ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪುತಪ್ಪಾಗಿ ವಚನ ವಾಚಿಸಿದ ಯಡಿಯೂರಪ್ಪ

By * ಎಚ್ ಆನಂದರಾಮ ಶಾಸ್ತ್ರಿ
|
Google Oneindia Kannada News

BS Yeddyurappa
ಮುಖ್ಯಮಂತ್ರಿ ಪದವಿ ಕೈತಪ್ಪಿದಲ್ಲಿಂದ ಯಡಿಯೂರಪ್ಪ ಅವರ ಚಿತ್ತಕ್ಷೋಭೆ ಯಾವ ಮಟ್ಟವನ್ನುತಲುಪುತ್ತಿದೆ ಎಂಬುದನ್ನು ಈ ನಾಡಿನ ಜನತೆ ಕಂಡಿದ್ದಾರೆ. ಆ ಕ್ಷೋಭೆಯ ಪರಾಕಾಷ್ಠೆಯನ್ನು ಯಡಿಯೂರಪ್ಪನವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಪ್ರದರ್ಶಿಸಿದರು.

ಬಸವ ಜಯಂತಿ ಸಂಬಂಧಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ ಅವರು, ಅಕ್ಕಮಹಾದೇವಿಯ ವಚನವನ್ನು (ತಪ್ಪುತಪ್ಪಾಗಿ) ಉಚ್ಚರಿಸುತ್ತಲೇ, ತಮಗೆ ಪದವಿ ತಪ್ಪಿದ ಮತ್ತು ಆರೋಪ ತಟ್ಟಿದ ಅಸಮಾಧಾನವನ್ನು ಕೋಪಾವೇಶಗಳಿಂದ ಹೊರಹಾಕಿದರು.

ತನ್ಮೂಲಕ, ಮಹಾದೇವಿಯಕ್ಕನಿಗೂ ಮತ್ತು 'ನಿಂದಿಸಿದವರೆನ್ನ ತಂದೆತಾಯಿಗಳೆಂಬೆ...ಜರಿದವರೆನ್ನ ಜನ್ಮಬಂಧುಗಳೆಂಬೆ', 'ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ' ಎಂದ ಬಸವಣ್ಣನವರಿಗೂ ಅವಮಾನ ಮಾಡಿದರು.

ಕವಿ ಚನ್ನವೀರ ಕಣವಿಯವರಿಗೆ ಹಾಕಲೆಂದು ಮಾಲೆಯೊಂದನ್ನು ಮುಖ್ಯಮಂತ್ರಿ ಸದಾನಂದಗೌಡರು ಯಡಿಯೂರಪ್ಪನವರಿಗೆ ಕೊಡಲು ಹೊರಟಾಗ ಯಡಿಯೂರಪ್ಪ ಅದನ್ನು ತೆಗೆದುಕೊಳ್ಳದೆ, ಪಕ್ಕದಲ್ಲಿದ್ದ ಬಸವರಾಜ ಬೊಮ್ಮಾಮಿಗೆ ಅದನ್ನು ತೆಗೆದುಕೊಂಡು ಕಣವಿಯವರಿಗೆ ಹಾಕಲು ಸೂಚನೆ ನೀಡುವ ಮೂಲಕ ಕಣವಿಯವರಿಗೂ ಮತ್ತು ಈ ರಾಜ್ಯದ ಮುಖ್ಯಮಂತ್ರಿಯವರಿಗೂ ಅವಮಾನ ಮಾಡಿದರು.

ಯಡಿಯೂರಪ್ಪನವರಿಗೆ ತಮ್ಮ ಮೇಲಿನ ಆರೋಪದ ಚಿಂತೆ ಮತ್ತು ಪದವಿ ದಾಹ ಇವುಗಳ ಮುಂದೆ ಕವಿಶ್ರೇಷ್ಠರೂ ನಗಣ್ಯ, ಮುಖ್ಯಮಂತ್ರಿಯೂ ನಗಣ್ಯ, ಬಸವಣ್ಣ-ಅಕ್ಕಮಹಾದೇವಿಯರೂ ನಗಣ್ಯ ಎಂದು ಈ ನಾಡಿನ ಜನತೆ ಮತ್ತೆ ಯಡಿಯೂರಪ್ಪನವರ ಬಗ್ಗೆ ಆಡಿಕೊಳ್ಳುವಂತಾಯಿತು.

English summary
Former CM BS yeddyurappa become total insane in greedy of getting power back. Recently in Siddaganga mutt Yeddyurappa quoted Akka Mahadevi's Vachanas wrongly connected it to his fate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X