ಹೇಸಿಗೆ ಹುಟ್ಟಿಸುತ್ತಿರುವ ಕಾಂಗ್ರೆಸ್ ಭ್ರಷ್ಟಾಚಾರ

congress-upa-corruption-surpasses-himalaya
ನವದೆಹಲಿ, ಅ. 17: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಏನಾಗಿದೆ? ಪಕ್ಷಬೇಧ ಮರೆತು ಲಂಚ ತಿನ್ನುವುದಕ್ಕಿಂತ ಮಾನಮರ್ಯಾದೆ ಬಿಟ್ಟು ಅದನ್ನು ಮರೆಮಾಚಲು ಹೀನಾಯವಾಗಿ ನಡೆಕೊಳ್ಳುತ್ತಿರುವುದು ಅಕ್ಷಮ್ಯ, ಅಕ್ಷಮ್ಯ. ಕಾಂಗ್ರೆಸ್ಸಿನ ಮಂಗಾಟಗಳನ್ನು ನೋಡಿ ನಾಡಿನ ಜನ ನಿಜಕ್ಕೂ ಬೆಚ್ಚಿಬೀಳುತ್ತಿದ್ದಾರೆ.

ಹೋಗಲಿ ಇದು ಆಡಳಿತಾರೂಢ ಮಿತ್ರಪಕ್ಷಗಳಿಗೆ ಸೀಮಿತವಾ ಅಂದರೆ ಪ್ರಮಯುಖ ಪ್ರತಿಪಕ್ಷವಾದ ಬಿಜೆಪಿಯ ಅಧಿನಾಯಕನೇ ಹೊಸಲು ತಿಂದಿದ್ದಾನೆ, ಸಂಜೆವರೆಗೂ ಕಾಯಿರಿ. ಆತನ ಜಾತಕವೂ ಜಾಲಾಡುತ್ತೇವೆ ಎನ್ನುತ್ತಿದ್ದಾರೆ ಸದ್ಯಕ್ಕೆ 'ಮಿಸ್ಟರ್ ಕ್ಲೀನ್' ಅಂತೆ ಕಾಣಿಸುತ್ತಿರುವ ಅರವಿಂದ್ ಕೇಜ್ರಿವಾಲಾ ಅವರು.

ಸದ್ಯಕ್ಕೆ ಪುರಾತನ ಕಾಂಗ್ರೆಸ್ಸು ಮತ್ತು ಅದರಷ್ಟೇ ಪುರಾತನವಾದ ಪಕ್ಷದ ನಾಯಕರ ಭ್ರಷ್ಟಾಚಾರ ಹೇಸಿಗೆ ಹುಟ್ಟಿಸುವಂತಿದೆ. ಪ್ರಧಾನಿಯಿಂದ ಹಿಡಿದು ಚಿಲ್ಟುಪಲ್ಟುಗಳವರೆಗೂ 'ಕೈ'ಕೆಡಿಸಿಕೊಂಡವರೇ. ಕೊನೆಗೆ ಕಾಂಗ್ರೆಸ್ ಅಧಿನಾಯಕಿಯ ಅಳಿಯನೂ ಇದಕ್ಕೆ ಹೊರತಾಗಿಲ್ಲ ಅಂದರೆ ನಗಬೇಕೋ/ಅಳಬೇಕೋ ತಿಳಿಯದಾಗಿದೆ.

ಸಮಾಧಾನಕರ ವಿಷಯವೆಂದರೆ 'ಕೇಂದ್ರ ಸಚಿವರಾಗಿ' ನಮ್ಮ ಕರ್ನಾಟಕದ ಕಟ್ಟಾಳುಗಳ ಹೆಸರುಗಳು ಇನ್ನೂ ಎಲ್ಲೂ ಪ್ರಸ್ತಾಪವಾಗಿಲ್ಲ ಎಂಬುದು ಸಮಧಾನಕರ. ಗೊತ್ತಿಲ್ಲ, ಮುಂದೆ ಇವರ ಹೆಸರೂ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಈ ನಾಯಕರ ಮೇಲೆ ಒಂದಷ್ಟು ನಂಬಿಕೆಯಿದೆಯಾದರೂ ಪಕ್ಷದ ಮೇಲೆ ಎಳ್ಳಷ್ಟೂ ನಂಬಿಕೆಯಿಲ್ಲವಾಗಿದೆ.

ಮನಮೋಹನ್ ಸಿಂಗ್ ಎಂಬ ಪ್ರಧಾನಿ ಮೊದಮೊದಲು 'ಇಲ್ಲ ನಾನವನಲ್ಲ. ನಮ್ಮ ಹುಡುಗರೂ ಅಂಥವರಲ್ಲ' ಅನ್ನುವುದೇನು, ಅದಾಗಿ ನಡುಬೀದಿಯಲ್ಲಿ ಬೆತ್ತಲುಗೊಳಿಸಿದಾಗ ಅದೇ ಹುಡುಗರು ಜೈಲುಗಳಿಗೆ ಹೋಗುವುದೇನು. ಛಿಛಿಛಿ! ವಾದ್ರಾ ಆದ್ರೇನೂ ಜಾಕೀರ್ ಹುಸೇನ್ ಮೊಮ್ಮಗ ಆದ್ರೇನೂ ಎಲ್ರೂ ಒಂದೇ ಶಿವಾ ಎನ್ನುವಂತಾಗಿದೆ.

2008ರ ಫೆಬ್ರವರಿಯಲ್ಲಿ ಹರಿಯಾಣಾದ ಮನೇಸರ್‌-- ಶಿಖೋಪುರ್‌ನಲ್ಲಿರುವ 3.5 ಎಕರೆ ಜಾಗವನ್ನು 7.5 ಕೋಟಿ ರೂ.ಗೆ ಖರೀದಿಸಿದ ಭೂಮಿಯನ್ನು 'ಖಾಸಗಿ ವ್ಯಕ್ತಿ' (ಹೌದು ಈ ರಾಬರ್ಟ್ ವಾದ್ರಾ ಪ್ರಸ್ತುತ ಯಾವುದೇ ಹುದ್ದೆಯನ್ನು ಹೊಂದಿಲ್ಲ) ಕೆಲವೇ ಕಾಲದಲ್ಲಿ ಅದನ್ನು 58 ಕೋಟಿಗೆ ಮಾರುವುದೇನು? ಆ 30 ಚಿಲ್ರೆ ಕೋಟಿಯನ್ನು ಮತ್ತೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡುವುದೇನು? (ಅಲ್ಲೂ ನಾಮ್ ಕೆ ವಾಸ್ತೆ ಹೂಡಿಕೆ ಇಳುವರಿ ಮಾತ್ರ ಭರ್ಜರಿ). ಅದರಿಂದ ಮತ್ತೆ ಲಾಭಗಳಿಸುವುದೇನು? OMG!

ಸುಮ್ಮನೆ ಇದನ್ನೆಲ್ಲ ಗಮನಿಸುತ್ತಿರುವ ಮತದಾರ ಮಹಾಪ್ರಭು ಅವಧಿಗೆ ಮುನ್ನವೇ ಚುನಾವಣೆಗಳು ನಡೆಯುವ ಎಲ್ಲ ಲಕ್ಷಣಗಳೂ ಇವೆ. ಬರಲಿ ಆವಾಗ ಎಂದು ದೊಣ್ಣೆನಾಯಕರಿಗೆ ಕಾಯುತ್ತಿದ್ದಾನೆ. ಜೈ ಭಾರತಾಂಬೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+