ಪ್ರತಿಕ್ರಿಯೆ: ಬಿಗ್ ಬಾಸ್ ಹೌದು ಇದೆಂಥ ಪೋಗ್ರಾಂ ಸ್ವಾಮಿ!
ಈಟಿವಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಭರ್ಜರಿಯಾಗಿ ಆರಂಭ ದೊರೆದಿದೆ. ಆರಂಭದಿಂದಲೇ ಪುಣೆಯ ಲೋನಾವಾಲ ಮನೆಯ ವಾಸ್ತು ಬಗ್ಗೆ ವಿವಾದಿತ ಸ್ಪರ್ಧಿ ನರೇಂದ್ರ ಶರ್ಮ ತಲೆ ಕೆಡಿಸಿಕೊಂಡಿದ್ದಾರೆ. ಈ ಯಪ್ಪಾ ಯಾಕೆ ಬಂದ ಈ ಶೋಗೆ ಎಂದು ಹಲವಾರು ಪ್ರೇಕ್ಷಕರು ಪ್ರಶ್ನಿಸಿದ್ದಾರೆ.
ಕನ್ನಡ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ಹೊಸದಲ್ಲ. ಆದರೆ, ವಿವಾದ ಹುಟ್ಟಿಸಿದ ರಿಯಾಲಿಟಿ ಶೋಗಳು ಜನಪ್ರಿಯತೆಯ ಚಾರ್ಟ್ ನಲ್ಲೂ ಅಗ್ರಸ್ಥಾನಕ್ಕೇರಿದ್ದು ಸುಳ್ಳಲ್ಲ. ಕಿಚ್ಚ ಸುದೀಪ್ ನಿರೂಪಣೆ ಇರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒನ್ ಇಂಡಿಯಾ ಓದುಗರು ನೀಡಿರುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ನಿಮ್ಮ ಮುಂದಿಡುತ್ತಿದ್ದೇವೆ.. ಒಪ್ಪಿಸಿಕೊಳ್ಳಿ.. ಅಂದ ಹಾಗೆ, ನಿಮ್ಮ ಅಭಿಪ್ರಾಯವನ್ನು ತಪ್ಪದೇ ದಾಖಲಿಸಿ..
ರಾಧಾ ಮೌರ್ಯ: ಇದು ಒಂದು ಪ್ರೊಗ್ರಾಮ ಇಲ್ಲಿರೋರು ಸೆಲೆಬ್ರಿಟಿಗಳಾ? ಅನುಶ್ರೀ ನ ನಿರೂಪಣೆ ಮಾಡೊವಾಗಲೇ ಅವಳು ಅವಳ ಬಟ್ಟೆ ಅವಳು ಹಲ್ಲು ಕಿರಿಯೋದು ನೋಡಿ ಬೇಜಾರಾಗಿದೆ ಇನ್ನು ಚಂದ್ರಿಕಾ ಬದಲು ಯಾರದ್ರು ಅಜ್ಜಿ ತಗೊಬಹುದಿತ್ತು ಇನ್ನು ಆ ಜಯಲಕ್ಷ್ಮಿ ತು ಗುರೂಜಿ ಇವರೆಲ್ಲರಿಗೂ ಮನ ಮರ್ಯಾದೆ ಇದೆಯಾ? [ಬಿಗ್ ಬಾಸ್ ಸ್ಪರ್ಧಿಗಳು ಯಾರು?]
ಇನ್ನು ಹುಡುಗರು ಸೈಡ್ ಆಕ್ಟ್ ಮಾಡೋರು ಇನ್ನು ವಿಜಯ ರಾಘವೇಂದ್ರ ಕೆಲಸ ಇಲ್ಲದೆ ಇರೋನು ಇದನ್ನ ನಡೆಸಿ ಕೊಡೋಕ್ಕೆ ಯಾರು ಗತಿನೇ ಇಲ್ಲ ಇನ್ನ ಆ ಕಿಚ್ಚ ಹುಚ್ಚ ವಾರಕ್ಕೆ ಎರಡು ಸಲ ಬಂದು ಸ್ಕೋಪ್ ತಗೊಳೊದೆ ಆಗುತ್ತೆ ಬಿಗ್ ಬಾಸ್ ಕನ್ನಡಕ್ಕೆ ಬೇಕಿತ್ತಾ?

ಬಾಲರಾಜು: very lazy & boring show stop it
ಸುಮ: ಚಂದ್ರಿಕಾ ನೋಡಬಹುದು, ಡುಮ್ಮ ಪುರೋಹಿತ ಹಾಗು ನರಸಮ್ಮ ಯಾಕೋ ?
ಜೈಸನ್ ದುಬೈ: ಪ್ಲೀಸ್ ಚೇಂಜ್ ಬಿಗ್ ಬಾಸ್ ವಾಯ್ಸ್. ವೀ ಡೋಂಟ್ ಲೈಕ್ ಇಟ್ !!
ವೆಂಕಟೇಶ್: ಬ್ರಹ್ಮಾಂಡ ಗುರು, ಅಪರ್ಣ, ಜಯಲಕ್ಷ್ಮಿ: not suitable for the show
ಕಲಾ: ಒಳ್ಳೆಯ ಟೀಂ ನಲ್ಲಿ ಕೆಟ್ಟ ನಿತ್ಯಾನಂದ ಪ್ಲೀಸ್ ಬೇಡ, ಅಲ್ಲೂ ಅವನ ದರಿದ್ರ ಚಾಳಿ ಬಿಡುವವನಲ್ಲ
ಅನಾಮಿಕ: ಕನ್ನಡಿಗರಿಗೆ ಇಂಥ ಕಾರ್ಯಕ್ರಮದಿಂದ ಎಂಥ ಉಪಯೋಗ? ಸ್ಪರ್ಧಿಗಳಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು ಎಂದು ಬಿಗ್ ಬಾಸ್ ಹೇಳಿದರೂ ಅವರು ಕೇಳುವುದಿಲ್ಲ. ಸ್ಪರ್ಧಿಗಳಿಗೆ ದಂಡ ವಿಧಿಸಬೇಕು.
ವೀರೇಶ್ : ಇಂಥ ಕಚಡ ಕಾರ್ಯಕ್ರಮ ಕನ್ನಡಕ್ಕೆ ಬೇಕಿತ್ತ ,ಕನ್ನಡ ಜನ ಉಗಿಯುವ ಮೊದಲು ಕಾರ್ಯಕ್ರಮ ನಿಲ್ಲಿಸಿ ಇಲ್ಲವಾದರೆ ಜನ ಈ ಟಿವಿ ಕನ್ನಡ ನೋಡಲ್ಲ
ಸುಧಾ: ಕನ್ನಡಕ್ಕೆ ಬಿಗ್ ಬಾಸ್ ಬೇಕಾಗಿರಲಿಲ್ಲ , ಸೆಲೆಬ್ರೆಟಿಗಳ ಆಯ್ಕೆ ಸರಿಯಿಲ್ಲ
HARISH KN: ಸ್ವಾಮಿ ಯಾವುದೇ ಒಂದು ವಿಷಯ ಅಂದಮೇಲೆ ಸಕಾರಾತ್ಮಕ ನಕಾರಾತ್ಮಕ ಅಭಿಪ್ರಾಯಗಳು ಬರೋದು ಸಹಜ ಆದ್ರೆ ಬರಿ ನಕಾರಾತ್ಮಕ ಅಭಿಪ್ರಾಯಗಳನ್ನ ಕಷ್ಟ ಪಟ್ಟು ಹುಡುಕಿ ಹಾಕಿದಿರಲ್ವಾ ತುಂಬನೇ ಗ್ರೇಟ್ ಆಗ್ಬಿಟ್ರಿ , ಇಷ್ಟ ಇರೋರು ನೋಡಿ ಇಲ್ಲ ಬೇಡ ಇಷ್ಟಪಡೋರು ನೋಡ್ತಾರೆ ಹಳೆ ಕಾಲದಲ್ಲಿ ಇರೋ ಥರ ಒಂದೇ ಚಾನೆಲ್ ಇಲ್ವಲ್ಲ ನಿಮಗಿಷ್ಟ ಬಂದ್ ಚಾನೆಲ್ ಚೇಂಜ್ ಮಾಡ್ಕೊಳಿ ನೋಡಲೇ ಬೇಕು ಅಂತ ಏನು ಯಾರು ಫೋರ್ಸ್ ಮಾಡ್ತಿಲ್ಲ.
ಸಂತೋಷ್ : ಈ ಟಿವಿಯವರು ಟಿ ಆರ್ ಪಿ ಹೆಚ್ಚು ಮಾಡಿಕೊಳ್ಳಲು ಮಾಡುತ್ತಿರುವ ಪ್ರಯತ್ನವೆ ಬಿಗ್ ಬಾಸ್. ಕಾರ್ಯಕ್ರಮ ತುಂಬಾ ಸಪ್ಪೆ. ಒಂದಿಷ್ಟು ಹುರುಳಿಲ್ಲ.
ಬಾಲು ಬೆಂಗಳೂರು : ಬಿಗ್ ಬಾಸ್ ಒಂದೊಳ್ಳೇ ಕಾರ್ಯಕ್ರಮ.. ಮೊದಲೆರಡು ದಿನ ಇಂಟರೆಸ್ಟಿಂಗ್ ಅನ್ನಿಸ್ತು. ಸ್ಫರ್ಧಿಗಳ ಆಯ್ಕೆ ಸರಿಯಿಲ್ಲ. ಇಂತ ಕಾರ್ಯಕ್ರಮಗಳು ಕನ್ನಡಕ್ಕೆ ಬೇಕು
ಸುಭಾಷ್ ಕೆಎಸ್ ಹೆಬ್ಬಾರ್ : ಖಂಡಿತ ಇಂಥ ಕಾರ್ಯಕ್ರಮಗಳು ಬೇಕು. ಆದ್ರೆ ಇಲ್ಲಿ ಭಾಗವಹಿಸಿದ ಒಂದೇ ಒಂದು ವ್ಯಕ್ತಿಯು ಈ ಕಾರ್ಯಕ್ರಮಕ್ಕೆ ಹೊಂದಿಕೆ ಆಗ್ತಾ ಇಲ್ಲ.ಯಾರದ್ರು ಒಳ್ಳೆ ರೀತಿಯಲ್ಲಿ ಪ್ರಸಿದ್ದಿ ಹೊಂದಿದವರು, ಅವರಿಂದ ಏನನ್ನಾದರು ಕಲಿಯುಂತಹ ವ್ಯಕ್ತಿತ್ವ ಉಳ್ಳವರನ್ನು, ಸಾಧಕರನ್ನು ಕರೆಸಿದ್ರೆ ತುಂಬ ಚೆನ್ನಾಗಿರುತ್ತೆ. ಅಲ್ಲ ಸ್ವಾಮಿ ಆ ಬ್ರಹ್ಮಾಂಡ ಗುರು, ಜಯಲಕ್ಷ್ಮಿ, ಇಂಥ ಕಳೆಹೀನರು ಯಾಕೇಂತ ಸುದೀಪ್ ಸರ್.. ಪ್ಲೀಸ್ ಈ ಕಾರ್ಯಕ್ರಮ ಚೆನ್ನಾಗಿ ಆಗಬೇಕಾದರೆ ಕೂಡ್ಲೇ ಬ್ರಹ್ಮಾಂಡ ಗುರು, ಜಯಲಕ್ಷ್ಮಿನ್ನ ಚೇಂಜ್ ಮಾಡಿ ... ಇಲ್ಲ ಅಂದ್ರೆ TRP ಗೋವಿಂದ. Session II ಯಾರು ನೋಡಲ್ಲ












Click it and Unblock the Notifications