ದೇವರ ಪ್ರತಿರೂಪವಾದ ಸಮಸ್ತ ವೈದ್ಯರಿಗೆ ನಮ್ಮ ಸಲಾಂ
ತಾಯಿ ಜನ್ಮ ಕೊಟ್ಟರೆ, ವೈದ್ಯರು ಪುನರ್ಜನ್ಮ ನೀಡುತ್ತಾರೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕನ್ನು ಎದುರಿಸುತ್ತಿರುವವರು ನಮ್ಮ ವೈದ್ಯರು, ವೈದ್ಯೋ ನಾರಾಯಣ ಹರಿ ಎಂದು ನಾವು ಸುಮ್ನೆ ಹೇಳುವುದಿಲ್ಲ ದೇವರ ಪ್ರತಿರೂಪ ನಮ್ಮ ವೈದ್ಯರು, ದೇವರು ಕೊಡುವ ಪ್ರಾಣವನ್ನು ಹಾರಿ ಹೋಗದಂತೆ ಉಳಿಸಿ ನೂತನ ಜೀವನಕ್ಕೆ ದಾರಿ ಮಾಡಿ ಕೊಡುವವರು ವೈದ್ಯರು.
ಮುಖ್ಯವಾಗಿ ಈ ಕೋವಿಡ್ 19 ಸಂದರ್ಭದಲ್ಲಿ ತಮ್ಮ ಮನೆಯವರನ್ನು ಬಿಟ್ಟು, ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಕಾಯಕದಲ್ಲಿ ತೊಡಗಿರುವ ವೈದ್ಯರು, ಇವರು ಖಂಡಿತವಾಗಿಯೂ ದೇವರ ಸಮಾನ.
ಸಮಯವನ್ನು ಲೆಕ್ಕಿಸದೆ ಹಗಲಾಗಲಿ, ರಾತ್ರಿಯಾಗಲಿ ಎನ್ನದೆ ನಿಸ್ವಾರ್ಥದಿಂದ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಇವರು ಜೀವ ರಕ್ಷಕರು, ಧನ ದಾಹ ವಿಲ್ಲದ ವೃತ್ತಿ ಧರ್ಮವನ್ನು ನಿಭಾಯಿಸುವ ವೈದ್ಯರು ನಮಗೆ ಹೆಚ್ಚು ಹೆಚ್ಚಾಗಿ ಬೇಕು,.
Recommended Video

ಆರೋಗ್ಯ ಕಾಪಾಡುವ ದೇವರು ಎನ್ನುವ ಪದಗಳಿಗೆ ಹೀಗಿನ ತುರ್ತು ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ಸೋಂಕು ಕೋವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅಕ್ಷರಶಃ ನಿಜ ಮಾಡಿ ತೋರಿಸುತ್ತಿರುವ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಆ ದೇವರು ಇನ್ನು ಶಕ್ತಿ ಮತ್ತು ಆರೋಗ್ಯ, ಆತ್ಮಸ್ಥೈರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸೋಣ. ನಮ್ಮ ಪ್ರಾರ್ಥನೆಯ ಮೂಲಕ ವೈದ್ಯರ ಋಣವನ್ನು ಸ್ವಲ್ಪವಾದರೂ ತೀರಿಸೋಣ,
ತಮ್ಮ ಇಡೀ ಜೀವನವನ್ನು ಜನರಿಗಾಗಿ ಶ್ರಮಿಸುವ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು ಹಾಗೂ ನಮ್ಮೆಲ್ಲರಿಂದ ಸಲಾಂ!
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications