ದಯಮಾಡಿ ಕನ್ನಡದಲ್ಲಿ ಬರೆಯಿರಿ ಸಾರ್/ಮೇಡಂ

"ದಯಮಾಡಿ ಕನ್ನಡದಲ್ಲಿ ಬರೆಯಿರಿ ಸಾರ್/ಮೇಡಂ. ನಿಮ್ಮೊಡನೆ ಕನ್ನಡ ತಂತ್ರಾಂಶ ಇಲ್ಲದಿದ್ದರೂ ಪರವಾಗಿಲ್ಲ, 'Click here to type in Kannada' ಎಂಬಲ್ಲಿ ಕ್ಲಿಕ್ಕಿಸಿದರೆ ಕನ್ನಡದಲ್ಲಿ ಟೈಪಿಸಬಹುದು. ಇಂಗ್ಲಿಷಿನಲ್ಲಿ ಬರೆದರೆ ಕಾಮೆಂಟುಗಳನ್ನು ಓದುವುದು ಬಲುಕಷ್ಟ."

ಹೀಗೆಂದು ಓದುಗರೊಬ್ಬರು ಪತ್ರ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ನಿಜ ಕೂಡ. ಕನ್ನಡದಲ್ಲಿ ಬರೆದಿರುವ ಅಭಿಪ್ರಾಯಗಳನ್ನು ಓದುವಾಗ ಸಿಗುವ ಮಜಾ ಇಂಗ್ಲಿಷಿನಲ್ಲಿ ಬರೆದದ್ದನ್ನು ಓದುವಾಗ ಸಿಗುವುದಿಲ್ಲ ಅಂತನೂ ಮತ್ತೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಬರೆಯುವುದು ಸಾಧ್ಯವಿರುವಾಗ ಇಂಗ್ಲಿಷ್ ಭಾಷೆಯಲ್ಲಿ ಏಕೆ ಅಭಿಪ್ರಾಯ ಮಂಡಿಸುವುದು? ಓದುಗರು ಬುದ್ಧಿವಂತರು, ಇಂಗ್ಲಿಷ್ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುತ್ತದೆ ಎಂಬುದು ಒಂದು ವಾದವಾದರೂ, ಕನ್ನಡದಲ್ಲೇ ಬರೆಯುವುದು ಸಾಧ್ಯವಿರುವಾಗ ಕ್ಲಿಷ್ಟಕರ ಭಾಷೆಯಲ್ಲಿ, ಅದರಲ್ಲೂ ದಪ್ಪಕ್ಷರಗಳಲ್ಲಿ ಪತ್ರಗಳನ್ನು ಬರೆಯುವುದು ಏಕೆ?

ಕನ್ನಡದಲ್ಲಿ ಬರೆಯಲು ಇಂಟರ್ನೆಟ್ಟಿನಲ್ಲಿ ಸಾಕಷ್ಟು ಸಾಫ್ಟ್ ವೇರ್ ಗಳು ಲಭ್ಯವಿವೆ. ಸ್ವಲ್ಪ ಸಮಯ ತೆಗೆದುಕೊಂಡರೂ ಪರವಾಗಿಲ್ಲ ಕನ್ನಡದಲ್ಲೇ ಅನಿಸಿಕೆಗಳನ್ನು ಮಂಡಿಸಿ ಎಂಬುದು ಒನ್ಇಂಡಿಯಾ ಕನ್ನಡದ ಕೋರಿಕೆ. ಹಾಗಾಗಿ, ಆಂಗ್ಲ ಭಾಷೆಯಲ್ಲಿ ಹಲವಾರು ಅತ್ಯುತ್ತಮ ಪತ್ರಗಳು ಬಂದಿದ್ದರೂ, ಕನ್ನಡದಲ್ಲೇ ಬಂದಿರುವ ಕೆಲವನ್ನು ಹೆಕ್ಕಿ ಇಲ್ಲಿ ಪ್ರಕಟಿಸಿದ್ದೇವೆ.

ಓದುಗರು ಲೇಖನಗಳನ್ನು ಓದಿ ವಸ್ತುನಿಷ್ಠವಾದ ಅಭಿಪ್ರಾಯ ಮಂಡಿಸಲು ಒನ್ಇಂಡಿಯಾ ವೇದಿಕೆಯನ್ನು ಕಲ್ಪಿಸಿದೆ. ನಮ್ಮಲ್ಲಿ ಆಗುತ್ತಿರುವ ತಪ್ಪುಗಳನ್ನು ಆಗಾಗ ತಿದ್ದುತ್ತ ಸರಿದಾರಿಯಲ್ಲಿ ಕರೆದುಕೊಂಡು ಹೋಗುತ್ತಿರುವ ಎಲ್ಲ ಓದುಗರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಇಲ್ಲಿ ನೀವು ಎಂಥ ಲೇಖನಗಳನ್ನು ಓದಲು ಬಯಸುತ್ತೀರಿ ಎಂಬ ಬಗ್ಗೆಯೂ ಬರೆಯುತ್ತಿದ್ದರೆ ನಮಗೂ ಅನುಕೂಲ. ಬಾಂಧವ್ಯ ಹೀಗೇ ಮುಂದುವರಿಯಲಿ.

ಹಿಂದೂ ಸಂಸ್ಕೃತಿಯನ್ನು ಕುಲಗೆಡಿಸಲು ಈ ಆಟವೆಲ್ಲ

ಹಿಂದೂ ಸಂಸ್ಕೃತಿಯನ್ನು ಕುಲಗೆಡಿಸಲು ಈ ಆಟವೆಲ್ಲ

"ಖಾಸಗಿ ಹಾಗೂ ಸಹಮತದ ಸಲಿಂಗ ಕಾಮವನ್ನು ಅಪರಾಧವೆಂಬಂತೆ ಪರಿಗಣಿಸುವುದು ರಾಜಕೀಯ ಮತ್ತು ನಾಗರಿಕ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಒಪ್ಪಂದ ಕೊಡಮಾಡಿರುವ ಖಾಸಗಿತನದ ಹಾಗೂ ತಾರತಮ್ಯ ರಹಿತತೆಯ ಹಕ್ಕನ್ನು ಉಲ್ಲಂಘಿಸುತ್ತದೆ."

ಹಾಗಾದರೆ ಆತ್ಮಹತ್ಯೆ, ದಯಾಮರಣ, ವೈವಾಹಿಕ ಜೀವನದ ಆಚೆಗಿನ ಲೈಂಗಿಕತೆ (Extra Marital Affairs), ಬಹುಪತ್ನಿತ್ವ , ಬಹುಪತಿತ್ವ ಇವೆಲ್ಲವೂ ಸಹಮತದಿಂದಲೇ ಆಗುತ್ತವೆ ಇವನ್ನು ಕಾನೂನು ಬದ್ದಗೊಳಿಸಬೆಕು. ಒಟ್ಟಿನಲ್ಲಿ ಹಿಂದೂ ಸಂಸ್ಕೃತಿಯನ್ನು ಕುಲಗೆಡಿಸಲು ಈ ಆಟವೆಲ್ಲ.

ಬಸು

ಬಣ್ಣದಲೋಕದ ಬಗ್ಗೆ ಹೆಚ್ಚು ಹುಷಾರಾಗಿರು

ಬಣ್ಣದಲೋಕದ ಬಗ್ಗೆ ಹೆಚ್ಚು ಹುಷಾರಾಗಿರು

ಶುಭವಾಗಲಿ ಗೆಳೆಯ. ಆದರೆ ಈ ಬಣ್ಣದಲೋಕದ ಬಗ್ಗೆ ಹೆಚ್ಚು ಹುಷಾರಾಗಿರು.. ಮೋಸದ ಜನರಿವರು.. ನಿನ್ನ ಮುಗ್ದತೆಯನ್ನು ಹಣಮಾಡಲು ಕಾಯುತ್ತಿರುತ್ತಾರೆ... ಅದಕ್ಕೆ ಅವಕಾಶ ಮಾಡಿಕೊಡಬೇಡ..

ಶಿವು

ಇವರನ್ನ 10ನೇ class-GAY ಸೇರಿಸಬೇಕು!

ಇವರನ್ನ 10ನೇ class-GAY ಸೇರಿಸಬೇಕು!

ಹ ಹ ಹ. ರವಿಶಂಕರ್ ಗುರೂಜಿ-GAY ಮಂಕು ಕವಿದಿದೆ. 2 ಗಂಡಿನಿಂದ, ಅಥವಾ 2 ಹೆಣ್ಣಿಂದ ಮಗು ಹುಟ್ಟಿಸಬಹುದು ಅಂತ ಹೇಳುತ್ತಾರಲ್ಲ, ಏನು ಹೇಳೋದು? ಇವರನ್ನ 10ನೇ class-GAY ಸೇರಿಸಬೇಕು! ಓದಿ ತಿಳಿದುಕೊಳ್ಳಲಿ.

ಪವನ್ ಜಿ

ಕನ್ನಡದವರೇ ಅಲ್ಪಸಂಖ್ಯಾತರಾಗಿಬಿಟ್ಟಿದ್ದಾರೆ

ಕನ್ನಡದವರೇ ಅಲ್ಪಸಂಖ್ಯಾತರಾಗಿಬಿಟ್ಟಿದ್ದಾರೆ

ಏಕೆಂದರೆ, ಕನ್ನಡಿಗರಿಗೆ ಕನ್ನಡವೇ ಬೇಕಿಲ್ಲ. ಕನ್ನಡಿಗರಾದ ನಮಗೇ ನಮ್ಮ ಭಾಷೆಯ ಬಗ್ಗೆ ಅಭಿಮಾನವಿಲ್ಲ. ಸರ್ಕಾರದಲ್ಲಿರುವ ನಮ್ಮ ಜನಕ್ಕೆ ಅದು ಬೇಕಾಗಿಲ್ಲ. ಶಾದಿ ಭಾಗ್ಯ ಹುಟ್ಟಿಕೊಂಡಿರುವುದು ಮುಸ್ಲಿಮರ ಓಟಿಗಾಗಿಯೇ ವಿನಃ ಕರ್ನಾಟಕ ರಾಜ್ಯವನ್ನು ಉದ್ಥಾರ ಮಾಡುವುದಕ್ಕಾಗಲ್ಲ. ನಮ್ಮ ತಾಯಿಯನ್ನೇ ಮಾರಾಟ ಮಾಡಲು ನಾವು ಸಿದ್ಥರಾಗಿದ್ದೇವೆ. ಬೆಂಗಳೂರಿನಲ್ಲಂತೂ ಕನ್ನಡದವರೇ ಅಲ್ಪಸಂಖ್ಯಾತರಾಗಿಬಿಟ್ಟಿದ್ದಾರೆ. ಇದಕ್ಕಿಂತ ಹೀನಾಯ ಪರಿಸ್ಥಿತಿ ಬೇಕೆ?

ವಿಶ್ವಪ್ರಿಯ

ಗಂಡಸರಿಗೆ ಮಕ್ಕಳಾಗೋ ಕಾಲ ಬಂತಯ್ಯ

ಗಂಡಸರಿಗೆ ಮಕ್ಕಳಾಗೋ ಕಾಲ ಬಂತಯ್ಯ

ಈ ಒಂದು ಟ್ವೀಟ್ ಇಂದ ಈ ರವಿಶಂಕರ್ ಗುರುಜಿ ಮೇಲೆ ಇದ್ದ ಅಭಿಮಾನ ಗೌರವ ಎಲ್ಲ ಹೊರಟುಹೋಯ್ತು. ಅಲ್ಲ ಈವಯ್ಯ ಹೇಳೋದು ಹೆಂಗಿದೆ ಅಂದ್ರೆ, ಅಯ್ಯಪ್ಪ ಹುಟ್ಟಿದ್ದು ವಿಷ್ಣು ಮತ್ತು ಶಿವ ಅವ್ರ ಮಿಲನದಿಂದ.. ಆದ್ರೆ ವಿಷ್ಣು ಮೋಹಿನಿಯಾಗಿ ಬದಲಾಗಿ ಮಿಲನವಾಗಿದ್ದಕ್ಕೆ ಅಯ್ಯಪ್ಪ ಹುಟ್ಟಿದ್ದು. ಇಂಥ ಸಲಿಂಗ ಕಾಮಿಗಳನ್ನ ಸಮರ್ಥನೆ ಮಾಡೋ ಈ ರವಿಶಂಕರ್ ಅವರಿಂದ ಮಕ್ಕಳು ಹುಟ್ಟಿಸಲಿ ನೋಡೋಣ? ಸುಪ್ರೀಂ ಕೋರ್ಟ್ ನೀಡಿರೋ ತೀರ್ಪು ಸರಿಯಾಗೇ ಇದೆ, ಸಲಿಂಗ ಕಾಮ ಒಂದು ಮನೋ ವ್ಯಾಧಿ, ಅದನ್ನು ತಜ್ಞ ಮನೋ ವೈದ್ಯರ ಹತ್ರ ತೋರಿಸಿ ವಾಸಿ ಮಾಡ್ಕೋಬೇಕು ಹೊರತು, ನಾನು ಹಿಂದಿನಿಂದ ಸಂಭೋಗ ಮಾಡ್ತೀನಿ ಅಂದ್ರೆ ನಾವೇನ್ ಮಾಡಕ್ಕೆ ಆಗುತ್ತೆ? ಅದಕ್ಕೆ ಒಂದು ಕನ್ನಡ ಹಾಡು ನೆನಪಾಗ್ತಾ ಇದೆ.

ಪಾಪಿ ಕಲಿಗಾಲ ಕೆಟ್ಟೋಯ್ ತಯ್ಯ, ಮನೆಮನೆಗೂ ಕಂಪ್ಯೂಟರ್ ದೇವ್ರ್ ಆಯ್ತಯ್ಯ||
ಗಂಡಸರಿಗೆ ಮಕ್ಕಳಾಗೋ ಕಾಲ ಬಂತಯ್ಯ, ಹೆಣ್ಣು ಹೆಣ್ಣ ಮದುವೆ ಆಗೋ ಯೋಗ ಬಂತಯ್ಯ||

ಪ್ರದೀಪ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+