ಬೀಟ್ ಪೊಲೀಸರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹೊಸ ವ್ಯವಸ್ಥೆ ಜಾರಿ
ಬೆಂಗಳೂರು,
ಆ. 16: ರಾತ್ರಿ ಗಸ್ತು ತಿರುಗುವ ಪೊಲೀಸರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇ ಬೀಟ್ ವ್ಯವಸ್ಥೆ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ಇಷ್ಟು ದಿನ ಪೊಲೀಸರು ಬೀಟ್‌ಗೆ ಗುರುತಿಸಿದ್ದ ಮನೆ ಮುಂದೆ ಹಾಕಿದ್ದ ಪುಸ್ತಕದ ಹಾಳೆ ಮೇಲೆ ಸಹಿ ಹಾಕಿ ಬರುತ್ತಿದ್ದರು. ಇನ್ನು ಮುಂದೆ ಪೊಲೀಸರು ಬೀಟ್ ಪಾಯಿಂಟ್‌ಗೆ ಹೋಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಬೀಟ್ ಮಾಡಬೇಕು. ಹೇಳಿದ ರೌಡಿ ಮನೆಗೆ ಹೋಗಿ ಅವನ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು! id="toptextpromo"> id='are-slot-1' class='oiad oi-axt oiadv'>ಬೆಂಗಳೂರು
ಪೊಲೀಸರು ಸುಬಾಹು ಇ ಬೀಟ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ಮೂಲಕ ನೈಟ್ ಬೀಟ್ ಪೊಲಿಸಿಂಗ್ ಕಳ್ಳಾಟಕ್ಕೆ ಬ್ರೇಕ್ ಹಾಕುವ ಜತೆಗೆ ರಾತ್ರಿ ಪಾಳಿ ಅಪರಾಧ ಕೃತ್ಯಗಳ ನಿಯಂತ್ರಣ ಮಾಡುವಲ್ಲಿ ಅನುಕೂಲವಾಗಲಿದೆ. ಇದರಿಂದ ಬೀಟ್ ಪೊಲೀಸರು ಸೂಚಿಸಿದ ಬೀಟ್ ಗೆ ಹೋಗಿ ಬರಲೇಬೇಕು. ಜತೆಗೆ ಕಳ್ಳರು- ರೌಡಿಗಳ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ. id='are-slot-2' class='oiad oi-axt oiadv'>
ಸುಬಾಹು ಇ ಬೀಟ್
ಜಿಪಿಅರ್‌ಎಸ್ ಟ್ರಾಕಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲ್ ಜೆನ್ಸಿ ತಂತ್ರಜ್ಞಾನ ಆಪ್ ಸುಬಾಹು ಇ- ಬೀಟ್. ಇದರಲ್ಲಿ ಆ ಆಪ್‌ನ್ನು ನಿರ್ವಹಣೆ ಮಾಡುವರಿಗೆ ಸುಬಾಹು ಅಡ್ಮಿನ್, ಸುಬಾಹು ಇ ಬೀಟ್, ಹಾಗೂ ಸಾರ್ವಜನಿಕರ ಬಳಕೆಗೆ ಸುಬಾಹು ಪರ್ಸನಲ್ ಎಂಬ ಮೂರು ಅವತರಣಿಕೆ ಆಪ್ ರಚನೆ ಮಾಡಲಾಗಿದೆ. ಈ ಆಪ್ ನೆರವಿನಿಂದಲೇ ಇ ಬೀಟ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಬೀಟ್‌ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ಸೂಚಿಸಿದ ಪಾಯಿಂಟ್‌ಗೆ ಹೋಗಿ ಬೀಟ್ ಪಾಯಿಂಟ್ ನಲ್ಲಿ ಹಾಕಿರುವ ಆರ್‌ಎಫ್ ಐಡಿಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಬೀಟ್ ಹಾಕಿದ ಮೇಲಾಧಿಕಾರಿಗಳಿಗೆ ಬೀಟ್ ಜಾಗಕ್ಕೆ ಹೋಗಿ ಬಂದಿರುವ ಸಮಯ, ಎಷ್ಟು ಹೊತ್ತು ಅಲ್ಲಿದ್ದರು ಎಂಬ ಎಲ್ಲಾ ವಿವರವನ್ನು ರವಾನಿಸುತ್ತದೆ. ಹೀಗಾಗಿ ಪೊಲೀಸರು ಇನ್ನು ಮುಂದೆ ಬೀಟ್ ನಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.

ಕರ್ನಾಟಕದಲ್ಲಿ ಮೊದಲು ವಿಜಯನಗರ ಠಾಣೆಯಲ್ಲಿ
ರಾಜ್ಯದಲ್ಲಿ ಪ್ರಥಮ ಬಾರಿಗೆ ಸುಬಾಹು ಇ ಬೀಟ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು ಪಶ್ಚಿಮ ವಿಭಾಗದ ವಿಜಯನಗರ ಪೊಲೀಸ್ ಠಾಣೆಯಲ್ಲಿ. ಈ ಹಿಂದೆ ಡಿಸಿಪಿಯಾಗಿದ್ದ ಎಂ.ಎನ್.ಅನುಚೇತ್ ಅವರೇ ಪ್ರಯೋಗಿಕವಾಗಿ ಈ ಯೋಜನೆ ಜಾರಿಗೆ ವಿಜಯನಗರ ಠಾಣೆಯನ್ನು ಪ್ರಾಯೋಗಿಕವಾಗಿ ಬಳಸಿಕೊಂಡರು. ಇದು ಯಶಸ್ಸು ಆದ ಹಿನ್ನೆಲೆಯಲ್ಲಿ ಇಡೀ ರಾಜ್ಯದೆಲ್ಲೆಡೆ ಸುಬಾಹು ಇ- ಬೀಟ್ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಯಿತು. ಇದೀಗ ಬೆಂಗಳೂರಿನ ಎಲ್ಲಾ ವಿಭಾಗದಲ್ಲಿ ಇ-ಬೀಟ್ ವ್ಯವಸ್ಥೆ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ.
ಪ್ರಾಯೋಗಿಕ ಜಾರಿ ಮಾಡಿದ್ದ ಡಿಸಿಪಿ ಹೇಳಿದ್ದೇನು ?
"ಸುಬಾಹು ಇ- ಬೀಟ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ನಾನು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ವೇಳೆ ಪ್ರಾಯೋಗಿಕವಾಗಿ ವಿಜಯ ನಗರ ಠಾಣೆಯಲ್ಲಿ ಅನುಷ್ಠಾನ ಮಾಡಿದ್ದೆವು. ಆನಂತರ ನಾನು ವೈಟ್ ಫೀಲ್ಡ್ ವಿಭಾಗಕ್ಕೆ ಹೋದ ಬಳಿಕ ಬೆಳ್ಳಂದೂರು, ಮಾರತಹಳ್ಳಿ, ಕಾಡುಗೋಡಿ ಪೊಲೀಸ್ ಸ್ಟೇಷನ್ ಸೇರಿದಂತೆ ಆರು ಪೊಲೀಸ್ ಠಾಣೆಗಳಲ್ಲಿ ಇ- ಬೀಟ್ ವ್ಯವಸ್ಥೆ ಜಾರಿಗೆ ತರಲಾಯಿತು. ಕೇವಲ ಈ ಬಿಟ್ ಮಾತ್ರವಲ್ಲ, ರಾತ್ರಿ ವೇಳೆ ರೌಡಿಗಳ ಮನೆಗೆ ಹೋಗಿ ಬರುವಂತೆಯೂ ಬೀಟ್ ಪೊಲೀಸರಿಗೆ ಅಸೈನ್ ಮಾಡಲಾಗುತ್ತೆ. ಸೂಚಿಸಿದ ಜಾಗಕ್ಕೆ ಪೊಲೀಸರು ಹೋಗುತ್ತಿದ್ದಂತೆ ಮೂರು ಮೀಟರ್ ದೂರ ಇರುವಾಗಲೇ ಸಂದೇಶ ಬರುತ್ತದೆ. ಜಾಗ ತಲುಪಿದ ಕೂಡಲೇ ಆ ಪೊಲೀಸ್ ಸಿಬ್ಬಂದಿ ಕೂಡ ಫೋಟೋ ತೆಗೆದು ಆಪ್ ಮೂಲಕವೇ ಅಪ್ಲೋಡ್ ಮಾಡಬಹುದು. ಈ ಮೂಲಕ ಬೀಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮಾತ್ರವಲ್ಲದೇ, ಪ್ರಾಮಾಣಿಕ ಕೆಲಸ ಮಾಡಲಿಕ್ಕೂ ಇ ಬೀಟ್ ತುಂಬಾ ಅನುಕೂಲವಾಗಿತ್ತು ಎಂದು ಇ ಬೀಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಎಂ.ಎನ್. ಅನುಚೇತ್ 'ಒನ್ಇಂಡಿಯಾ ಕನ್ನಡ'ಕ್ಕೆ ಹಂಚಿಕೊಂಡರು.

ಉತ್ತರ ವಿಭಾಗದಲ್ಲಿ ಜಾರಿಗೆ ಪ್ರಯತ್ನ
ಹಂತ ಹಂತವಾಗಿ ಬೆಂಗಳೂರಿನಲ್ಲಿರುವ 100 ಕ್ಕೂ ಹೆಚ್ಚು ಲಾ ಅಂಡ್ ಆರ್ಡರ್ ಪೊಲೀಸ್ ಠಾಣೆಗಳಲ್ಲಿ ಈ ಇ ಬೀಟ್ ವ್ಯವಸ್ಥೆ ಜಾರಿಗೆ ಬರಲಿದೆ. ಮುಂದಿನ ಒಂದೆರಡು ವರ್ಷದಲ್ಲಿ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಇ ಬೀಟ್ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಪೊಲೀಸರು ಪ್ರಮಾಣಿಕವಾಗಿ ಬೀಟ್ ನಿಯಮ ಪಾಲಿಸಲಿದ್ದಾರೆ. ರಾತ್ರಿ ವೇಳೆ ಪುಂಡರ ಉಪಟಳಕ್ಕೂಕಡಿವಾಣ ಬೀಳಲಿದೆ. ಅಪರಾಧ ನಿಯಂತ್ರಣದಲ್ಲೂ ಇ ಬೀಟ್ ಅನುಕೂಲವಾಗಲಿದೆ. ಇದೀಗ ಬೆಂಗಳೂರಿನ ಉತ್ತರ ವಿಭಾಗದ ಪೊಲೀಸರು ಸುಬಾಹು ಇ ಬೀಟ್ ಜಾರಿಗೆ ತರಲು ಮುಂದಾಗಿದ್ದಾರೆ. ಹಂತ ಹಂತವಾಗಿ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಇ ಬೀಟ್ ಜಾರಿಗೆ ಬರಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಡಗು ಪೂರ್ತಿ ಇ ಬೀಟ್ ವ್ಯವಸ್ಥೆ ಜಾರಿ
2020 ರಲ್ಲಿ ಕೊಡಗಿನ ಜಿಲ್ಲೆಯಾದ್ಯಂತ ಇ ಬೀಟ್ ಜಾರಿಗೆ ತರಲಾಗಿದೆ. ಅಲ್ಲಿನ ಎಸ್ಪಿಯಾಗಿದ್ದ ಸುಮನ್ ಡಿ. ಪೆನ್ನೇಕರ್ ಅವರು ಪ್ರಾಯೋಗಿಕವಾಗಿ ಮಡಿಕೇರಿ ಪಟ್ಟಣದಲ್ಲಿ ಸುಬಾಹು ಇ ಬೀಟ್ ಜಾರಿಗೆ ತಂದಿದ್ದರು. ಆನಂತರ ಜಿಲ್ಲೆಯಾದ್ಯಂತ ಇ- ಸುಬಾಹು ಇ ಬೀಟ್ ಅನುಷ್ಠಾನ ಮಾಡಿದ್ದರು. ಈ ಮೂಲಕ ಸಂಪ್ರಾದಾಯಿಕ ಬೀಟ್ ವ್ಯವಸ್ಥೆ ಬಿಟ್ಟು ಇ ಬೀಟ್ ಮೂಲಕ ಪಾರದರ್ಶಕ ಬೀಟ್ ವ್ಯವಸ್ಥೆ ಜಾರಿ ಮಾಡಿ ಸುದ್ದಿಯಾಗಿದ್ದರು. ಬೀಟ್ ಪೊಲೀಸರಿಗೆ ಸುಬಾಹು ಇ ಬೀಟ್ ಆಪ್ ಬಳಿಸಿದರೆ, ಪೊಲೀಸ್ ಅಧಿಕಾರಿಗಳು ಸುಬಾಹು ಅಡ್ಮಿನ್ ಎಂಬ ಆಫ್ ಬಳಿಸಿ ಬೀಟ್ ಪೊಲೀಸರ ಕಾರ್ಯ ಚಟುವಟಿಕೆ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ.

ಸಾರ್ವಜನಿಕರೂ ಸುಬಾಹು ಬಳಸಬಹುದು
ಸಾರ್ವಜನಿಕರಿಗೆ ಅನುಕೂಲವಾಗುವ ಸುಬಾಹು ಇ- ಬೀಟ್ ಆಪ್ ಅಭಿವೃದ್ಧಿ ಪಡಿಸಿದೆ. ಸುಬಾಹು ಪರ್ಸನಲ್ ಹೆಸರಿನ ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸಮೀಪದ ಪೊಲೀಸರನ್ನು ಸಂಪರ್ಕಿಸಬಹುದು. ಅಥವಾ ಯಾವುದೇ ಅಪರಾಧ ಕೃತ್ಯದ ಇತರೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಬಹುದು. ಸಾರ್ವಜನಿಕರು ಈ ಆಪ್ ಬಳಸಲು ಸುಬಾಹು ಅವಕಾಶ ನೀಡಿದೆ.












Click it and Unblock the Notifications