ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿದ್ವಾರದಲ್ಲಿ ಕಾರ್ತೀಕ ಹುಣ್ಣಿಮೆ ಪವಿತ್ರ ಸ್ನಾನ

|
Google Oneindia Kannada News

Haridwar
ಬೆಂಗಳೂರು, ನ. 2 : ಇವತ್ತು ನವಂಬರ್ 2 ಸೋಮವಾರ ಪವಿತ್ರ ಕಾರ್ತೀಕ ಹುಣ್ಣಿಮೆ. ಗಂಗೆಯಲ್ಲಿ ಮಿಂದು ಪಾಪಗಳನ್ನು ತೊಳೆದುಕೊಂಡು ಪುನೀತಭಾವ ತಾಳುವ ಸುದಿನ. ಕಾರ್ತೀಕ ಮಾಸದ ಕೊನೆಯ ದಿನವಾದ ಇವತ್ತು ಹಿಂದೂ ಭಕ್ತ ಸಮುದಾಯಕ್ಕೆ ಅತ್ಯಂತ ಶುಭದಿನ.

ಹರಿದ್ವಾರದ ಗಂಗಾನದಿಯಲ್ಲಿ ಈ ಪುಣ್ಯದಿನದಂದು ಹಿಂದೂ ಜನಸ್ತೋಮವೇ ನೆರೆದಿದೆ. ಲಕ್ಷಾಂತರ ಭಕ್ತರು ನದಿಯಲ್ಲಿ ಜಳಕ ಮಾಡುತ್ತಿದ್ದಾರೆ. ಗಂಗೆಯಲ್ಲಿ ಮಿಂದೆದ್ದರೆ ಕೇವಲ ಪಾಪ ನಾಶವಾಗುವುದಷ್ಟೇ ಅಲ್ಲದೆ ಆತ್ಮ ಶುದ್ಧಿಯಾಗಿ ಸ್ವರ್ಗದ ಬಾಗಿಲುಗಳು ಭಕ್ತನಿಗೆ ತೆರೆಯುತ್ತವೆ ಎಂದು ನಂಬಿಕೆ. ತ್ರಿಪುರಾಸುರನನ್ನು ಸಂಹಾರ ಮಾಡುವ ಮೂಲಕ ಶಿವ ಜನತೆಯನ್ನು ಕಾಪಾಡಿದ ದಿವಸವಾಗಿಯೂ ಕಾರ್ತೀಕ ಹುಣ್ಣಿಮೆ ಪೌರಾಣಿಕ ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿರುವ ಕಲ್ಪವಾಸಿ ಡಾಟ್ ಕಾಂ ಮುಂಬರುವ ಕುಂಭಮೇಳ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ವಿಶಿಷ್ಟ ವೆಬ್ ತಾಣ ನಿರ್ಮಿಸಿದೆ. ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಇವತ್ತಿನ ಕಾರ್ತೀಕ ಸ್ನಾನದ ದಿನ ಹರಿದ್ವಾರದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕಲ್ಪವಾಸಿ ಅಧ್ಯಯನ ಮಾಡುತ್ತಿದೆ. ಹರಿದ್ವಾರದಲ್ಲಿರುವ ನಾನಾ ಘಾಟ್ ಗಳು, ಸಂಚಾರ ವ್ಯವಸ್ಥೆ, ಪ್ರವಾಸಿ ಸೌಕರ್ಯಗಳ ಅಧ್ಯಯನಕ್ಕೆ ಪೂರಕವಾಗಿ ಕಾರ್ತೀಕ ಸ್ನಾನದ ಅಧ್ಯಯನವನ್ನು ಕಲ್ಪವಾಸಿ ಮಾಡುತ್ತಿದ್ದು ಅದಕ್ಕಾಗಿ ಬೆಂಗಳೂರಿನಿಂದ ತಜ್ಞರ ಒಂದು ತಂಡವನ್ನು ಹರಿದ್ವಾರಕ್ಕೆ ಕಳಿಸಿದೆ.

ಕುಂಭಮೇಳದ ಬಗೆಗೆ ಆಸಕ್ತಿ ಮತ್ತು ಹೆಚ್ಚಿನ ವಿವರ ಬಯಸುವವರು ಈ ಕೆಳಕಂಡ ವ್ಯಕ್ತಿ ಮತ್ತು ಸಂಸ್ಥೆಯನ್ನು ಸಂಪರ್ಕಿಸಬಹುದು:
Sudhir S,PRO, Studiorama India Limited, 118/1, 1ST A T Street, 6th Block,Jayanagar, Yediyur, Bangalore 560 070. INDIA

Telefax: +91 80 2676 0216. Mobile: +91-96332 54579. Email: [email protected]. www.kalpavasi.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X