ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿಗದ್ದಲದ ನಡುವೆ ಹಿತತಂದ ಆತ್ಮೀಯ ಪತ್ರಗಳು

By Prasad
|
Google Oneindia Kannada News

ಕಳೆದ ಇಡೀ ವಾರದ ತುಂಬ ಸುದ್ದಿ ಸಡಗರ. ಒಂದೆಡೆ ಮಂಗಳೂರು ಚಲೋದಲ್ಲಿ ಬಿಜೆಪಿಯವರು ಮುಳುಗಿದ್ದ ಸಂದರ್ಭದಲ್ಲಿಯೇ, ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಕಾಂಗ್ರೆಸ್ ಪಕ್ಷಕ್ಕೆ ಸಣ್ಣಗೆ ಬಿಸಿ ಮುಟ್ಟಿಸಿತ್ತು.

ಬಿಜೆಪಿ ನಾಯಕರು ಮಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶದ ಮಾತಾಡಿ ವಿಶ್ರಮಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸಂಜೆ ಬೆಂಗಳೂರಿನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂಥ ಘಟನೆ ನಡೆದಿತ್ತು.

ದಿಟ್ಟ ಪತ್ರಕರ್ತೆ, ಸಮಾಜ ಸೇವಕಿ, ದಲಿತರು ನಕ್ಸಲೀಯರ ದನಿ ಎಂದು ಹೆಸರಾಗಿದ್ದ ಗೌರಿ ಲಂಕೇಶ್ ಅವರ ಭೀಕರ ಹತ್ಯೆ ಕರ್ನಾಟಕವನ್ನೇ ನಡುಗಿಸಿತ್ತು. ಅದರ ಹಿಂದೆಯೇ, ಅವರ ಕೈವಾಡವಿದೆ, ಇವರ ಕೈವಾಡವಿದೆ ಎಂದು ಬುದ್ಧಿವಂತರು, ಬುದ್ಧಿಜೀವಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು.

ಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆ

ಮನಸ್ಸಿಗೆ ಆಘಾತ ತರುವಂಥ ಇಂಥ ಸುದ್ದಿಗಳು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡ ಮನಸ್ಸಿಗೆ ಹಿತವಾಗುವಂಥ ಅಂಕಣವನ್ನು ಸದ್ದಿಲ್ಲದೆ ಆರಂಭಿಸಿದೆ. ಅದು ಎಲೆಯ ಮರೆಯ ಕಾಯಿಗಳಂತೆ ಉಳಿದು ಸಾಧನೆಯಲ್ಲಿ ತೊಡಗಿರುವ ಮಹಿಳೆಯರ ಯಶೋಗಾಥೆಯ ಆರಂಭ.

ಈ ಎಲ್ಲ ಸುದ್ದಿಗಳು ಮತ್ತು ಇತರ ಸಮಾಚಾರಗಳಿಗೆ ಎಂದಿನಂತೆ ನಮ್ಮ ಆತ್ಮೀಯ ಓದುಗರಿಂದ ಪತ್ರಗಳು ಹರಿದುಬಂದಿವೆ. ಅವುಗಳಲ್ಲಿ ಕೆಲವೊಂದನ್ನು ಮಾತ್ರ ಆಯ್ದು ನಿಮ್ಮ ಅವಗಾಹನೆಗೆ ನೀಡುತ್ತಿದ್ದೇವೆ. ಧನ್ಯವಾದಗಳು.

ಅವರ ಕೆಲಸ ಮಾತ್ರ ಚಿರಾಯು

ಅವರ ಕೆಲಸ ಮಾತ್ರ ಚಿರಾಯು

ದೇವರು ಯಾವಾಗ್ಲೂ ಒಳ್ಳೆವರನ್ನೇ ಬೇಗ ಕರೆಸಿಕೊಳ್ಳುತ್ತಾನೆ, ಆದರೆ ಅವರು ಮಾಡಿರುವ ಕೆಲಸ ಮಾತ್ರ ಯಾವಾಗ್ಲೂ ಚಿರಾಯು, ಹಾಟ್ಸ್ ಆಫ್ ಫಾರ್ ದಿ ಗುಡ್ ವರ್ಕ್. ಲಾಂಗ್ ಲಿವ್ ಸೌಂದರ್ಯ. ಅವರ ಹೆಸರಲ್ಲಿ ಆರಂಭಿಸಲಾಗಿರುವ ಶಾಲೆ ಇನ್ನಷ್ಟು ಬೆಳೆಯಲಿ. [ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ]
ರವೀಂದ್ರ ಬಿ

ಅವರವರ ಯೋಚನೆಗೆ ತಕ್ಕಂತೆ ಮಾತಾಡುವ ಹುಂಬರು

ಅವರವರ ಯೋಚನೆಗೆ ತಕ್ಕಂತೆ ಮಾತಾಡುವ ಹುಂಬರು

ಇದು ಒಬ್ಬ ಅನುಭವಸ್ತ, ನಿಜವಾದ ಬುದ್ಧಿಯಿರುವ ತಾಳ್ಮೆಯ ಮನುಷ್ಯನ ಮಾತನಾಡುವ ರೀತಿಯಾಗಿದೆ. ಅದು ಬಿಟ್ಟು ಕೊಲೆ ನಡೆದಿದ್ದು ತಿಳಿದ ತಕ್ಷಣ ಇದು RSSದೇ ಕೆಲಸ, ಬಲಪಂಥೀಯರೇ ಇದನ್ನು ಮಾಡಿದ್ದು ಎಂದು ಬಾಯಿಗೆ ಬಂದಂತೆ ಸನ್ನಿ ಹಿಡಿದ ಹಾಗೆ ಬೊಗಳಿದ ಸರ್ಟಿಫೈಡ್ ಬುದ್ಧಿಜೀವಿಗಳನ್ನು ನೋಡಿದರೆ, ತೇಜಸ್ವಿಯವರ ಚಿದಂಬರ ರಹಸ್ಯದ ಕೊನೆಯಲ್ಲಿ ಬರುವ ಅವರವರ ಯೋಚನೆಗೆ ತಕ್ಕಂತೆ ಮಾತನಾಡುವ ಹುಂಬರ ಹಾಗೆ ಕಾಣುತ್ತಾರೆ. ಇಂಥಾ ಕೆಲವು ಬುದ್ದಿಹೀನರು ಬರೆದ ಪುಸ್ತಕಗಳನ್ನು ನಾನು ಓದಿದ್ದೆನಲ್ಲ ಎಂದು ನಾಚಿಕೆಯಾಗುತ್ತಿದೆ.

ರಾಜನ್

ಪುನಃ ಕಾಂಗ್ರೆಸ್ ಗೆಲ್ಲಿಸುವಷ್ಟು ಮೂರ್ಖರಲ್ಲ

ಪುನಃ ಕಾಂಗ್ರೆಸ್ ಗೆಲ್ಲಿಸುವಷ್ಟು ಮೂರ್ಖರಲ್ಲ

ನೀವು ಸಂಪುಟದಲ್ಲಿ ಇರಬೇಕು ಜಾರ್ಜ್ ಅವರೇ. ನೀವು ಸಿದ್ದರಾಮಯ್ಯ ಅವರ ಚಿನ್ನದ ಮೊಟ್ಟೆ ಇಡುವ ಕೋಳಿ. ನಿಮ್ಮನ್ನು ಸಂಪುಟದಿಂದ ಬಿಡಲ್ಲ. ಯೋಚನೆ ಮಾಡಬೇಡಿ. ಕರ್ನಾಟಕವನ್ನ ಮತ್ತಷ್ಟು ಹಾಳು ಮಾಡಲು ನೀವು ಇರಲೇಬೇಕು. ಇನ್ನು 6 - 8 ತಿಂಗಳು ಇರುತ್ತೀರಾ ಅಷ್ಟೇ. ಮುಂದೆ ಬೇರೆ ಸರಕಾರ ಬರತ್ತೆ. ಯೋಚನೆ ಮಾಡಬೇಡಿ ಕರ್ನಾಟಕದ ಜನ ಪುನಃ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವಷ್ಟು ಮೂರ್ಖರಲ್ಲ. ಜೈ ಕರ್ನಾಟಕ ಮಾತೆ. ಕಾಂಗ್ರೆಸ್ ಪಕ್ಷದವರಿಂದ ಮುಕ್ತಿ ಕೊಡಿಸಮ್ಮ...

ಶ್ರೀಕಾಂತ್

ಸಂದರ್ಶನ ಮುಗಿಯಿತು, ನೀವು ಹೋಗಬಹುದು

ಸಂದರ್ಶನ ಮುಗಿಯಿತು, ನೀವು ಹೋಗಬಹುದು

2009ರಲ್ಲಿ ನಾನು ಶಿವಮೊಗ್ಗದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರಿಂದ ಈ ಮೇಳದ ಆಯೋಜಕರು ವ್ಯವಸ್ಥಿತವಾಗಿ ಸಂದರ್ಶನ ನಡೆಸಲು ಸಂಪೂರ್ಣ ವಿಫಲರಾದರು. ನನ್ನ ಇಲ್ಲಿಯವರೆಗಿನ ಸಂದರ್ಶನದಲ್ಲಿ ಅತ್ಯಂತ ಕೆಟ್ಟ ಸಂದರ್ಶನವಾಗಿತ್ತು. ಒಂದು ದೊಡ್ಡ ಹಾಲ್ ನಲ್ಲಿ ಎಲ್ಲರನ್ನೂ ಕೂರಿಸಿ A4 ಶೀಟ್ ನಲ್ಲಿ 10 ಪ್ರಶ್ನೆಗಳನ್ನು ಕೇಳಿ ಉತ್ತರಸಿ ಎಂದು ಹೇಳಿದರು. ನಂತರ "ಸಂದರ್ಶನ ಮುಗಿಯಿತು, ನೀವು ಹೋಗಬಹುದು.. ನಾವು phone call ಮಾಡಿ ತಿಳಿಸುತ್ತೇವೆ" ಎಂದು ಹೇಳಿದರು. ನಮಗೆ ಯಾವುದೇ ಕಾಲ್ ಬರಲಿಲ್ಲ but ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿ ಮುಗಿದಿತ್ತು. ಯಾರನ್ನು ಮೆಚ್ಚಿಸಲು ಈ ಮೇಳ ಮಾಡಿದರೋ? ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ. ಈ ಬಾರಿ ಆ ರೀತಿ ಆಗದಿರಲಿ. ಪ್ರತಿಭಾವಂತರಿಗೆ ಉದ್ಯೋಗ ದೊರೆತು ಮೇಳ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ.

ರಾಘವೇಂದ್ರ ಎಚ್

ಏನೇ ಆದರೂ ಮೋದಿ ನೇರ ಹೊಣೆ!

ಏನೇ ಆದರೂ ಮೋದಿ ನೇರ ಹೊಣೆ!

ಯಾರೋ ಚೆನ್ನಾಗಿ ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏನೇ ಅವಘಡ ನಡೆಯಲಿ ಅಲ್ಲಿನ CM ನನ್ನ ಅಟ್ಯಾಕ್ ಮಾಡಿ ಅವರ ರಾಜೀನಾಮೆ ಎಲ್ಲರೂ ಕೇಳ್ತಾರೆ. ಆದರೆ ಕರ್ನಾಟಕದಲ್ಲಿ ಏನೇ ಆದರೂ ಅದಕ್ಕೆ ಮೋದಿ ನೇರ ಹೊಣೆ! ಒಳ್ಳೆಯ ಲಾಜಿಕ್, ಐದರಿಂದಾ 8 ವರ್ಷದ ಮಕ್ಕಳೇ ಹೀಗೆ ಯೋಚನೆ ಮಾಡೋದು! ಆದರೆ ಇಡೀ ಮೀಡಿಯಾದಲ್ಲಿ ಸುಳ್ಳುಗಾರರೇ ತುಂಬಿರುವಾಗ ಯಾವುದೋ ಒಂದು ರೀತಿಯಲ್ಲಿ ಜನರ ಬ್ರೈನ್ವಾಷ್ ನಡೆಯುತ್ತಲೇ ಇರುತ್ತೆ.

ರಾಜನ್

English summary
Letters to the editor : Last week was quite an eventful week. Mangaluru Chalo by BJP against Congress, Supreme Court order to conduct in MK Ganapati suicide case and the brutal murder of Gauri Lankesh. In between, Oneindia Kannada has started the column for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X