ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಪ್ರಶ್ನೆ ಕೇಳಿದ ಅಂಬರೀಶಣ್ಣಂಗೆ ಇಪ್ಪತ್ತೆಂಟು ಪ್ರಶ್ನೆ

By ಸಿ.ಟಿ.ಮಂಜುನಾಥ್, ಮಂಡ್ಯ
|
Google Oneindia Kannada News

Recommended Video

ಮಹದಾಯಿ ವಿವಾದ : ಸಚಿವ ಅಂಬರೀಷ್ ಗೆ ಬಂತು ಮಂಡ್ಯದಿಂದ ಪತ್ರ | Oneindia Kannada

ಮಾಜಿ ಸಚಿವ- ಮಂಡ್ಯ ಶಾಸಕ ಅಂಬರೀಶ್ ಅವರಿಗೆ ಮಂಡ್ಯದಿಂದ ಪತ್ರವೊಂದು ಬರೆದಿದ್ದು, ಆ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ತಮ್ಮ ಸಿಟ್ಟು, ಆಕ್ರೋಶಕ್ಕೆ ಮೊನಚಾದ ಮಾತು-ವ್ಯಂಗ್ಯದ ರೂಪ ನೀಡಿದ್ದಾರೆ. ಆದರೆ ಈ ಪತ್ರ ಬರೆದವರ ರಾಜಕೀಯ ನಿಲುವು ಅಥವಾ ಅಭಿಪ್ರಾಯಗಳು ಸ್ವತಃ ಲೇಖಕರವೇ ಹೊರತು ಒನ್ ಇಂಡಿಯಾ ಕನ್ನಡದ್ದಲ್ಲ. ಇನ್ನು ಮುಂದೆ ಅವರು ಬರೆದ ಪತ್ರ ಓದಿ. -ಸಂಪಾದಕ

***

ಕಾವೇರಿ ವಿಚಾರದಲ್ಲಿ ಕಣ್ಮರೆಯಾಗಿದ್ದ ಅಂಬರೀಶಣ್ಣ ಇಂದು ನೀವು ಮಹಾದಾಯಿ ವಿಚಾರದಲ್ಲಿ ಪ್ರತ್ಯಕ್ಷರಾಗಿದ್ದೀರಿ ಇದು ನಿಮ್ಮ ಅಭಿಮಾನಿಯಾದ ನನಗೆ ಸಂತಸ ತಂದಿದೆ. ಅಂಬರೀಶಣ್ಣ ಇದು ನಿಮಗೆ ತಿಳಿದಿಲ್ಲವೇ? ಮಹದಾಯಿ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಒಂದು ಹನಿ ನೀರು ಕೊಡಲ್ಲ ಎಂದಿದ್ದರು.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳುಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳು

ಯೋಜನೆ ಜಾರಿಗೆ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಿ, ಕಾಮಗಾರಿ ಶುರು ಮಾಡಿದ್ದು ಸನ್ಮಾನ್ಯ ಯಡಿಯೂರಪ್ಪ ಅವರಲ್ಲವೇ? ಇದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ? ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಕುರಿತು ನ್ಯಾಯಾಧೀಕರಣಕ್ಕೆ ಗೋವಾ ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ.

ನಮ್ಮ ತಕರಾರಿಲ್ಲ ಎಂಬ ಪ್ರಮಾಣ ಪತ್ರ

ನಮ್ಮ ತಕರಾರಿಲ್ಲ ಎಂಬ ಪ್ರಮಾಣ ಪತ್ರ

ಟ್ರಿಬ್ಯುನಲ್ ಗೂ ಕೂಡ ಕುಡಿಯುವ ನೀರಿಗೆ ನಮ್ಮ ತಕರಾರಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರೆಲ್ಲ ಸೇರಿ ರಾಜ್ಯದ ಜನರಿಗೆ ನ್ಯಾಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ ? ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡುವುದು ಪ್ರಧಾನ ಮಂತ್ರಿಯವರ ಕೆಲಸವಲ್ಲವೇ? ಮೋದಿಯವರು ಮಹದಾಯಿ ವಿಚಾರದಲ್ಲಿ ಎಂದಾದರೂ ರಾಜಕೀಯ ಮಾಡಿದ್ದಾರೆಯೇ? ಇದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ ?

ಕರ್ನಾಟಕದಲ್ಲಿ ಟೆಂಪಲ್ ರನ್ ಬೇಡ

ಕರ್ನಾಟಕದಲ್ಲಿ ಟೆಂಪಲ್ ರನ್ ಬೇಡ

ಮಹಾದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್ ಪಕ್ಷ ವಿರೋಧಿಸದೆ ಸುಮ್ಮನಿದ್ದರೆ ಕರ್ನಾಟಕಕ್ಕೆ ಮಹಾದಾಯಿ ನೀರು ಖಚಿತವಾಗಿ ಸಿಗುತ್ತದೆ ಎಂದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ? ಸಮಸ್ಯೆಗೆ ಪರಿಹಾರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಕರ್ನಾಟಕದಲ್ಲಿ ಟೆಂಪಲ್ ರನ್ ಮಾಡುವ ಬದಲು ಪ್ರಾಮಾಣಿಕವಾಗಿ ಪರಿಹಾರಕ್ಕೆ ಯತ್ನಿಸಬೇಕು.

ಈ ಮೂವರು ಫರ್ಮಾನು ಹೊರಡಿಸಿದರೆ ಆಯಿತು

ಈ ಮೂವರು ಫರ್ಮಾನು ಹೊರಡಿಸಿದರೆ ಆಯಿತು

ಗೋವಾ ಕಾಂಗ್ರೆಸ್ ಕಚೇರಿಗೆ RSS ತ್ರಿಮೂರ್ತಿಗಳು R-ರಾಹುಲ್ ಗಾಂಧಿ , S-ಸೋನಿಯಾ ಗಾಂಧಿ, S ಸಿದ್ದರಾಮಯ್ಯ (ರಾಷ್ಟ್ರೀಯ ಸ್ವಹಿತ ಸಾಧಕರ ಸಂಘ) ತೆರಳಿ, ನೀರಿನ ವಿಚಾರದಲ್ಲಿ ಗೋವಾ ಕಾಂಗ್ರೆಸ್ ಪಕ್ಷದವರನ್ನು ರೊಚ್ಚಿಗೇಳದಂತೆ ಫರ್ಮಾನು ಹೊರಡಿಸಿದರೆ ಸಮಸ್ಯೆ ಇತ್ಯರ್ಥವಾದಂತೆ ಅಲ್ಲವೆ, ಇದು ನಿಮಗೆ ತಿಳಿದಿಲ್ಲವೇ ಅಂಬರೀಶಣ್ಣ?

ನಿಮಗಿರುವ ರಾಜ್ಯದ ಬಗೆಗಿನ ಪ್ರೀತಿ ಎಲ್ಲರಿಗೂ ತಿಳಿಯಲಿ

ನಿಮಗಿರುವ ರಾಜ್ಯದ ಬಗೆಗಿನ ಪ್ರೀತಿ ಎಲ್ಲರಿಗೂ ತಿಳಿಯಲಿ

ನಮಗೆ ನಿಮ್ಮ ಮೇಲೆ ಬಹಳ ಅಭಿಮಾನ. ನಿಮಗೆ ಸ್ನೇಹಿತರು ಕೂಡ ಹೆಚ್ಚಲವಾ! ಯಾರು ನಿಮಗೆ ಅಪರಿಚಿತರು, ನಿಮ್ಮ ಸ್ನೇಹಿತರು ಇಲ್ಲದ ಜಾಗ ಯಾವುದು ಹೇಳಿ. ಜತೆಗೆ ಸುದೀರ್ಘ ರಾಜಕೀಯ ಅನುಭವ ಇರುವ ನಿಮಗೆ ಈ ವಿಚಾರಗಳನ್ನೆಲ್ಲ ನೆನಪಿಸುವ ಅಗತ್ಯವೂ ಇಲ್ಲ. ಆದರೆ ನೀವು ಮಾತನಾಡಬೇಕು. ನಿಮ್ಮ ಅನುಭವ- ರಾಜ್ಯದ ಬಗ್ಗೆ ನಿಮಗಿರುವ ಪ್ರೀತಿ ಎಲ್ಲರಿಗೂ ಗೊತ್ತಾಗಬೇಕು.

English summary
Mahadayi water dispute now news in the Karnataka. Manjunath who is from Mandya district writes letter to former minister and MLA Ambareesh regarding this issue. He raises some questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X