ಪ್ರತಿಕ್ರಿಯೆ : ವೆಂಕಯ್ಯ ನಾಯ್ಡು ಕರ್ನಾಟಕಕ್ಕೆ ದ್ರೋಹ ಮಾಡಿಲ್ಲವೇ?

ಬೆಂಗಳೂರು, ನ.26 : ಸಂಸದರು ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಅದನ್ನು ಅಭಿವೃದ್ಧಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಯ್ಡು ಅವರು ಕರ್ನಾಟಕದ ಗ್ರಾಮವನ್ನು ಏಕೆ? ಆಯ್ಕೆ ಮಾಡಲಿಲ್ಲ ಎಂದು ನಮ್ಮ ಓದುಗರಾದ ಭಾಸ್ಕರ್ ಭಟ್ ಪ್ರಶ್ನಿಸಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಅವರು 'ಸಂಸದರ ಆದರ್ಶ ಗ್ರಾಮ ಯೋಜನೆ'ಯಡಿ ಆಂಧ್ರಪ್ರದೇಶದ ಉಪ್ಪಾಡ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.[ಕರ್ನಾಟಕ ಸಂಸದರು ಆಯ್ಕೆ ಮಾಡಿಕೊಂಡ ಗ್ರಾಮಗಳು]

Venkaiah Naidu

ಆಂಧ್ರಕ್ಕೆ ಅಪ್ಪಳಿಸಿದ್ದ ಹುಡ್-ಹುಡ್ ಚಂಡಮಾರುತ ಹಲವು ಗ್ರಾಮಗಳಲ್ಲಿ ಭಾರೀ ನಷ್ಟ ಉಂಟುಮಾಡಿದೆ. ಉಪ್ಪಾಡ ಗ್ರಾಮದಲ್ಲಿಯೂ ನಷ್ಟ ಸಂಭವಿಸಿದೆ. ಆದ್ದರಿಂದ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ದತ್ತು ತೆಗೆದುಕೊಳ್ಳುತ್ತಿರುವುದಾಗಿ ವೆಂಕಯ್ಯ ನಾಯ್ಡು ಅವರು ತಿಳಿಸಿದ್ದರು. [ಚಂಡಮಾರುತದ ಚಿತ್ರಗಳನ್ನು ನೋಡಿ]

ಆದರೆ, ಭಾಸ್ಕರ್ ಭಟ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು ರಾಜ್ಯದಲ್ಲಿನ ಗ್ರಾಮವನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು. ಆಂಧ್ರಪ್ರದೇಶದ ಗ್ರಾಮವನ್ನು ಏಕೆ ಆಯ್ಕೆ ಮಾಡಿಕೊಂಡರು. ಇದು ಕನ್ನಡಿಗರಿಗೆ ಮಾಡಿದ ದ್ರೋಹವಲ್ಲವೇ?.

ಕರ್ನಾಟಕದಲ್ಲಿ ನೂರಾರು ಗ್ರಾಮಗಳು ಅಭಿವೃದ್ಧಿಯಾಗಬೇಕಾಗಿವೆ. ಆಂಧ್ರಪ್ರದೇಶದ ಸಂಸದರು ಉಪ್ಪಾಡ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅದನ್ನು ಅಭಿವೃದ್ಧಿ ಮಾಡಲಿ. ನಮ್ಮ ರಾಜ್ಯದಿಂದ ಆಯ್ಕೆಯಾದ ಸಂಸದರು ಕರ್ನಾಟಕದಲ್ಲಿನ ಗ್ರಾಮವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಭಾಸ್ಕರ್ ಒತ್ತಾಯಿಸಿದ್ದಾರೆ.

ಕರ್ನಾಟಕ ಬಿಜೆಪಿ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಿದೆ. ಅವರಿಗೆ ಮತ ನೀಡಿ ರಾಜ್ಯಸಭೆಗೆ ಕಳಿಸಿರುವುದು ನಮ್ಮ ಶಾಸಕರು. ಆದ್ದರಿಂದ ವೆಂಕಯ್ಯ ನಾಯ್ಡ ಅವರು ಕರ್ನಾಟಕದ ಹಿತವನ್ನು ಕಾಪಾಡಬೇಕು. ನಮ್ಮ ರಾಜ್ಯದ ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+