ಇದು ವ್ಯಾಪಾರ ಸೂತ್ರ, ಕ್ಯಾಬ್ ಡ್ರೈವರ್ ಅನುಭವಕ್ಕೆ ಓದುಗರ ಸ್ಪಂದನೆ

Posted By:
Subscribe to Oneindia Kannada

ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಅನುಭವವನ್ನು ಒನ್ಇಂಡಿಯಾ ಕನ್ನಡ ಪ್ರಕಟಿಸಿತ್ತು. ಆ ಲೇಖನಕ್ಕೆ ಫೇಸ್ ಬುಕ್ ಮೂಲಕ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ಮಂದಿ ಅವರ ಅನುಭವವನ್ನು ಸತ್ಯ, ಶೇ ನೂರರಷ್ಟು ಸತ್ಯ ಎಂದೇ ಅನುಮೋದಿಸಿದ್ದಾರೆ. ಒಟ್ಟಿನಲ್ಲಿ ಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಪೈಕಿ ಆಯ್ದು ಕೆಲವನ್ನು ಪ್ರಕಟಿಸುತ್ತಿದ್ದೇವೆ.

ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ

ಆಟೋ ರಾಜ

ಯಾವುದೇ ಕಂಪೆನಿ ವ್ಯಾಪಾರ ಶುರು ಮಾಡಿ ಆಕರ್ಷಕ ಕೊಡುಗೆಗಳನ್ನು ನೀಡುವುದು ಅವರು ಬೆಳೆಯುವವರೆಗೆ ಮಾತ್ರ. ಆಮೇಲೆ ಚಾಲಕರ ಕೈ ಬಿಡ್ತಾರೆ. ನಿಮ್ಮ ಸ್ವಂತ ಬದುಕು, ನಿಮ್ಮ ಜೀವನ. ಯೋಚನೆ ಮಾಡಿ, ಹೆಜ್ಜೆ ಇಡಿ. ನಿಮ್ಮ ಕೀಲಿ ಕೈನ ಬೇರೆಯವರಿಗೆ ಕೊಡಬೇಡಿ.

Readers response to Bengaluru cab driver experience

ಕೆಎನ್ ಧನೇಂದ್ರ

ನಮ್ಮ ಬಗ್ಗೆ ಬರೆದಿದ್ದಕ್ಕೆ ಒನ್ಇಂಡಿಯಾಗೆ ಧನ್ಯವಾದ. ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಸೇವೆಗಳ ಮೇಲೆ ಸಂಪೂರ್ಣ ಅವಲಂಬಿತರಾದ ಚಾಲಕರ ಬದುಕಿನ ಕ್ರೂರ ಸತ್ಯ ಇದು. ನಾನು ಇಂಥ ಟ್ಯಾಕ್ಸಿ ಸರ್ವೀಸ್ ನೀಡುವ ಕಂಪೆನಿಗೆ ಸೇರಿದ ಹೊಸತರಲ್ಲಿ ಇವರನ್ನೆಲ್ಲ ಆ ದೇವರೇ ಕಳಿಸಿದ ದೇವತೆಗಳು ಅಂದುಕೊಂಡಿದ್ದೆ.

ಆದರೆ, ಕಡಿಮೆ ದರ ಫಿಕ್ಸ್ ಮಾಡಿ ಟ್ಯಾಕ್ಸಿ ವಲಯದ ವಾತಾವರಣವನ್ನೇ ನಾಶ ಮಾಡುತ್ತವೆ ಅಂತ ಆ ನಂತರ ತಿಳಿದುಕೊಂಡೆ. ಆಕರ್ಷಕ ಇನ್ಸೆಂಟಿವ್ ಆಮಿಷ ತೋರಿಸಿ ಡ್ರೈವರ್ ಗಳನ್ನು ಜೀವನ ಪೂರ್ತಿ ಜೀತದಾಳುಗಳನ್ನಾಗಿ ಮಾಡಿಕೊಳ್ತಾರೆ. ನಮ್ಮ ಜೀವನ ಬೊನ್ಸಾಯ್ ನಂತೆ ಆಗಿ ಬದುಕೋದಕ್ಕೂ ಆಗಲ್ಲ, ಸಾಯಕ್ಕೂ ಆಗಲ್ಲ.

ವಿಜಯ್ ಕುಮಾರ್

ಇದು ವ್ಯಾಪಾರದ ಒಂದು ಸೂತ್ರ. ನೀವೇ ಕಂಪೆನಿಯ ಜಾಗದಲ್ಲಿ ನಿಂತು ಯೋಚನೆ ಮಾಡಿ, ಗೊತ್ತಾಗುತ್ತದೆ.

ಚೇತನ್ ಕಬ್ಬಡಿ

ನಾನು ಚಾಲಕನಾಗಿ ಹೇಳುತ್ತೇನೆ ನೂರು ಪರ್ಸೆಂಟ್ ಸತ್ಯವಾದ ಮಾತು. ನಂಬಿದರೆ ನಂಬಿ, ಇಲ್ಲ ಬಿಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the Oneindia Kannada readers response on facebook to article of Bengaluru cab driver experience.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ