ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಹಣ ವಿಶ್ಲೇಷಣೆ: ವಿಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲವೆ?

By ದ್ವಾರಕ್ ನಾಥ್
|
Google Oneindia Kannada News

ವೈಜ್ಞಾನಿಕ ಎಂಬ ಪದದ ಬಳಕೆ ಎಷ್ಟು ವ್ಯಾಪಕವಾಗಿ ಆಗುತ್ತಿದೆ ಅಂದರೆ ಅದರಾಚೆಗೆ ಏನೂ ಇಲ್ಲವೇ ಇಲ್ಲ ಎಂಬರ್ಥ ಧ್ವನಿಸುತ್ತಿದೆ. ಹಾಗಾದರೆ ನಿಜವಾಗಲೂ ವಿಜ್ಞಾನಕ್ಕಿಂತ ಮಿಗಿಲಾದದ್ದು ಇಲ್ಲವೆ ಎಂಬ ಪ್ರಶ್ನೆ ಬರುತ್ತದೆ. ಇಂದು ಚಂದ್ರಗ್ರಹಣ ಇದೆ. ಅದನ್ನು ಕೂಡ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಬೇಕು ಅಂತಾರೆ.

ಈ ಪದ ಬಳಕೆಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಏಕೆಂದರೆ, ನಾವಿದನ್ನು ವೈಚಾರಿಕವಾಗಿ ಯಾಕೆ ನೋಡಬಾರದು? ನಮ್ಮ ಹಿರಿಯರು ಏನು ನಂಬಿದ್ದರು ಅಂದರೆ, ಗ್ರಹಣ ಕಾಲಕ್ಕೆ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಇರಬಾರದು ಎನ್ನುತ್ತಿದ್ದರು. ಆರೇಳು ಗಂಟೆ ಮುಂಚಿತವಾಗಿಯೇ ಆಹಾರ ಸೇವಿಸುವಂತೆ ಹೇಳುತ್ತಿದ್ದರು.

ಜ.31ರಂದು ಸೂಪರ್ ಬ್ಲಡ್ ಬ್ಲ್ಯೂ ಮೂನ್ ನೋಡುವುದು ಹೇಗೆ?ಜ.31ರಂದು ಸೂಪರ್ ಬ್ಲಡ್ ಬ್ಲ್ಯೂ ಮೂನ್ ನೋಡುವುದು ಹೇಗೆ?

ಅದೇ ರೀತಿ ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಬರಬಾರದು ಎನ್ನುತ್ತಿದ್ದರು. ಇನ್ನು ಸ್ನಾನ, ಉಪವಾಸ, ಧ್ಯಾನ ಇವೆಲ್ಲ ಯಾಕೆ ಮಾಡುತ್ತಿದ್ದರು ಎಂಬುದನ್ನು ವಿಚಾರದ ಹಿನ್ನೆಲೆಯಿಂದ ಏಕೆ ನೋಡಬಾರದು? ಇವೆಲ್ಲ ಮೂಢನಂಬಿಕೆ ಎಂದು ಯಾವ ಅಧ್ಯಯನವೂ ಇಲ್ಲದೆ ಹೇಳಬಹುದೇ?

ಸಂಶೋಧನೆ ಮಾಡಬಹುದಲ್ಲವೆ?

ಸಂಶೋಧನೆ ಮಾಡಬಹುದಲ್ಲವೆ?

ಈ ಮಾತನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ಮಾಡಿ, ಯಾಕೆ ಹಾಗೆ ಹೇಳಿದರು ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಬಹುದಲ್ಲವಾ? ಮೈಕ್ರೋಸ್ಕೋಪ್ ಗೆ ಕಾಣಿಸುವುದಷ್ಟನ್ನೇ ಸೂಕ್ಷ್ಮಾಣು ಅನ್ನೋದಾದರೆ, ಅದಕ್ಕೂ ಕಾಣದ್ದನ್ನು ಏನಂತ ಕರೆಯುತ್ತೀರಿ? ಅಥವಾ ಅಂಥದ್ದು ಇಲ್ಲವೇ ಇಲ್ಲ ಎನ್ನಲು ಸಾಧ್ಯವಾ?

ವರ್ಷದಲ್ಲಿ ಅದೆಷ್ಟೋ ಗ್ರಹಣಗಳು

ವರ್ಷದಲ್ಲಿ ಅದೆಷ್ಟೋ ಗ್ರಹಣಗಳು

ಗ್ರಹಣಗಳು ವರ್ಷದಲ್ಲಿ ಅದೆಷ್ಟೋ ಸಂಭವಿಸುತ್ತದೆ. ಆದರೆ ಗೋಚರ ಆಗುವುದು ಅಥವಾ ಪರಿಣಾಮ ಬೀರುವಂಥದ್ದು ಕೆಲವು ಮಾತ್ರ. ಇದು ಖಗೋಳ ಕೌತುಕ ಎಂಬುದು ನಿಜ. ಆದರೆ ಆ ಕಾರಣಕ್ಕೆ ನಮ್ಮ ಹಿರಿಯರು ತಿಳಿಸಿದ ವಿಚಾರಗಳನ್ನೆಲ್ಲ ಎಡಗೈಲಿ ಪಕ್ಕಕ್ಕೆ ಸರಿಸುವಷ್ಟು ಜ್ಞಾನವಂತರು ನಾವಾಗಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕು ಅಲ್ಲವಾ?

ಆಯುರ್ವೇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸ

ಆಯುರ್ವೇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸ

ಉದಾಹರಣೆಗೆ ಅಲೋಪಥಿ ವೈದ್ಯ ಪದ್ಧತಿಯೊಂದೇ ವೈಜ್ಞಾನಿಕ ಎಂದು ವಾದಿಸುವವರಿದ್ದಾರೆ. ಆಯುರ್ವೇದ ವೈದ್ಯ ಪದ್ಧತಿಗೆ ಐದು ಸಾವಿರ ವರ್ಷದಷ್ಟು ಇತಿಹಾಸವಿದೆ ಮತ್ತು ಅಲೋಪಥಿಯಲ್ಲಿ ಗುಣವಾಗದ ಅದೆಷ್ಟೋ ಕಾಯಿಲೆಗಳು ಆಯುರ್ವೇದದಲ್ಲಿ ಸಂಪೂರ್ಣ ಗುಣಪಡಿಸಿದ ಉದಾಹರಣೆ ಇದೆ.

ಆ ಅಳತೆಗೋಲು ಸರಿಯೇ?

ಆ ಅಳತೆಗೋಲು ಸರಿಯೇ?

ಯುನಾನಿ, ಹೋಮಿಯೋಪಥಿ ಕೂಡ ಪರಿಣಾಮಕಾರಿ ವೈದ್ಯ ಪದ್ಧತಿಯೇ. ಆದರೆ ಎಲ್ಲವನ್ನೂ ವೈಜ್ಞಾನಿಕ ಎಂಬ ಅಳತೆಗೋಲಿನಿಂದಲೇ ಅಳೆಯುವ ಧೋರಣೆ ಸರಿಯೇ? ಹಾಗಿದ್ದರೆ ಅನುಭವಕ್ಕೆ ಬೆಲೆಯೇ ಇಲ್ಲವಾ? ಇನ್ನು ಇಂದಿನ ಚಂದ್ರಗ್ರಹಣದ ಬಗ್ಗೆಯೇ ಹೇಳುವುದಾದರೆ ಅದನ್ನು ವೈಚಾರಿಕ ಹಿನ್ನೆಲೆಯಲ್ಲಿ ನೋಡಬೇಕು ಮತ್ತು ನಮ್ಮ ಹಿರಿಯರ ಆಚರಣೆಗಳ ಬಗ್ಗೆ ಪೂರ್ವಗ್ರಹ ಇಲ್ಲದ ಸಂಶೋಧನೆ ಆಗಬೇಕು.

English summary
Now everything proved scientifically. What does it mean? Is Science ultimate in the world? So, here is an article on the backdrop of lunar eclipse on January 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X