• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಶಿವ' ಚಿತ್ರ ಇಷ್ಟಪಟ್ಟವರ, ಪಡದವರ ಓಲೆಗಳು

By Prasad
|

ದಟ್ಸ್ ಕನ್ನಡ ಸರಿಯಾಗಿಯೇ ಹೇಳಿದೆ. ಚೆನ್ನಾಗಿಲ್ಲದ ಚಿತ್ರವನ್ನು ಸೂಪರ್ ಆಗಿದೆ ಎನ್ನುವುದಕ್ಕಾಗುತ್ತದೆಯೇ? ಇನ್ನು ಓ೦ ಪ್ರಕಾಶರವರ ತಲೆಯಲ್ಲಿ ಐಡಿಯಾಗಳು ಕಮ್ಮಿಯಾಗುತ್ತಿವೆ ಎ೦ದು ದಟ್ಸ್ ಕನ್ನಡ ಹೇಳುತ್ತಿದೆ. ಅಲ್ಲ ಸ್ವಾಮಿ ಆ ವಯ್ಯನ ತಲೆಯಲ್ಲಿ ಐಡಿಯಾಗಳು ಇದ್ದಿದ್ದಾದರೂ ಯಾವಾಗ? ಶಿವಣ್ಣ ಕಥೆಗಳ ಆಯ್ಕೆಯಲ್ಲಿ ತು೦ಬಾ ಬೇಜವಾಬ್ದಾರಿಯಿ೦ದಿದ್ದುಬಿಡುತ್ತಾರೆ ಎನಿಸುತ್ತದೆ. ಇತ್ತೀಚೆಗೆ ಹಾಟ್ರಿಕ್ ಹೀರೊ ಒ೦ದೂ ಒಳ್ಳೆಯ ಚಿತ್ರಗಳನ್ನು ಕೊಟ್ಟ ಉದಾಹರಣೆಗಳಿಲ್ಲ. ಪುನಿತ್ ತು೦ಬಾ ವಾಸಿ ಎನಿಸುತ್ತದೆ.
* ಗುರುರಾಜ್ ಕೆ.

***
ನಿಮಗೆ ಎಲ್ಲ negative ಆಗೇ ಕಾಣತ್ತದೆ. ಈ ಚಿತ್ರದಲ್ಲಿ ಅದ್ಬುತವಾದ ಹಾಡುಗಳಿವೆ, ಕ್ಯಾಮೆರಾ ವರ್ಕ್ ಸುಪರ್ಬ್, ಶಿವಣ್ಣ ಆಕ್ಟಿಂಗ್ ಗ್ರೇಟ್, ಎಲ್ಲರಿಗೂ ರಿಚ್ ಆಗಿದೆ ಸಿನಿಮಾ. ಕೆಲವು ಮೈನಸ್ ಪಾಯಿಂಟ್ ಕೂಡ ಇದೆ. ದಯವಿಟ್ಟು ಕನ್ನಡ ಸಿನೆಮಾಗೆ ಸಪೋರ್ಟ್ ಮಾಡಿ. ಪೆನ್ ಇದೆ ಅಂತ ಏನೇನೋ ಬರಿಬೇಡಿ ಪತ್ರಕರ್ತರೇ. ಕೆಲವರು ಚೆನ್ನಾಗಿದೆ ಅಂತ ಬರಿತಿರಾ, ಕೆಲವರು ಚೆನ್ನಾಗಿಲ್ಲ ಅಂತ ಬರಿತೀರ, ಅದು ನಿಮ್ಮ ದೃಷ್ಟಿಕೋನ. ಎಲ್ಲ ಸಿನಿಮಾ ಪಕ್ಕ ಸಿನಿಮಾ ಆಗೋಕೆ ಸಾಧ್ಯ ಇಲ್ಲ. ಬಟ್ 'ಶಿವ' ನೋಡಿದೆ ಓಕೆ ಒಳ್ಳೆ ಪ್ರಯತ್ನ. ['ಶಿವ' ಚಿತ್ರವಿಮರ್ಶೆ]
* ವಿನೋದ್ ಭಟ್

***
ಇಲ್ಲಿ ಅನಿಸಿಕೆಗಳನ್ನು ಹಾಕಿರುವ ಕೆಲವು ಮಹನೀಯರು ತಮ್ಮ ಸಂಸ್ಕೃತಿ ಎಂಥದ್ದು ಎಂಬುದನ್ನು ತೋರಿಸಿದ್ದಾರೆ. ಮಾತಿನಲ್ಲಿ ಬೈಗುಳವನ್ನು ಉಪಯೋಗಿಸದೆ ಸಭ್ಯ ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ನಾಗರೀಕ ಸಮಾಜದ ಲಕ್ಷಣ. ತಾವು ಅಂಥ ನಾಗರಿಕ ಸಮಾಜಕ್ಕೆ ಸೇರಿದವರಲ್ಲ ಎಂಬುದನ್ನು ಇಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಕೆಲವು ಮಹನೀಯರು ತೋರಿಸಿಕೊಂಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅವರಿಗೆ ದೇವರು ಸದ್ಬುದ್ಧಿ ಕೊಡುವಂತೆ ಕೇಳಿಕೊಳ್ಳುತ್ತೇನೆ. [ಆರೆಸ್ಸೆಸ್‌ನವರನ್ನು ಒದ್ದೋಡಿಸಬೇಕು ಅಂದ ಎಚ್ಡಿಕೆ]
* ಸಂತೋಷ್

***
ವಯಸ್ಸಿಗೆ ಬಂದಿರುವ ಆರು ಜನ ಹುಡುಗರ ಜೊತೆ ಎರಡು ಹುಡುಗಿಯುರು ಮುಕ್ತವಾಗಿ ಕಾಡು ಮೇಡಲ್ಲಿ ತಿರುಗಾಡುವುದನ್ನು ಸಭ್ಯ ಸಮಾಜದ ಒಪ್ಪುವುದಿಲ್ಲ. ಇದೇ ನಮ್ಮ ಸಂಸ್ಕೃತಿ ಎಂದು ಮುಂದುವರಿದರೆ ಇಂತಹ ಅವಘಡಗಳಿಗೆ ಅವರೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಾಲಿಗೆ ಮುಳ್ಳು ಚುಚ್ಚಿದರೆ ಅದು ಮುಳ್ಳಿನ ತಪ್ಪಲ್ಲ. ಕಾಲಿಗೆ ಚಪ್ಪಲಿ ಹಾಕದಿರುವುದೇ ತಪ್ಪು ಅಂದರೆ ದುಷ್ಟರು ಮುಳ್ಳಿನ ಹಾಗೇ ಎಲ್ಲಾ ಕಡೆ ಇರ್ತಾರೆ. ಇಂತಹ ಘಟನೆಯಿಂದಲಾದರೂ ಅಧುನಿಕ ಯುವತಿಯುರು ಬುದ್ದಿ ಕಲಿತರೆ ಒಳ್ಳೇದು. ಏನಂತೀರ ಗೆಳೆಯರೇ? [ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ]
* ಅಶೋಕ ಜೆ.ಎಮ್.

***
ನಮಸ್ತೆ ಗುರುಜಿ, ನನ್ನದು ಹಸ್ತಾ ನಕ್ಷತ್ರ ಕನ್ಯಾ ರಾಶಿ. 2006ರಿಂದ ನಮ್ಮ ಕಷ್ಟಗಳ ಆರಂಭ. 1990ರಲ್ಲಿ ಅಮೆರಿಕದಲ್ಲಿ ಎಮ್ಎಸ್ ಮಾಡಿ ಸುಮಾರು 2006ರವರೆಗೆ ಅಲ್ಲಿಯೇ ಇದ್ದು ಚೆನ್ನಾಗಿದ್ದೆವು. ಆದರೆ 2006ರಿಂದ ನಮ್ಮ ಕಷ್ಟಗಳು ಪ್ರಾರಂಭವಾಗಿವೆ. 2006ರಲ್ಲಿ ಇಂಡಿಯಾದಲ್ಲಿ ಹೊಸ ಬಿಸಿನೆಸ್ ಪ್ರಾರಂಭಿಸಲು ನಿರ್ಧರಿಸಿ 25 ಲಕ್ಷ ಇನ್ವೆಸ್ಟ್ ಮಾಡಿದೆವು. ನಂತರ 2009ರ ಜನವರಿಯಲ್ಲಿ ಇಂಡಿಯಾಕ್ಕೆ ವಾಪಸು ಬಂದೆವು. ಅಲ್ಲಿಂದ ಬರಿ ಮೋಸ, ಎಲ್ಲವನ್ನೂ ಕಳೆದುಕೊಂಡೆವು. ಮೂರು ವರ್ಷಗಲ್ಲಿ ಮನೆ ಮಾರಬೇಕಾಗಿ ಬಂತು. ಪ್ರಾರಂಭಿಸಿದ ಎಲ್ಲ ಬಿಸಿನೆಸ್ ಗಳಲ್ಲೂ ಮೋಸ. ಈಗ ಅಮೆರಿಕಾಕ್ಕೆ ವಾಪಸು ಆಗುವ ಉದ್ದೇಶ. [ಶನಿ ಹೇಗೆ ಕಾಡುತ್ತಾನೆ]
* ಜಿ. ಹೆಗಡೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸಂಪಾದಕರಿಗೆ ಪತ್ರ ಸುದ್ದಿಗಳುView All

English summary
Letters to the editor : Few movie lovers have liked the movie Shiva and few have not liked it. People need not have to decide based on the review. They can take their own decisions. See the movie and decide.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more