keyboard_backspace

ಬೆಳಗಾವಿ ಬಿಜೆಪಿ ನಾಯಕ ರಾಜು ಚಿಕ್ಕನಗೌಡ ಸಾವಿನ ಬಗ್ಗೆ ಅನುಮಾನ

Google Oneindia Kannada News

ಬೆಂಗಳೂರು, ಜನವರಿ 07: ಖಾಸಗಿ ಹೋಟೆಲ್ ನಲ್ಲಿ ಮೃತಪಟ್ಟ ಬಿಜೆಪಿಯ ನಾಯಕ ರಾಜು ಚಿಕ್ಕನಗೌಡ ಅವರ ಹೃದಯಾಘಾತ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿವೆ.

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಜು ಚಿಕ್ಕನಗೌಡ ಅವರು ಸಾವನ್ನಪ್ಪಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ರಾಜು ಚಿಕ್ಕನಗೌಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಸುಮಾರು ನಲವತ್ತು ವರ್ಷದ ಚಿಕ್ಕನಗೌಡ ಯೋಗಪಟು ಆಗಿದ್ದರು. ಕೆಲಸದ ನಿಮಿತ್ತ ಮುಖ್ಯಮಂತ್ರಿ ಅವರ ಕಾರ್ಯಾಲಯಕ್ಕೆ ಹೋಗಿ ಬಂದಿದ್ದರು. ಶಿವಮೊಗ್ಗದಲ್ಲಿ ನಡೆಯಲಿದ್ದ ಕಾರ್ಯಕಾರಿಣಿ ಸಭೆಗೆ ಹೋಗಲು ಚಿಕ್ಕನಗೌಡರು ಯೋಜಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಖಾಸಗಿ ಹೋಟೆಲ್ ನಲ್ಲಿ ಜನವರಿ ಡಿಸೆಂಬರ್ 31 ರಂದು ರಾತ್ರಿ ತಂಗಿದ್ದರು.

ಬೆಳಗಾವಿ ಬಿಜೆಪಿ ನಾಯಕ ರಾಜು ಚಿಕ್ಕನಗೌಡ ಸಾವಿನ ಬಗ್ಗೆ ಅನುಮಾನ

ಬೆಳಗಾವಿ ಬಿಜೆಪಿ ನಾಯಕ ರಾಜು ಚಿಕ್ಕನಗೌಡ ಸಾವಿನ ಬಗ್ಗೆ ಅನುಮಾನ

ಮರುದಿನ ಬೆಳಗ್ಗೆ ಅವರಿಗೆ ತಿಂಡಿ ನೀಡಲು ಹೋಟೆಲ್ ಸಿಬ್ಬಂದಿ ಹೋದಾಗ ಬಾಗಿಲು ತೆಗೆದಿಲ್ಲ. ಕಿಟಕಿ ಮೂಲಕ ನೋಡಿದಾಗ ಹಾಸಿಗೆ ಕೆಳಗೆ ದೇಹ ಬಿದ್ದಿರುವುದು ಕಂಡು ಬಂದಿದೆ. ಅನುಮಾನಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಚಿಕ್ಕನಗೌಡ ಮಲಗಿದ್ದ ಹಾಸಿಗೆಯ ಕೆಳಗೆ ಬಿದ್ದಿದ್ದರು. ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಹೃದಯಾಘಾತದಿಂದ ರಾಜು ಚಿಕ್ಕನಗೌಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ದಾಖಲಿಸಿಕೊಂಡಿದ್ದು, ಮೃತ ಚಿಕ್ಕನಗೌಡ ಬಿಜೆಪಿ ನಾಯಕ ಎಂದು ಗೊತ್ತಾದ ಕೂಡಲೇ ಬಿಜೆಪಿಯ ಕಚೇರಿಗೆ ಮಾಹಿತಿ ನೀಡಿದ್ದಾರೆ. ರಾಜು ಅವರ ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.

ಅನುಮಾನ:

ಅನುಮಾನ:

ರಾಜು ಚಿಕ್ಕನಗೌಡ ಅವರು ತಂಗಿದ್ದು ಒಬ್ಬರೇ ಆಗಿದ್ದರೂ ಪ್ರತಿ ಭಾರಿಯೂ ಎರಡು ಊಟ, ತಿಂಡಿ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಒಬ್ಬ ಯೋಗಪಟುವಾಗಿದ್ದ ರಾಜು ಅವರಿಗೆ ಹೃದಯಘಾತ ಹೇಗೆ ಸಾಧ್ಯವಾಯಿತು ? ಎಂಬ ಪ್ರಶ್ನೆಗಳು ಅವರ ಅಪ್ತ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಒಬ್ಬರೇ ಇದ್ದರೂ ಯಾಕೆ ಎರಡು ಊಟ ಆರ್ಡರ್ ಮಾಡಿದ್ದರು. ಬೇರೆ ಯಾರಾದರೂ ಜತೆಗೆ ಇದ್ದರಾ ? ಇನ್ನು ಒಬ್ಬ ಯೋಗಪಟುವಾಗಿದ್ದ ರಾಜು ಅವರಿಗೆ ಹೃದಯಘಾತ ಆಗುವ ಸಾಧ್ಯತೆಗಳೇ ಇಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆಯೇ ? ಸುರೇಶ್ ಅಂಗಡಿ ಸಾವಿನ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ನಿಲ್ಲಲು ಮುಂದಾಗಿದ್ದರು. ಇದರ ಭಾಗವಾಗಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಶಿವಮೊಗ್ಗದಲ್ಲಿ ನಡೆಯಲಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಸಹ ಪಾಳ್ಗೊಳ್ಳಬೇಕಿತ್ತು ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ. ಅವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ರಾಜು ಅವರ ಸಾವಿನ ಬಗ್ಗೆ ಎದ್ದಿರುವ ಅನುಮಾನಕ್ಕೆ ತೆರೆ ಎಳೆಯಲಿದೆ. ಇನ್ನು ರಾಜು ಅವರ ಸಾವು ಹೃದಯಘಾತದ್ದು, ಇದರ ಬಗ್ಗೆ ಯಾವುದೇ ಅನುಮಾನ ಇಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಇನ್ನಷ್ಟು ಸ್ಪಷ್ಟನೆ ಸಿಗಲಿದೆ ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ.

ರಾಜು ಪ್ರಭಾವಿ ನಾಯಕ:

ರಾಜು ಪ್ರಭಾವಿ ನಾಯಕ:

ರಾಜು ಅವರು ಆರಂಭದಿಂದಲೂ ರಾಷ್ಟ್ರೀಯ ಸ್ವಯಂ ಸೇವಕನಾಗಿ ಗುರುತಿಸಿಕೊಂಡಿದ್ದರು. ಯುವ ಮೋರ್ಚಾ ನಾಯಕರಾಗಿಯೂ ಬೆಳವಾಗಿಯಲ್ಲಿ ಭಾರೀ ಪ್ರಭಾವ ಹೊಂದಿದ್ದರು. ರಮೇಶ್ ಜಾರಕಿಹೊಳಿ ಹಿಂದ ಹಿಡಿದು ಉತ್ತರ ಕರ್ನಾಟಕದ ಬಿಜೆಪಿ ನಾಯಕರೆಲ್ಲರೂ ರಾಜು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದು ಅವರ ಪ್ರಭಾವಕ್ಕೆ ಹಿಡಿದ ಕನ್ನಡಿ. ಸದ್ಯ ಬೆಳಗಾವಿ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜಿಲ್ಲೆಯಲ್ಲಿ ತಳ ಮಟ್ಟದಿಂದ ಬಿಜೆಪಿ ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಪಕ್ಷಕ್ಕಾಗಿ ಶ್ರಮಿಸಿದ್ದ ರಾಜು ಅವರು ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿದ್ದ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಇದರ ಭಾಗವಾಗಿಯೇ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಂದಿದ್ದರು. ಟಿಕೆಟ್ ಕೊಡುವ ಬಗ್ಗೆ ಮಾತುಕತೆ ನಡೆಸಲು ಅವರು ಬೆಂಗಳೂರಿಗೆ ಬಂದಿದ್ದರು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ರಾಜು ಚಿಕ್ಕನಗೌಡ ಅವರ ಈ ನಿಗೂಢ ಸಾವು

ರಾಜು ಚಿಕ್ಕನಗೌಡ ಅವರ ಈ ನಿಗೂಢ ಸಾವು

ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದ ರಾಜು ಚಿಕ್ಕನಗೌಡ ಅವರ ಈ ನಿಗೂಢ ಸಾವು ಬೆಳಗಾವಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಬಿಜೆಪಿಯ ನಿಷ್ಠಾವಂತ ನಾಯಕ ಪ್ರತಿ ನಿತ್ಯ ಯೋಗ ಮಾಡುತ್ತಿದ್ದರು. ಹೀಗಿದ್ದರೂ ಹೃದಯಾಘಾತ ಸಾಧ್ಯವೇ ? ಅಥವಾ ಇವರ ಸಾವಿನ ಬಗ್ಗೆ ಬೇರೆ ಆಯಾಮ ಇದೆಯಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ. ಪೊಲೀಸರು ಹೇಳುವ ಪ್ರಕಾರ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ.

English summary
Suspect about BJP General Secretary of Belagavi, Raju Chikkanagowda death. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X