ಕೊಡಗಿನಲ್ಲಿ ಕಾವೇರಿ ಮೇಲೆ ಸವಾರಿ

ಹೀಗಾಗಿ ಸುರಿಯುವ ಮಳೆಯಲ್ಲಿಯೇ ಕೆಸರುಗದ್ದೆಯನ್ನು ಮೈದಾನವನ್ನಾಗಿಸಿ ಕೆಸರುಗದ್ದೆ ಕ್ರೀಡಾಕೂಟ ನಡೆಸುತ್ತಾರೆ. ಅಷ್ಟೇ ಅಲ್ಲ ಮತ್ತೊಂದೆಡೆ ಧುಮ್ಮಿಕ್ಕಿ ಹರಿಯವ ಕಾವೇರಿ ನದಿಯಲ್ಲಿಯೇ ರಿವರ್ ರ‌್ಯಾಫ್ಟಿಂಗ್ ನಂತಹ ಸಾಹಸಮಯ ಕ್ರೀಡೆಯನ್ನಾಡಲು ಮುಂದಾಗುತ್ತಾರೆ.
ಹಾಗೆನೋಡಿದರೆ ಕೊಡಗಿನ ಮಳೆ ಇತರೆಡೆಗೆ ಹೋಲಿಸಿದರೆ ಸ್ವಲ್ಪ ಭಿನ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಒಮ್ಮೆ ಪ್ರಾರಂಭವಾಯಿತೆಂದರೆ ಧೋ... ಎಂದು ಇಲ್ಲವೆ ಜಿಟಿ...ಜಿಟಿ...ಸುರಿಯುತ್ತಲೇ ಇರುತ್ತದೆ. ಈ ಮಳೆಗೆ ಮನೆಯಿಂದ ಹೊರಬರುವುದೇ ಒಂದು ಸಾಹಸ ಅದರಲ್ಲಿಯೂ ಮಳೆಗೆ ಆಟವಾಡುವುದೆಂದರೆ ಸುಲಭದ ಮಾತಲ್ಲ.
ಆದರೆ ಕೊಡಗಿನವರು ಹಾಗಲ್ಲ ಸುರಿಯುವ ಮಳೆಗೆ, ಬೀಸುವ ಗಾಳಿಗೆ, ಕೊರೆಯುವ ಚಳಿಗೆ ಮನೆಯೊಳಗೆ ಕಂಬಳಿ ಹೊದ್ದು ಕೂರುವವರಲ್ಲ. ಏನಾದರೊಂದು ಸಾಹಸಮಯ ಕಾರ್ಯ ಮಾಡುತ್ತಲೇ ಇರುತ್ತಾರೆ. ಈಗ ನೋಡಿ ಕೊಡಗಿನಲ್ಲಿ ಸುರಿಯತ್ತಿರುವ ಮಳೆಗೆ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಉಕ್ಕಿ ಹರಿಯುವ ನದಿಯಲ್ಲಿಯೇ ಇಲ್ಲಿನವರು ರಿವರ್ ರ‌್ಯಾಫ್ಟಿಂಗ್ ನಂತಹ ಜಲಕ್ರೀಡೆಯನ್ನಾಡಲು ಮುಂದಾಗಿದ್ದಾರೆ.
ಸಾಹಸಿ ಕ್ರೀಡಾಪ್ರೇಮಿಗಳಿಗಾಗಿಯೇ ಕುಶಾಲನಗರ ಸಮೀಪದ ದುಬಾರೆಯ ಆನೆ ಶಿಬಿರದ ಬಳಿ ರಿವರ್ ರ‌್ಯಾಫ್ಟಿಂಗ್ ಪ್ರಾರಂಭವಾಗಿದೆ. ಸುರಿಯುವ ಮಳೆಗೆ ಮೈಯೊಡ್ಡಿ, ಉಕ್ಕಿಹರಿಯುವ ನದಿಯಲ್ಲಿ ತೇಲಾಡುತ್ತಾ... ಏಳುತ್ತಾ....ಬೀಳುತ್ತಾ.... ಸಾಗುವ ರ‌್ಯಾಫ್ಟಿಂಗ್ ನ್ನು ದೂರದಿಂದ ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ.
ಗ್ಯಾಲರಿ:ಕೊಡಗಿನ ಜಲಕ್ರೀಡೆ ಸಾಹಸದಾಟದ ದೃಶ್ಯ | ಕೊಡಗಿನಲ್ಲಿ ಭರ್ಜರಿ ಮಳೆ |
ಇನ್ನು ತಾವೇ ಕುಳಿತು ಸಾಗುವುದೆಂದರೆ ಅದು ಮರೆಯಲಾರದ ರಸಾನುಭವ. ಕಳೆದ ಕೆಲವು ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್ ದುಬಾರೆಯಲ್ಲಿ ರಿವರ್ ರ‌್ಯಾಫ್ಟಿಂಗ್ ಆರಂಭಿಸಿದಾಗ ಇದಕ್ಕೆ ಜಂಗಲ್ ಲಾಡ್ಜ್‌ನ ಸಹಕಾರವೂ ದೊರೆತಿತ್ತು.
ಆರಂಭದಲ್ಲಿ ಪ್ರಚಾರದ ಕೊರತೆ, ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಇದು ಜನಪ್ರಿಯವಾಗತೊಡಗಿತು. ಮೊದಲ ವರ್ಷದಲ್ಲಿ ನೂರರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ ಇತ್ತೀಚಿಗಿನ ವರ್ಷಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಸಾಗಿದೆ.
ದುಬಾರೆಯ ಆನೆ ಕ್ಯಾಂಪ್‌ಗೆ ಬರುವವರು ಹಾಗೆಯೇ ರಿವರ್ ರ‌್ಯಾಫ್ಟಿಂಗ್ ನ ಮಜಾವನ್ನು ಕೂಡ ಪಡೆಯಬಹುದಾಗಿದೆ. ಇಲ್ಲಿನ ಆನೆ ಶಿಬಿರದಿಂದ ಪ್ರಾರಂಭವಾಗುವ ರ‌್ಯಾಫ್ಟಿಂಗ್ ಹೊಸಪಟ್ಟಣ, ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮದ ಮೂಲಕ ಸಾಗಿ ಪಾಲಿಟೆಕ್ನಿಕ್ ಬಳಿ ಅಂತ್ಯಗೊಳ್ಳುತ್ತದೆ.
ಅಂದರೆ ಬರೋಬ್ಬರಿ ಹನ್ನೊಂದು ಕಿ.ಮೀ. ದೂರವನ್ನು ಉಕ್ಕಿಹರಿಯುವ ನದಿಯಲ್ಲಿ ಕ್ರಮಿಸುವುದೆಂದರೆ ಹುಡುಗಾಟದ ಮಾತಲ್ಲ ಇದಕ್ಕೆ ಧೈರ್ಯ ಬೇಕು. ರ್‍ಯಾಫ್ಟೊಂದರಲ್ಲಿ ಆರು ಮಂದಿ ಒಮ್ಮೆಗೆ ಕುಳಿತು ರ‌್ಯಾಫ್ಟಿಂಗ್ ಮಾಡಬಹುದಾಗಿದೆ. ರ‌್ಯಾಫ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣಿತರು ಇರುವುದರಿಂದ ಭಯಪಡಬೇಕಾಗಿಲ್ಲ.
ರಿವರ್ ರ‌್ಯಾಫ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕಿಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಇಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.
ರಿವರ್ ರ‌್ಯಾಫ್ಟಿಂಗ್ ಆರಂಭವಾದ ಬಳಿಕ ಮಳೆಗಾಲದಲ್ಲಿಯೂ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಮಳೆಗಾಲದ ವಿಶೇಷ ಕ್ರೀಡೆಯಾಗಿ ಗಮನ ಸೆಳೆಯುತ್ತಿರುವ "ರಿವರ್ ರ‌್ಯಾಫ್ಟಿಂಗ್" ಮಳೆಗಾಲದ ಅಂತ್ಯದವರೆಗೂ ನಡೆಯುತ್ತದೆ.
ಕೊಡಗಿನ ಮಳೆಗೆ ಮೈಯೊಡ್ಡಿ, ಧುಮ್ಮಿಕ್ಕಿ ಹರಿಯುವ ಕಾವೇರಿ ಮೇಲೆ ಸವಾರಿ ಮಾಡಬೇಕೆನಿಸಿದರೆ ತಪ್ಪದೆ ದುಬಾರೆಗೆ ಬನ್ನಿ... ಹೆಚ್ಚಿನ ಮಾಹಿತಿಗೆ ಮುರುಳಿ: 94492 42477 ಸಂಪರ್ಕಿಸಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications