• search
For Quick Alerts
ALLOW NOTIFICATIONS  
For Daily Alerts

  ಮಠಗಳ ಸುಪರ್ದಿ ಸರಕಾರಕ್ಕೆ: ಒನ್ ಇಂಡಿಯಾ ಓದುಗರು ಏನಂತಾರೆ?

  By ಒನ್ಇಂಡಿಯಾ ಡೆಸ್ಕ್
  |

  ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ಚರ್ಚೆ ಶುರುವಾದಷ್ಟೇ ವೇಗವಾಗಿ ಕಾವು ಪಡೆದು, ಅಷ್ಟೇ ವೇಗವಾಗಿ ಈ ವಿಚಾರ ಮರೆಯಾಗುವಂತೆಯೂ ಕಾಣುತ್ತಿದೆ. ಆದರೆ ಮಠ, ಚರ್ಚ್, ಮಸೀದಿ ಎಲ್ಲವನ್ನೂ ಸರಕಾರ ಸುಪರ್ದಿಗೆ ಪಡೆಯಲಿ ಎಂದು ಒನ್ಇಂಡಿಯಾ ಕನ್ನಡ ಓದುಗ ಅನಿಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಆ ಲೇಖನಕ್ಕೆ ಪ್ರತಿಯಾಗಿ ಅನೇಕರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬಹುತೇಕರು ಸರಕಾರ ಈ ರೀತಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. ತಮ್ಮ ವಾದಕ್ಕೆ ಪುಷ್ಟಿ ನೀಡುವಂಥ ಅಂಶಗಳನ್ನು ಸಹ ಹಾಕಿದ್ದಾರೆ. ಅವುಗಳನ್ನೆಲ್ಲ ಇಲ್ಲಿ ಹಾಕಲಾಗಿದೆ. ಈ ಬಗ್ಗೆ ವಾದ ಸರಣಿಯನ್ನು ಮುಂದುವರಿಸಬಹುದು.

  ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?

  ಸರಕಾರದ ಪರವಾಗಿ ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ, ಒಂದು ವೇಳೆ ಕಾಯ್ದೆ ಜಾರಿಗೆ ತರಲಿಲ್ಲ ಅಂದರೆ ಮೂವತ್ನಾಲ್ಕು ಸಾವಿರ ದೇವಾಲಯಗಳ ಸ್ಥಿತಿ ಡೋಲಾಯಮಾನ ಆಗುತ್ತದೆ. ಆದ್ದರಿಂದ ನಿರ್ಧಾರ ಈಗಲೂ ಸಂಪೂರ್ಣ ಕೈ ಬಿಟ್ಟಿಲ್ಲ ಅಂತಲೇ ಹೇಳಿದ್ದಾರೆ. ಒಟ್ಟಾರೆ ಸರಕಾರದ ಈ ನಡೆಗೆ ಓದುಗರು ಅಭಿಪ್ರಾಯ ಏನು, ಈ ಹಿಂದೆ ಪ್ರಕಟವಾದ ಲೇಖನಕ್ಕೆ ಸಿಕ್ಕ ಉತ್ತರ ಎಂಥದ್ದು ಎಂಬುದಕ್ಕೆ ಮುಂದೆ ಓದಿ.

  ಸುಬ್ರಮಣ್ಯ, ಬರ್ಲಿನ್

  ಸುಬ್ರಮಣ್ಯ, ಬರ್ಲಿನ್

  ಮಾನ್ಯ ಅನಿಲ್ ಅವರೆ, ನಿಮ್ಮ ವಾದ ಕೇವಲ ಬಾಹ್ಯ ಅಥವಾ ಸರ್ಫೇಸ್ ಲೆವೆಲ್ ವಿಚಾರಗಳಾಗಿವೆ. ಅಂದರೆ ನೀವು ಈ ವಿಚಾರದ ಬಗ್ಗೆ ಇನ್ನೂ ಹೆಚ್ಚು ತಲಸ್ಪರ್ಶಿ ಅಧ್ಯಯನ ನಡೆಸಿದರೆ ಮಠಗಳ ಕಾರ್ಯ ಚಟುವಟಿಕೆ ಹಾಗೂ ವಿವಿಧೋದ್ದೇಶಗಳ ಬಗ್ಗೆ ತಿಳಿಯುತ್ತದೆ.

  ನಿಮ್ಮ ಕೆಲವು ವಿಚಾರಗಳಿಗೆ ನನ್ನ ಉತ್ತರ:

  * ಸರಕಾರಿ ಅನುದಾನದಲ್ಲಿ ಮಠಗಳು ನಡೆಸುತ್ತಿದ್ದಾರೆ ಎನ್ನುವ ಸಂಸ್ಥೆಗಳಲ್ಲಿ ಎಷ್ಟೊಂದು ಬಡ ಹಾಗು ಮಧ್ಯಮವರ್ಗದ ಜನರು ಶಿಕ್ಷಣ ಪಡೆದು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಇನ್ನು ಸರಕಾರವೇ ಉಚಿತ ಶಿಕ್ಷಣ ನೀಡಲಿ ಎಂದಿದ್ದೀರಿ. ಸರಕಾರ ನಡೆಸುವ ಸಂಸ್ಥೆಗಳ ಗುಣಮಟ್ಟ ಎಲ್ಲರಿಗೂ ತಿಳಿದಿರುವಂಥದ್ದೆ! ಮರೆಯಬೇಡಿ, ಜಾಗತೀಕರಣದಿಂದಾಗಿ ನಾವು ಕೇವಲ ಕರ್ನಾಟಕ ಹಾಗೂ ಭಾರತೀಯರ ನಡುವೆ ಮಾತ್ರವಲ್ಲದೆ ಎಲ್ಲ ದೇಶಗಳ ಜನರ ಮಧ್ಯೆ ಪೈಪೋಟಿ ಎದುರಿಸಬೇಕಾಗುತ್ತದೆ.

  ಇದಕ್ಕೆ ಅತ್ಯುತ್ತಮ ಗುಣಮಟ್ಟ ಇರುವ ಶಿಕ್ಷಣ ಅತ್ಯವಶ್ಯಕ. ಮಠ- ಮಾನ್ಯಗಳ ಸಂಸ್ಥೆಗಳು ಜಾಗತಿವಾಗಿ ಹೆಸರು ಮಾಡಿರುವುದು ಎಲ್ಲರಿಗೂ ತಿಳಿದಿರುವಂಥದ್ದೇ.

  * ಕಡಿಮೆ ದರದಲ್ಲಿ ಉತ್ತಮ ಶಿಕ್ಷಣ ನೀಡಲು ಕೆಲವು ಮಠಗಳು ವಾಣಿಜ್ಯ ಕಾಂಪ್ಲೆಕ್ಸ್ ಅಥವಾ ಬೇರೆ ವ್ಯವಹಾರ ನಡೆಸಿರಬಹುದು. ಇಂದು ಒಂದು ಶಿಶುವಿಹಾರ ನಡೆಸಲೇ ಕಷ್ಟ ಇರೋವಾಗ ಇನ್ನು ಜಾಗತಿಕ ಮಟ್ಟದ ಸಂಸ್ಥೆಗಳನ್ನು ನಡೆಸಲು ಎಷ್ಟು ಸಂಪನ್ಮೂಲ ಬೇಕಾಗಬಹುದು ? (ದಯಮಾಡಿ, ಮಠಗಳು ಸದುದ್ದೇಶಗಳಿಗೆ ನಡೆಸುತ್ತಿರುವ ವ್ಯವಹಾರಗಳಿಗೆ ಬಡ್ಡಿ- ವ್ಯವಹಾರ ಎಂಬ ಲೇಪನ ಮಾಡಬೇಡಿ!).

  * ಸರಕಾರವೇ ಎಲ್ಲ ಧರ್ಮದ ಸಂಸ್ಥೆಗಳನ್ನು ವಶಕ್ಕೆ ಪಡೆಯಲಿ ಎಂದಿದ್ದೀರಿ. ಸರಕಾರ ಮೊದಲು ತನ್ನ ಬಳಿ ಇರೋ portfolio / subject ಗಳಲ್ಲಿ ಅತ್ಯುತ್ತಮವಾದ ಯಶಸ್ಸು ಪಡೆಯಲಿ. ಸರಕಾರ ಎಲ್ಲ ವರ್ಗದ ಜನರಿಗೆ ಉತ್ತಮವಾದ ಕಾನೂನು ಸುವ್ಯವಸ್ಥೆ, ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ಬಡತನ ನಿರ್ಮೂಲನೆ ಕಡೆ ಗಮನಹರಿಸಲಿ. ಮಠ ಅಥವಾ ಇನ್ಯಾವುದೇ ಧರ್ಮ ಸಂಸ್ಥೆಗಳ ವಿಚಾರದಲ್ಲಿ ಮೂಗು ತೂರಿಸಿ ಅವುಗಳನ್ನು ನಿಷ್ಕ್ರಿಯಗೊಳಿಸೋದು ಬೇಡ!

  ಸಾಗರ್

  ಸಾಗರ್

  ಸರಕಾರ ಈಗಾಗಲೇ ಸುಪರ್ದಿಗೆ ತೆಗೆದುಕೊಂಡ ಮುಜರಾಯಿ ಇಲಾಖಾ ದೇವಾಲಯಗಳ ಆದಾಯ ಹಾಗೂ ಅದರ ಸದ್ಬಳಕೆಯ ಲೆಕ್ಕ ಕೊಡಲಿ. ಮುಜರಾಯಿ ದೇವಾಲಯಗಳು ಮೂಲಸೌಕರ್ಯ ವಂಚಿತವಾಗಿವೆ. ನಮ್ಮದು ಜಾತ್ಯತೀತ ರಾಷ್ಟ್ರ. ವಶಕ್ಕೆ ತೆಗೆದುಕೊಳ್ಳುವುದಾದರೆ ಎಲ್ಲ ದೇವಸ್ಥಾನ, ಮಠ, ಚರ್ಚ್, ಮಸೀದಿ, ಟ್ರಸ್ಟ್, ಮಿಷನರಿ, ವಕ್ಫ್ ಗಳನ್ನು ತೆಗೆದುಕೊಂಡು, ಸರಕಾರಿ ಶಾಲೆ ಹಾಗೂ ಸರಕಾರಿ ಆಸ್ಪತ್ರೆ ತೆರೆದು ಹೈಟೆಕ್ ಶಿಕ್ಷಣ ಹಾಗೂ ಹೈಟೆಕ್ ಹೆಲ್ತ್ ವ್ಯವಸ್ಥೆ ಬರುವಂತೆ ನೋಡಿಕೊಳ್ಳಲಿ.

  ಸೇವೆ ಮಾಡುವ ಮನಸ್ಸು ಇರುವ ಮಠ, ಮಿಷನರಿ, ವಕ್ಫ್ ಬೋರ್ಡ್ ಗಳು ಶಿಕ್ಷಣ ಕೇಂದ್ರ ಹಾಗೂ ಅರೋಗ್ಯ ಕೇಂದ್ರ ತೆಗೆಯಲು ಅನುಮತಿ ನೀಡಬೇಡಿ. ಸೇವೆ ಮಾಡುವ ಮನಸಿದ್ದರೆ ಸರಕಾರಿ ಶಾಲೆ ಹಾಗೂ ಸರಕಾರಿ ಆಸ್ಪತ್ರೆಯನ್ನೇ ಅವರಿಗೆ ದತ್ತು ಕೊಡಿ. ಮಠ ಮಿಷನರಿ ಹಾಗೂ ವಕ್ಫ್ ಬೋರ್ಡ್ ಗಳಿಗೆ ಉಚಿತ ಭೂಮಿ ಕೊಡುವ ಪರಿಪಾಠ ನಿಷೇಧಿಸಿ. ಇಂದು ಭಾರತೀಯ ರೈಲ್ವೆ ಬಿಟ್ಟರೆ ಅತಿ ಹೆಚ್ಚು ಅಸ್ತಿ ಹೊಂದಿರುವುದು ವಕ್ಫ್ ಬೋರ್ಡ್. ಆ ನಂತರದ ಸ್ಥಾನದಲ್ಲಿ ಮಿಷನರಿ ಮತ್ತು ಮಠಗಳಿವೆ.

  ಪ್ರತಿ ಜಾತಿಗೂ ಮಠಗಳಿವೆ ಅವುಗಳಿಂದ ಆಯಾ ಜಾತಿಗಳ ಉದ್ಧಾರ ಆಗುವುದು ಮರಿಚೀಕೆಯಾಗಿದೆ. ಕೇವಲ ರಾಜಕಾರಣಿಗಳ ರಾಜಕೀಯದ ರೆಸಾರ್ಟ್ ಆಗಿವೆ. ಸರಕಾರವು ಮಠ, ಮಿಷನರಿ, ವಕ್ಫ್ ಗಳ ಆದಾಯದ ಮೇಲೆ ಹಾಗೂ ಅವುಗಳ ಮೂಲದ ಮೇಲೆ ಗಮನ ಹರಿಸಲಿ. ಸೇವೆ ಮಾಡುವುದಿದ್ದರೆ ಈಗಾಗಲೇ ಇರುವ ಸರಕಾರಿ ಶಾಲೆ ಹಾಗೂ ಆಸ್ಪತ್ರೆ ದತ್ತು ತೆಗೆದುಕೊಂಡು ಮಾಡಲಿ. ಅವರಿಗ್ಯಾಕೆ ಸ್ವಂತ ಶಾಲೆ ಅಥವಾ ಆಸ್ಪತ್ರೆ ?

  ಕೇವಲ ಮಠಗಳನ್ನು ಮಾತ್ರ ಸರಕಾರ ತನ್ನ ಸುಪರ್ದಿಗೆ ತೆಗೆದು ಕೊಳ್ಳುವುದು ಒಂದು ಧರ್ಮವನ್ನು ಗುರಿಯಾಗಿಸಿ ನಡೆಸುವ ದಾಳಿ. ಇದು ಯಾವುದೇ ಸರಕಾರಕ್ಕೆ ಶೋಭೆಯಲ್ಲ.

  ಅನಂತ್

  ಅನಂತ್

  ಕಾನೂನು ಎಲ್ಲರಿಗೂ ಒಂದೇ ಇರಲಿ, ಬರೀ ಮಠಗಳನ್ನು ಮಾತ್ರ ಸರಕಾರದ ಸುಪರ್ದಿಗೆ, ಚರ್ಚು ಮತ್ತು ಮಸೀದಿಗೆ ವಿನಾಯಿತಿ ಅಂದರೆ ಅದು ಸರಿಯಲ್ಲ. ಇದು ಹಿಂದೂ ವಿರೋಧಿ ನೀತಿ. ನಮ್ಮ ನೆಲದಲ್ಲಿ ನಮ್ಮ ನೆಲದಲ್ಲಿ ನಮ್ಮನ್ನು ವಿರೋಧಿಸುವ ಸರಕಾರವನ್ನು ನಾವು ಖಂಡಿಸುತ್ತೇವೆ.

  ಜಗನ್ನಾಥ್ ಕೆ.

  ಜಗನ್ನಾಥ್ ಕೆ.

  ಏನ್ ಸ್ವಾಮಿ, ಇಷ್ಟು ಸಿಂಪಲ್ ಆಗಿ ಹೇಳುತ್ತಿದ್ದೀರಿ. ಮುಜರಾಯಿ ಇಲಾಖೆಗೆ ಈಗಾಗಲೇ ಸೇರಿರುವ ಸಾವಿರದ ಮುನ್ನೂರು ದೇವಸ್ಥಾನಗಳನ್ನು ನೀವು ನೋಡಿದ್ದೀರಾ? ಏನಾದರೂ ಬೆಳವಣಿಗೆ ಅಥವಾ ಅಭಿವೃದ್ಧಿ ಸರಕಾರದಿಂದ ಆಗಿದೆಯಾ? ಕನಿಷ್ಠ ಸೌಲಭ್ಯ ಸಹ ಒದಗಿಸಿರುವುದಿಲ್ಲ.

  ಮುಜರಾಯಿ ಇಲಾಖೆಯಲ್ಲಿ ಹಿಂದೂಯೇತರ ವ್ಯಕ್ತಿಗಳನ್ನು ನೇಮಿಸಿಕೊಂಡಲ್ಲಿ ಯಾರೂ ಒಪ್ಪುವುದಿಲ್ಲ. ಎಲ್ಲ ಮಠ, ದೇವಸ್ಥಾನಗಳನ್ನು ಯಾಕೆ ನೀವು ಕೆಟ್ಟದಾಗಿ ಚಿಂತಿಸುತ್ತೀರಿ? ಈಗ ಇರುವ ಸರಕಾರಗಳು ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ. ಆದಾಯ ಇರುವ ದೇವಸ್ಥಾನಗಳ ಮೇಲೆ ನಿಗಾ ಇಟ್ಟು, ಸರಕಾರಕ್ಕೆ ಬರಬೇಕಾದ ಹಣ ಅಥವಾ ಟ್ಯಾಕ್ಸ್ ವಸೂಲು ಮಾಡಲು ಸೂಕ್ತ ಕ್ರಮ ತೆಗೆದುಕೊಂಡರೆ ಸಾಕು.

  ಮಧು ಶಾಸ್ತ್ರಿ

  ಮಧು ಶಾಸ್ತ್ರಿ

  ನಿಮ್ಮ ಅಭಿಪ್ರಾಯಕ್ಕೆ ನನ್ನ ವಿರೋಧವಿದೆ. ನೀವು ಎಲ್ಲವನ್ನೂ ಒಂದೇ ತೂಕದಿಂದ ನೋಡುವಂತಿಲ್ಲ. ಎಲ್ಲ ಮಠಗಳು ವ್ಯಾಪಾರೀಕರಣ ಮಾಡುತಿಲ್ಲ. ಎಲ್ಲ ದೇವಸ್ಥಾನಗಳು ವ್ಯಾಪಾರ ಮಾಡುತ್ತಿಲ್ಲ. ನಿಯತ್ತಿನಿಂದ ಮತ್ತು ಭಕ್ತಿಯಿಂದ ಇರುವ ಸಾವಿರಾರು ದೇವಸ್ಥಾನಗಳಿವೆ. ಮತ್ತ್ತೊಂದು ಮಾತು, ಯಾವ ದೇವಸ್ಥಾನವು ನಿಮ್ಮಿಂದ ಬಲವಂತವಾಗಿ ದುಡ್ಡನ್ನು ವಸೂಲಿ ಮಾಡುವುದಿಲ್ಲ. ಹಾಗೆಂದ ಮೇಲೆ ನಿಯಂತ್ರಣ ಯಾಕೆ?

  ನಿಮಗೆ ಇಷ್ಟವಿಲ್ಲವೇ? ಬೇಡ ಬಿಡಿ ದೇವಸ್ಥಾನಕ್ಕೆ ಹೋಗಬೇಡಿ. ದುಡ್ಡು ಕೊಡಬೇಡಿ. ಆದರೆ ಒಂದು ಮಾತು, ಯಾವುದೇ ಮಂದಿರ, ಮಸೀದಿ, ಚರ್ಚುಗಳು ಅಧರ್ಮದ ಕೆಲಸ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಿ. ಅದು ಬಿಟ್ಟು ಪೆದ್ದ ಪೆದ್ದ ಮಸೂದೆಗಳನ್ನು ಮಾಡುವುದನ್ನು ಒಪ್ಪುವುದಿಲ್ಲ. ಧರ್ಮ, ದೇವರು ಎಲ್ಲ ವೈಯಕ್ತಿಕ ವಿಚಾರ. ಸರಕಾರ ಇದರಲ್ಲಿ ರಾಜಕೀಯ ಮಾಡಬಾರದು.

  ವೆಂಕಟೇಶ್

  ವೆಂಕಟೇಶ್

  ಅನಿಲ್, ನಿಮ್ಮ ವಾದವೇನೋ ಸರಿಯಿದೆ. ಇಲ್ಲಿ ಸರಕಾರ ಮಸೀದಿ, ಮಿಷನರಿ, ಇಗರ್ಜಿ, ಹಿಂದೂಯೇತರ ಸಂಸ್ಥೆಗಳನ್ನು ಬೇರ್ಪಡಿಸುತ್ತಿರುವುದು ಅನುಮಾನಿಸುವಂತಿದೆ. ಹಾಗೆ ನೋಡಿದರೆ ಶಿಕ್ಷಣದ ಹೆಸರಿನಲ್ಲಿ ಸುಲಿಗೆ ಶುರುವಾಗಿದ್ದೇ ಕ್ರೈಸ್ತ ಸಂಸ್ಥೆಗಳಿಂದ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯೋದು ಸರಿಯೆ?

  ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ ನಮ್ಮ ಪ್ರಜಾ ಸ್ಥಾಪಿತ ಸರಕಾರಗಳು ಪ್ರಜೆಗಳ ಹಣಕ್ಕೆ ಲೆಕ್ಕ ಕೊಡುತ್ತಿವೆಯೆ? ಹೊಸ ಸರಕಾರ ಬಂದಾಗ ಹಿಂದಿನ ಸರಕಾರದ ಬ್ಯಾಲೆನ್ಸ್ ಎಷ್ಟು? ನಾವು ಏನು ಮಾಡುತ್ತಿದ್ದೇವೆ ಎಂದು ಲೆಕ್ಕ ಕೊಡುತ್ತಿವೆಯೆ? ಇಡೀ ಕರ್ನಾಟಕದ ಆಗುಹೋಗುಗಳಿಗೆ ಜವಾಬ್ದಾರರಾಗದವರು ಇವುಗಳನ್ನು ಸರಿಯಾಗಿ ನಿಭಾಯಿಸುತ್ತಾರೆಂದು ನಿಮಗೆ ಹೇಗನ್ನಿಸುತ್ತಿದೆ?

  ಜೈ ಹಿಂದ್

  ಜೈ ಹಿಂದ್

  ನಿಮ್ಮದು ಅಸಂಬದ್ಧ ತರ್ಕ. ಎಲ್ಲವೂ ಸರಕಾರವೇ ಮಾಡಲಿ ಎನ್ನುವುದು ನಿಮ್ಮ ಕಮ್ಯುನಿಸ್ಟ್ ಮನಸ್ಥಿತಿಯನ್ನು ತೋರಿಸುತ್ತದೆ. ಈ ಕಮ್ಮುನಿಸ್ಟ್ ಸಿದ್ಧಾಂತ ಈಗಾಗಲೇ ಪ್ರಪಂಚಾದ್ಯಂತ ಮೂಲೆ ಸೇರಿದೆ!

  ಸರಕಾರವಿರುವುದು ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ಅಷ್ಟೇ. ಮಿಕ್ಕದ್ದನ್ನು ಆಯಾಯ ಮಠ- ಮಾನ್ಯ, ಸಂಸ್ಥೆಗಳಿಗೆ ಬಿಡಿ. ಅದೂ ಧಾರ್ಮಿಕ ಚಟುವಟಿಕೆಗಳಲ್ಲಿ ಮೂಗು ತೂರಿಸಲು ಸರಕಾರಕ್ಕಾಗಲಿ, ಇಲ್ಲ ಹೀಗೆಯೇ ಮಾಡಬೇಕೆಂದು ಸೂಚಿಸುವ ಯಾವುದೇ ಕಾನೂನಿಗಾಗಲಿ ಅವಕಾಶವಿಲ್ಲ.

  ಹೀಗಿದ್ದೂ ಯಾವುದಾದರೂ ಮಠ- ಮಾನ್ಯಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆಗ ಆ ಸಂಸ್ಥೆಗೆ ಆಢಳಿತ ನಿರ್ವಹಣಾ ಅಧಿಕಾರಿಯನ್ನು ನೇಮಿಸಿ ಸರಿಪಡಿಸಬಹುದು. ಅದೇ ಸರಕಾರ ಜನಹಿತಕ್ಕಾಗಿ ಮಾಡಬಹುದಾದ ಕಾರ್ಯ.

  ಸರಕಾರ ತನ್ನ ಜವಾಬ್ದಾರಿ ಇರುವ ಕೆಲಸಗಳನ್ನು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಾಗದಂತೆ ಆಡಳಿತ ನಡೆಸಿದರೆ ಅಷೇ ಸಾಕು.

  ಸತ್ಯನಾರಾಯಣ ಎನ್.ವಿ.

  ಸಿಕ್ಕಾಪಟ್ಟೆ ಲಾಭ ಮಾಡುತ್ತಿರುವ ಖಾಸಗಿ ಕಾರ್ಖಾನೆಗಳನ್ನು ಸಹ ಸರಕಾರ ವಶಕ್ಕೆ ಪಡೆಯಲಿ.

  ಅಜಿತ್

  ಮತಾಂತದ ದುರುದ್ದೇಶದಿಂದ ಹೊರಗಡೆಯಿಂದ ಹರಿದು ಬಂದು, ಚರ್ಚ್ ಗಳಲ್ಲಿ ಕೊಳೆಯುತ್ತಿರುವ ಸಂಪತ್ತು ಕಣ್ಣಿಗೆ ಕಾಣಿಸಿಲ್ಲವೇ? ಲೆಕ್ಕ ಹಾಕಿದರೆ ಹಿಂದೂ ಮಠ ಸಂಸ್ಥಾನಗಳಿಂದ ನಡೆಸುವ ಶಾಲಾ ಕಾಲೇಜುಗಳಿಗಿಂತ ಕ್ರಿಶ್ಚಿಯನ್ ಶಾಲಾ- ಕಾಲೇಜುಗಳೇ ಜಾಸ್ತಿ ಇವೆ. ಇವೆಲ್ಲ ಲೇಖಕರ ಕಣ್ಣಿಗೆ ಕಾಣಿಸಿಲ್ಲವೇ? ಅಥವಾ ಇವುಗಳಿಂದ ಬರುತ್ತಿರುವ ಸೂಟ್ ಕೇಸ್ ಗಳು ಸರಕಾರದ ಬಾಯಿ ಮುಚ್ಚಿಸಿವೆಯಾ?

  ಪ್ರದೀಪ್

  ಪ್ರದೀಪ್

  ದೇವಸ್ಥಾನ ಹಾಗೂ ಮಠದ ಸುದ್ದಿಗೆ ಹೋದರೆ ಜನರು ದಂಗೆ ಏಳುತ್ತಾರೆ. ಅದರಲ್ಲೂ ಕಾಂಗ್ರೆಸ್ ಸರಕಾರಕ್ಕೆ ಮಾನ- ಮರ್ಯಾದೆ ಇಲ್ಲ. ಯಾವ ಅಧಿಕಾರ ಇದೆ? ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋಣ. ನಿಮ್ಮ ಒಂದೊಂದು ಮತ ಬಿಜೆಪಿಗೆ ಹಾಕಿ, ನವ ಕರ್ನಾಟಕ ನಿರ್ಮಾಣ ಮಾಡಿ.

  ಅಡವೀರಯ್ಯ

  ಈ ಒಂದು ಲೇಖನ ನೋಡಿ ನನಗೆ ನಗು ಬರುತ್ತಿದೆ ಅಂದರೆ ತಪ್ಪಿಲ್ಲ.

  ಒಂದು ಪ್ರಶ್ನೆ ಹಾಕಿಕೊಂಡು ನಾವು ಇದರ ಬಗ್ಗೆ ವಿಮರ್ಶೆ ಮಾಡೋಣ. ಏನದು ಎಂದರೆ, ಒಬ್ಬ ಕೆಳ ದರ್ಜೆ ನೌಕರನಿಂದ ಹಿಡಿದು ಮುಖ್ಯಮಂತ್ರಿವರೆಗೂ ಎಲ್ಲರೂ ವಿಶೇಷ ಭ್ರಷ್ಟಾಚಾರ ಮಾಡಿ, ಲಂಚ ಪಡೆದು, ಪ್ರಜೆಗಳು ಕಟ್ಟಿರುವ ತೆರಿಗೆ ಹಣವನ್ನು ಲೂಟಿ ಹೊಡೆದು, ಎಷ್ಟೋ ಬಂಗಲೆ, ಐಷಾರಾಮಿ ಕಾರು, ಇನ್ನು ಅನೇಕ ಪುಕ್ಕಟೆ ಪಡೆದು ಆನಂದವಾಗಿ ಬದುಕು ನಡೆಸುತ್ತಿದ್ದಾರೆ.

  ಆದರೆ, ಒಬ್ಬ ಮಾಧ್ಯಮ ವರ್ಗದ ಕುಟುಂಬದ ಯಜಮಾನ ಒಂದು ಚಿಕ್ಕ ಮನೆಯನ್ನು ಬ್ಯಾಂಕ್ ನಲ್ಲಿ ಲೋನ್ ತೆಗೆದುಕೊಂಡು ಕಟ್ಟಲು ಹಾರ ಸಾಹಸ ಮಾಡಿ, ಜೀವನ ನಡೆಸಲು ಎಲ್ಲ ರೀತಿಯ ಕಸರತ್ತು ಮಾಡಿ, ಜೀವನ ನಡೆಸುತ್ತಾನೆ. ಜೊತೆಗೆ ಮನಶ್ಶಾಂತಿಗೆ ಮಠ- ಮಾನ್ಯ ಇಲ್ಲವೇ ದೇಗುಲಕ್ಕೆ ಹೋಗಿ ತನ್ನ ಇಚ್ಛೆಗೆ ಅನುಗುಣವಾಗಿ ದೇಣಿಗೆ ನೀಡುತ್ತಾನೆ. ಆದರೆ ಇಂದಿಗೂ ಆ ದೇಣಿಗೆ ಬಗ್ಗೆ ಮನಸ್ಸಲ್ಲೂ ಯೋಚನೆ ಮಾಡೊಲ್ಲ. ಇದು ಅವನ ವೈಯಕ್ತಿಕ ವಿಷಯ.

  ಇಲ್ಲಿ ಪುಕ್ಕಟೆ ಹಣ ಪಡೆದ ಕಳ್ಳರು ರಾಜ್ಯವನ್ನು ಆಳುತ್ತಾ, ಈ ಮಧ್ಯಮ ವರ್ಗದ ಜನರ ಭಕ್ತಿಯ ಹಣಕ್ಕೂ ಕಣ್ಣು ಹಾಕಲು ವಿಶೇಷ ಹುನ್ನಾರ ನಡೆಸುತ್ತಾರೆ. ಅದನ್ನು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎನಿಸಿಕೊಂಡ ಸರಕಾರಿ ಭಿಕ್ಷುಕರು ಬೆಂಬಲ ನೀಡಿ ಲೇಖನ ಹಾಗೂ ಹೇಳಿಕೆ ನೀಡುತ್ತಾರೆ.

  ಆದರೆ, ಸಮಾಜಕ್ಕೆ ಈ ಕಳ್ಳರು, ಬುದ್ಧಿಜೀವಿಗಳು ಹಾಗೂ ಪ್ರಗತಿಪರರಿಂದ ವಿಪರೀತ ಹಾನಿಯೇ ಹೊರತು ಯಾವ ರೀತಿಯ ಸೇವೆ ಆಗಲಿ, ಒಳಿತಾಗಲಿ ಸಾಧ್ಯವೇ ಇಲ್ಲ.

  ಈಗ ಏನೋ ಕೈಲಾದ ಸಮಾಜ ಸೇವೆಯನ್ನು ಮಾಡುವ ಮಠ- ಮಾನ್ಯಗಳನ್ನು ಹಾಳು ಮಾಡಲು ಹುನ್ನಾರ. ಅದು ಯಾವ ಅಂಶಗಳ ಮೂಲಕ ಇದನ್ನು ಸಮರ್ಥನೆ ಮಾಡಬೇಕೋ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  One India Kannada readers response to decision of state government take over of mutt. Lot of readers against to the decision. Before that one of the reader supported the decision. But several opposed that view.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more