಎಸ್‌ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಸಹ ಪೂರ್ಣಗೊಂಡಿದೆ. ಆದರೆ ರೈಲು ಸಂಚಾರ ಮಾತ್ರ ಇನ್ನು ಆರಂಭವಾಗಿಲ್ಲ.
ಬೆಳಗಾವಿ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ ರೈಲು ನಿಲ್ದಾಣದ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ನಿಲ್ದಾಣವನ್ನು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಅಂದಾಜು 190 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾಗಿದೆ.
ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ರೈಲು ಮಾರ್ಗವನ್ನು ದ್ವಿಪಥಗೊಳಿಸುವ ಯೋಜನೆಯನ್ನು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಸುಮಾರು 930 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಮುಂಬೈ-ಪುಣೆ-ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದಲ್ಲಿ ಲೈನ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಹಾಯಕವಾಗಿದೆ.












Click it and Unblock the Notifications