ನೋಟಿನ ನಿಷೇಧದ ಬಗ್ಗೆ ನಮ್ಮ ಓದುಗರು ಏನಂತಾರೆ?

Posted By:
Subscribe to Oneindia Kannada

ಕಪ್ಪು ಹಣದ ಮೇಲೆ ನರೇಂದ್ರ ಮೋದಿ ಮಾಡಿರುವ 'ಸರ್ಜಿಕಲ್ ಸ್ಟ್ರೈಕ್'ನಿಂದಾಗಿ ಜನಸಾಮಾನ್ಯರಿಗೆ ತಾತ್ಕಾಲಿಕವಾಗಿ ತೊಂದರೆಯಾಗಿದ್ದರೂ, ಕಡೆಗೂ ಕಪ್ಪು ಹಣಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಹಾಕಲು ಪ್ರಯತ್ನಿಸಿದ್ದಾರಲ್ಲ ಎಂದು ಒಳಗೊಳಗೇ ಖುಷಿ ಪಡುತ್ತಿದ್ದಾರೆ.

ನೋಟು ಬದಲಾವಣೆಗಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತಾಗ, ಕೆಲ ದಾಖಲೆಗಳನ್ನು ನೀಡಬೇಕಾದಾಗ ಸಾಕಷ್ಟು ತೊಂದರೆಯಾಗಿರಬಹುದು, ಆದರೆ, ಯಾರೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಚಕಾರವೆತ್ತುತ್ತಿಲ್ಲ. ಎತ್ತುತ್ತಿರುವವರು ಏನಿದ್ದರೂ ಮೋದಿಯ ರಾಜಕೀಯ ವಿರೋಧಿಗಳು ಮಾತ್ರ.

ಮೋದಿ ಅವರ ಈ ದಿಟ್ಟ ಕ್ರಮದ ಬಗ್ಗೆ ಒನ್ಇಂಡಿಯಾ ಕನ್ನಡ ಓದುಗರೆ ಏನೆನ್ನುತ್ತಾರೆ? ಕೆಲ ಪ್ರತಿಕ್ರಿಯೆಗಳನ್ನು ಹೆಕ್ಕಿ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕೆಂದು ನಮ್ಮ ಕಳಕಳಿಯ ಕೋರಿಕೆ. [500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]

ಎರಡುವರೆ ಲಕ್ಷಕ್ಕಿಂತ ಹೆಚ್ಚು ಇದ್ದ ತಕ್ಷಣ ಟ್ಯಾಕ್ಸ್ ಹಾಕೋಲ್ಲ

ಎರಡುವರೆ ಲಕ್ಷಕ್ಕಿಂತ ಹೆಚ್ಚು ಇದ್ದ ತಕ್ಷಣ ಟ್ಯಾಕ್ಸ್ ಹಾಕೋಲ್ಲ

ಮೊತ್ತ ಎರಡುವರೆ ಲಕ್ಷಕ್ಕಿಂತ ಹೆಚ್ಚು ಇದ್ದ ತಕ್ಷಣ ಟ್ಯಾಕ್ಸ್ ಹಾಕೋಲ್ಲ..... ಠೇವಣಿ ಮೊತ್ತ ರೂ ಎರಡುವರೆ ಲಕ್ಷಕ್ಕಿಂತ ಹೆಚ್ಚಿದ್ದಲ್ಲಿ ಆ ಮೊತ್ತದ ಮೂಲವನ್ನು ಬೇಕಾಗುತ್ತದೆ. ಅಂದ್ರೆ ಆ ಮೊತ್ತ ಯಾವ ವ್ಯವಹಾರದಿಂದ ಬಂದಿದ್ದು (ಆಸ್ತಿ ಮಾರಾಟ, ಬಹುಮಾನ). ಅಂತ ತೋರಿಸಬೇಕಾಗತ್ತೆ.... ಇಲ್ಲದಿದ್ದಲ್ಲಿ ಆ ಮೊತ್ತಕ್ಕೆ ಟ್ಯಾಕ್ಸ್ ಬೇಕಾಗತ್ತೆ.

ಭಾರತೀಯ

ದಾವೂದ್ ನಂಥವರ ಹಣ ಉಪಯೋಗಕ್ಕೆ ಬಾರದಂತೆ ಮಾಡಿದ ಮೋದಿ

ದಾವೂದ್ ನಂಥವರ ಹಣ ಉಪಯೋಗಕ್ಕೆ ಬಾರದಂತೆ ಮಾಡಿದ ಮೋದಿ

ಏನಾಗಿದೆ ನಮ್ಮ ಜನಕ್ಕೆ? ದೇಶಕ್ಕೆ ಒಳ್ಳೆಯದಾಗಲೆಂದು ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಅದಕ್ಕೆ ವಿರೋಧಿಗಳು ನೂರೆಂಟು ವಿಘ್ನ ತಂದರು. ಬಿಡುವಿಲ್ಲದೆ ದೇಶ ದೇಶ ಸುತ್ತಿ ಕೊಟ್ಯಾಂತರ ಹಣ ಹೂಡಿಕೆಯೊಂದಿಗೆ ಹಿಂದೂಸ್ಥಾನದ ಕಡೆ ಪ್ರಪಂಚ ಒಳ್ಳೆಯ ರೀತಿಯಲ್ಲಿ ತಿರುಗಿ ನೋಡುವಂತೆ ಮಾಡಿದರು. ಅದಕ್ಕೆ ನೂರಾರು ಟೀಕೆಗಳಾದವು. ಈಗ ದಾವೂದ್ ಅಲ್ಲದೆ ಅವನ ತರಹದ ತಿಮಿಂಗಲಗಳ ಕೈಯಲ್ಲಿದ್ದ ಕೋಟ್ಯಾನುಕೋಟಿ ರೂಪಾಯಿ ಕಪ್ಪು ಹಣ ಹಾಗು ನಕಲಿ ಹಣವನ್ನು ಉಪಯೋಗಕ್ಕೆ ಬಾರದಂತೆ ಮಾಡಿದರು... ಇನ್ನು ಈ ದೇಶ ದ್ರೋಹಿಗಳು ವಾಕ್ಸ್ವಾತಂತ್ರದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಡಬಾರದು. ಜನರು ಇಂತಹವರ ವಿರುದ್ಧ ದಂಗೆ ಎದ್ದು, ದೇಶ ಬಿಟ್ಟು ಹೋಗುವಂತೆ ಮಾಡುವುದು ಉತ್ತಮ ಎನಿಸುತ್ತದೆ.

ನಿಜವಾದ ದೇಶಭಕ್ತ

ಬ್ಯಾಂಕ್ ಅಕೌಂಟ್ ಓಪನ್ ಮಾಡಕ್ಕೆ ಆಗಲ್ಲ?

ಬ್ಯಾಂಕ್ ಅಕೌಂಟ್ ಓಪನ್ ಮಾಡಕ್ಕೆ ಆಗಲ್ಲ?

ಸ್ವಾಮಿಗಳೇ ಈ ಸುದ್ದಿ ಪ್ರಚಾರಣೆಯಲ್ಲೇ ಗೊತ್ತಾಗುತ್ತೆ ನಿಮ್ಮ ಅಭಿಪ್ರಾಯ. ಈ ಪತ್ರಿಕೆಯವರಿಗೆ ಕೂಡ ನಮ್ಮ ಪ್ರಧಾನ್ ಮಂತ್ರಿಯವರ ಈ ಯೋಜನೆ ಇಷ್ಟ ಆಗಿಲ್ಲ ಅಂತ. ಆ ಹೆಂಗಸಿಗೆ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡಲಿಕ್ಕೆ ಎಷ್ಟೆಲ್ಲಾ ಅವಕಾಶ ಮಾಡಿ ಕೊಟ್ಟಿದೆ ಸರಕಾರ. ನಿಮ್ಮ ಪ್ರಕಾರ ನಮ್ಮ ಪಿಎಂನವರೇ ಬಂದು ಅವಳಿಗೆ ಅಕೌಂಟ್ ಓಪನ್ ಮಾಡಿ ಕೊಡಬೇಕಿತ್ತ?

ಸಂದೇಶ್

ಜಡೀರಿ ಬಗಣಿ ಗೂಟ ಹೀಗೇನೆ

ಜಡೀರಿ ಬಗಣಿ ಗೂಟ ಹೀಗೇನೆ

ಜಡೀರಿ ಬಗಣಿ ಗೂಟ ಹೀಗೇನೆ ಇನ್ಮೇಲೆ. ಎಲ್ಲ ಧನಿಕ ಕಪ್ಪು ದಗಾಕೋರ ಕಾಸಿದ್ದವರ ಮೇಲೆ.. ನಾವ್ ಎಲ್ಲ ದೇಶವಾಸಿಗಳು ಈ ವಿಷ್ಯದಲ್ಲಿ ನಿಂಜೊತೆ.. ಇದು ಸಂತೋಷದ ವಿಷ್ಯ ಮಾನ್ಯರೆ.. ಮೋದಿ ಮತ್ತು ಜೇಟ್ಲಿ ಆಧುನಿಕ ಉಕ್ಕಿನ ಮನುಷ್ಯರು..

ರೆಹಮಾನ್

ಮೋದಿ ಅಂದ್ರೆ ಮಿರಾಕಲ್ ಆಫ್ ಇಂಡಿಯಾ

ಮೋದಿ ಅಂದ್ರೆ ಮಿರಾಕಲ್ ಆಫ್ ಇಂಡಿಯಾ

ಗೌರವಾನ್ವಿತ ಮಂತ್ರಿಗಳೇ MODI andre...MOOD OF THE INDIA... MOVEMENT OF THE INDIA... MIRACLE OF THE INDIA... MILESTONE OF THE INDIA... None of the politicians of india have the ability to talk about our honourable prime minister Modi....

ಜಾನ್

ಕಾಳಧನ ಸಂಗ್ರಹ ತಡೆಗಟ್ಟಬಹುದು

ಕಾಳಧನ ಸಂಗ್ರಹ ತಡೆಗಟ್ಟಬಹುದು

ಇದು ಒಂದು ಉತ್ತಮ ನಡೆ. ಇದರಿಂದ ಸ್ವಲ್ಪವಾದರೂ ಕಾಳಧನ ಮನೆಯಿಂದ ಹೊರಬರುತ್ತದೆ. ಇದರ ಜೊತೆಗೆ ಪ್ರತಿ 10 ವರ್ಷಗಳಿಗೊಮ್ಮೆ ನೋಟ್ ಗಳನ್ನು ಬದಲಾವಣೆ ಮಾಡುವುದರಿಂದ ಕಾಳಧನ ಸಂಗ್ರಹ ತಡೆಗಟ್ಟಬಹುದು.

ಕೃಷ್ಣಕುಮಾರ್

ತಿಪ್ಪರಲಾಗ ಹಾಕಿದರೂ ಏನು ಮಾಡೋಕಾಗಲ್ಲ

ತಿಪ್ಪರಲಾಗ ಹಾಕಿದರೂ ಏನು ಮಾಡೋಕಾಗಲ್ಲ

ಕಪ್ಪು ಹಣ ಘೋಷಿಸಿ ಎಂದ್ರು. ಇದು ಹಾಳು ಕಾಂಗಿಗಳ ತರಹಾ ಬಾಹ್ಯಪಡಿಸೋ ಹೇಳಿಕೆ ಎಂದುಕೊಂಡು ಬಹುಪಾಲು ಜನ ನೆಮ್ಮದಿಯಾಗಿದ್ರು. ಈಗ ಅಹೊಡೆದರು ನೋಡಿ ಬಗನಿ ಗೂಟ -ಮೋದಿ... ಈಗ ತಿಪ್ಪರಲಾಗ ಹಾಕಿದರೂ ಏನು ಮಾಡೋಕಾಗಲ್ಲ. ಇನ್ಮೇಲೆ ತಿಪ್ಪೆಯಲ್ಲಿ ನೋಟು ಸಿಗತವೇ...ಒಳ್ಳೆ ನಿರ್ಧಾರ ಮೋದಿಜಿ..

ಪ್ರಧಾನ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letter to the editor on note ban by Narendra Modi government. Lakhs of people are happy that Modi at last took this step to curb black money flowing and to curb corruption, though money exchange, depositing procudure has caused some hardship to the citizen.
Please Wait while comments are loading...