ಸೊಳ್ಳೆ ಕಚ್ಚಿ ರಕ್ತ ಹೀರತ್ತೆ, ಅದನ್ಯಾಕೆ ನೀವು ತಿನ್ನಬಾರದು?
ನಮ್ಮ ಒನ್ಇಂಡಿಯಾ ಕನ್ನಡ ಕಾಮೆಂಟ್ ತಾಣದಲ್ಲೂ ಕನ್ನಡ ರಾಜ್ಯೋತ್ಸವ ತಿಂಗಳಲ್ಲಿ ಕನ್ನಡ ನಲಿದಾಡುತ್ತಿದೆ. ಓದುಗರು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚಾಗಿ ಕನ್ನಡದಲ್ಲೇ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು ನಿಜಕ್ಕೂ ಸಂತಸದ ಮತ್ತು ಸ್ವಾಗತಾರ್ಹ ವಿಷಯ.
ಗೋಮಾಂಸ ಸೇವನೆ, ಐಟಿಬಿಟಿ ಕಚೇರಿಗಳಲ್ಲಿ ಸಿಗರೇಟು ಸೇವನೆ ನಿಷೇಧ, ಸಿದ್ದರಾಮಯ್ಯ ವಿರುದ್ಧದ ವಿವಾದಾತ್ಮಕ ಹೇಳಿಕೆ ಮುಂತಾದ ಜ್ವಲಂತ ವಿಷಯಗಳ ಮೇಲೆ ಬರೆಯಲಾದ ಲೇಖನಗಳಿಗೆ ಪ್ರೀತಿಯ ಓದುಗರು ಬರೆದಿರುವ ಪತ್ರಗಳನ್ನು ಇಲ್ಲಿ ಮತ್ತೆ ಇತರ ಓದುಗರ ಅವಗಾಹನೆಗೆ ನೀಡಲಾಗುತ್ತಿದೆ.

ಸ್ವರ್ಣ ಕುಮಾರ್, ನಿಮ್ಮ ಮಾತು ಕೇಳೋದಕ್ಕೆ ಚೆನ್ನಾಗಿದೆ
ಸ್ವರ್ಣ ಕುಮಾರ್ ರವರೆ, ನಿಮ್ಮ ಮಾತು ಚಿನ್ನ(ಸ್ವರ್ಣ)ದಂತೆ ಕೇಳೋದಿಕ್ಕೆ ಚೆನ್ನಾಗಿದೆ. ಆದರೆ ವಾಸ್ತವಕ್ಕೆ ಸರಿಯಿಲ್ಲ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ಎಲ್ಲಾದಕ್ಕು ಆಹಾರ ಪದ್ಧತಿ ಅನ್ನೋದು ಇರತ್ತೆ. ಹಾಗಾದರೆ ಸಣ್ಣ ಸೊಳ್ಳೆಗಳು ನಿಮ್ಮನ್ನು ಕಚ್ಚಿ ರಕ್ತ ಹೀರುತ್ತೆ. ನೀವ್ಯಾಕೆ ಅದನ್ನು ಹಿಡಿದು ತಿನ್ನಬಾರದು? ಆಹಾರ ಪದಾರ್ಥ, ಬೆಳೆಗಳನ್ನು ಕೆಲ ಸಣ್ಣ ಕೀಟಗಳಿಂದ ದೊಡ್ಡ ಕೀಟಗಳು ಸಂಹರಿಸಿ(ತಿಂದು) ಬೆಳೆಗಳನ್ನು ರಕ್ಷಿಸುತ್ತವೆ. ಹಾಗೆ ಒಂದೊಂದು ಜೀವರಾಶಿಗೆ ಒಂದೊಂದು ಆಹಾರ ಪದ್ಧತಿ ಭಗವಂತ ಮಾಡಿ ಇಟ್ಟಿದ್ದಾನೆ. ಹಾವಿಗೆ-ಮುಂಗುಸಿ ಉಂಟು, ಆನೆಗೆ-ಸಿಂಹ ಉಂಟು ಹಾಗೆ, ಹಸು, ಎಮ್ಮೆ, ಕುರಿ ಇಂತ ಸಾಕು ಪ್ರಾಣಿಗಳಿಗೆ, ಹುಲ್ಲು, ಸೊಪ್ಪು-ಸೆದೆ ಇರುತ್ತೆ. ನಾವು ತಿನ್ನೋ ಪದಾರ್ಥ ಬೆಳೆಯೋಕೆ ಮೇಲೆ ಹೇಳಿದ ಪ್ರಾಣಿಗಳ ಮೂತ್ರ, ಸಗಣಿ ಮುಂತಾದವು ಬೇಕಾಗತ್ತೆ. ಅದಕ್ಕೆ ಈ ಪ್ರಾಣಿಗಳನ್ನು ಮಾನವ ಜನ್ಮ ತಳೆದ ನಾವು ಸಾಕುತ್ತೇವೆ. ಅವುಗಳ ಪ್ರಾಣ ತೆಗೆದು, ಅವುಗಳ ಮಾಂಸ ತಿನ್ನೋದು ಬುದ್ದಿಗೇಡಿ ಜನ ರೂಢಿ ಮಾಡ್ಕೊಂಡು ಹಾಳಾಗಿರೋದು.
ಎಂ ದಶರಥ
***
ಧೂಮಪಾನ ಬೇಡ ಅನ್ನೋಕೆ ನಿಮಗೇನು ಅಧಿಕಾರವಿದೆ?
ನೀವು ಮಾತ್ರ ನಿಮಗೆ ಬೇಕಾದರೆ ಏನನ್ನಾದರೂ ಮಾಡಬಹುದು, ಆದರೆ ಸಾಮಾನ್ಯ ಜನರು ಮಾತ್ರ ಎಲ್ಲ ಕಟ್ಟುಪಾಡುಗಳನ್ನು ಪರಿಪಾಲಿಸಬೇಕು. ಧೂಮಪಾನ ಮಾಡುವವರ ಸಂಖ್ಯೆ ಬಹುಷಃ ಗೋಮಾಂಸ ತಿನ್ನುವವರಿಗಿಂತ ಜಾಸ್ತಿ ಇದೆ. ಹಾಗಾದರೆ ಆಹಾರದ ವಿಚಾರಕ್ಕೆ ಒಂದು ತರ್ಕ ಉಳಿದಿದ್ದೆಲ್ಲಾದಕೂ ಇನ್ನೊಂದು ತರ್ಕವೇ? ನಮಗೆ ಬೇಕಾದರೆ ಧೂಮಪಾನ ಮಾಡುತ್ತೇವೆ ಅದನ್ನು ಬೇಡ ಎನ್ನಲು ನಿಮಗೇನು ಅಧಿಕಾರವಿದೆ ಸಿದ್ದರಾಮಯ್ಯರವರೆ?
ಮಗಧೀರ
***
ಇಂಥವರಿರುವುದು ಕನ್ನಡಿಗರ ದೌರ್ಭಾಗ್ಯ!
ವಿನಾಶಕಾಲೇ ವಿಪರೀತ ಬುದ್ಧಿ! ಸಿಎಂ ಸ್ಥಾನದಲ್ಲಿದ್ದುಕೊಂಡು ಇಂತಹ ಅನನುಭವಿ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವುದು ನಮ್ಮ ಕನ್ನಡಿಗರ ದೌರ್ಭಾಗ್ಯ! ಈಗಿನ ಕಾಲಮಾನಕ್ಕೆ ಸಾರ್ವಜನಿಕರು ಒಂದಿಲ್ಲೊಂದು ರೀತಿಯಲ್ಲಿ ಆಡಿದ ಮಾತಿಗೆ ತಪ್ಪುವವರಲ್ಲ. ಅಂತಹ ಪರಿಸ್ಥಿತಿ ರಾಜಕಾರಿಣಿಗಳೇ ತಂದುಕೊಂಡಿದ್ದಾರೆ. ಆ ದೇವರು ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಟ್ಟು ಸುಭಿಕ್ಷೆ ತರಲಿ.
ಆಚಾರ್ಯ
***
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ನಿಮಗೆ ಬಂಗಲೆ ಬೇಕಾ?
ರಾಜ್ಯದಲಿ ಮಳೆ ಇಲ್ದೆ ರೈತರು ಆತ್ಮಹತ್ಯೆ ಮಾಡ್ಕೊತ್ತಿದ್ದರೆ, ನೀವು ಅವರಿಗೆ ಸರ್ಕಾರದಿಂದ ಅನುದಾನ ಕೊಡೋಕೂ ಅಗಲ್ಲ. ನಿಮಗೆ ಬಂಗಲೆ ಬೇಕು, ಸಾವಿನ ಮನೆಯಾಲಿ ಸುಗ್ಗಿ ಹಬ್ಬ, ದಸರಾನ ಸರಳವಾಗಿ ಆಚರಿಸಿ, ನೀವು ನಮ್ಮ ತೆರಿಗೆ ದುಡ್ಡಿನಲಿ ಮಾರಿ ಹಬ್ಬ ಮಾಡ್ತಿದೀರ?
ಕನ್ನಡಿಗ
***
ಹಂದಿ ಗಿಂದಿ ಅಂತ ನಿಮ್ಮ ಬಾಯಲ್ಲಿ ಬರೋದು ಚೆನ್ನಾಗಿರಲ್ಲ
ಈ ಸ್ವಾಮಿಗೆ ಯಾಕೆ ಬೇಕು ಇದೆಲ್ಲ, ಮಠದಲ್ಲಿ ಸುಮ್ಮನೆ ಇರೋದು ಬಿಟ್ಟು? ಇಂಥವರ ಬಾಯಿಂದ ಹಂದಿ ಗಿಂದಿ ಅಂತ ಹೇಳೋದು ಸ್ವಲ್ಪನೂ ಚೆನ್ನಾಗಿ ಇರೋಲ್ಲ. ಜಾತೀಯತೆ ಬಗ್ಗೆ ಮಾತನಾಡೋದು ತುಂಬಾ ತಪ್ಪು. ಇಂತವರಿಗೆ ನಾವು ಬುದ್ದಿವಾದ ಹೇಳೋದು ಬೇಕಿಲ್ಲ. ತಾವೇ ತಿಳಿದು ಸ್ವಲ್ಪ ಎಚ್ಚರಿಕೆಯಿಂದ ಮಾತಾಡಬೇಕು.
ಜಾನ್












Click it and Unblock the Notifications