• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?

By *ಬಾಲರಾಜ್ ತಂತ್ರಿ
|
ಒಂದು ವೇಳೆ ರಾಜ್ಯದಲ್ಲಿ ಸಮರ್ಥವಾದ ವಿರೋಧಪಕ್ಷ ಏನಾದರೂ ಇದ್ದಿದ್ದರೆ ಬಿಜೆಪಿ ಸರಕಾರವನ್ನು ಥಕಥೈ ಎಂದು ಕುಣಿಸುತ್ತಿತ್ತು ಅಥವಾ ರಾಜ್ಯದ ಜನತೆ ಇನ್ನೊಂದು ಚುನಾವಣಾ ಎದುರಿಸಬೇಕಾಗುತ್ತಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳು ಒಂದೋ ಏಎರಡೋ.. ಪಟ್ಟಿ ಮಾಡಿದಷ್ಟು ಬೆಳೆಯುತ್ತಲೇ ಇರುತ್ತದೆ.

ಆದರೆ ಪ್ರತಿ ಹಗರಣ ಬೆಳಕಿಗೆ ಬಂದಾಗಲೂ ಅದು ದೊಡ್ಡ ಮಟ್ಟದ ಚರ್ಚೆಯಾಗಿ ನೆನೆಗುದಿಗೆ ಬೀಳುತ್ತಿರುವುದೇ ವಿನಃ ಸರಕಾರಕ್ಕೆ ವಿರೋಧ ಪಕ್ಷಗಳಿಂದ ಯಾವುದೇ ತೊಂದರೆಯಾಗದೆ ಇರುವುದು ಸ್ಪಷ್ಟ. ಅದು ಯಡಿಯೂರಪ್ಪ, ಸದಾನಂದ ಗೌಡ ಅವರ ಮೇಲಿನ ಪ್ರೀತಿಯೋ ಅಥವಾ ತಾವೇ ಅಸಮರ್ಥರೋ. ಆಡಳಿತ ಪಕ್ಷದವರನ್ನು ಎದುರು ಹಾಕಿಕೊಂಡರೆ ತಮ್ಮ ಸ್ವಹಿತ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಗಳೂ ಇರಬಹುದು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಬದಲಾವಣೆ ಕಂಡಿದೆ. ಆದರೆ ಈ ಯಾವ ಬದಲಾವಣೆ ಕೂಡಾ ಬಿಜೆಪಿ ಸರಕಾರದ ಭವಿಷ್ಯಕ್ಕೆ ಕಗ್ಗಂಟಾಗಿಲ್ಲ. ಸಿದ್ದರಾಮಯ್ಯ ಒಬ್ಬ ಸಮರ್ಥ ನಾಯಕನಾಗಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಎಲ್ಲವೂ ಸರಿಯಿಲ್ಲ, ಹಾಗಾಗಿ ಎಷ್ಟು ಬೇಕು ಅಷ್ಟೇ ಪ್ರತಿಭಟನೆ ನಡೆಸಿ ಸುಮ್ನಾಗಿ ಬಿಡ್ತಾ ಇದ್ದಾರೆ ನಮ್ಮ ಸಿದ್ದಣ್ಣ.

ಒಂದು ವೇಳೆ ಕುಮಾರಸ್ವಾಮಿ ವಿರೋಧಪಕ್ಷದ ನಾಯಕನಾಗಿದ್ದರೆ ಬಿಜೆಪಿ ಪಾಲಿಗೆ ಅವರು ಮುಳ್ಲಾಗುವುದಂತೂ ಖಂಡಿತವಾಗುತ್ತಿತ್ತು. ಯಾಕೆಂದರೆ ಬಿಜೆಪಿ ಸರಕಾರದ ಹಗರಣಗಳು ಇಂದು ಈ ಮಟ್ಟಿಗೆ ಬಯಲಾಗಲು ಕಾರಣ ಕುಮಾರಸ್ವಾಮಿ ಎಂದಾದದರೆ ಅದು ತಪ್ಪಾಗಲಾರದು. ತನ್ನ ಮೇಲೆ ಏನೇ ಆಪಾದನೆಗಳಿದ್ದರೂ ಅದನ್ನು ಸಮರ್ಥವಾಗಿ ಎದುರಿಸಬಲ್ಲ ಸಂಘಟನಾ ಚತುರ.

ಮಂಗಳವಾರದ (ಫೆ 7) ಘಟನೆ ಯಿಂದ ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ, ಜನರಿಗೆ ಈಗಾಗಲೇ ಬಿಜೆಪಿ ಬಗ್ಗೆ ವಾಕರಿಕೆ ಬರುತ್ತಿದೆ ಅಂಥದರಲ್ಲಿ ಈ ಘಟನೆಯಂತೂ ಪಕ್ಷದ ಇಮೇಜ್ ಅನ್ನು ಮತ್ತಷ್ಟು ನಗೆಪಟಾಲಿಗೆ ಗುರಿ ಮಾಡಿದ್ದಂತೂ ನಿಜ.

ತಮ್ಮ ಸ್ವಕ್ಷೇತ್ರದ ಜನತೆ ನಡೆದ ಘಟನೆ ನೋಡಬಾರದೆಂದು ಕರೆಂಟ್, ಪೇಪರ್ ಬಂದ್ ಮಾಡುವ.. ಇಂತಹ ಬಿಜೆಪಿ ರಾಜಕೀಯ ನಾಯಕನನ್ನು ಕಂಡರೆ ಆರ್ ಎಸ್ ಎಸ್ ಶಿಸ್ತಿನ, ವಾಜಪೇಯಿ, ಆಡ್ವಾಣಿ ಕಟ್ಟಿ ಬೆಳೆಸಿದ ಬಿಜೆಪಿ ಇದೇನಾ ಅನಿಸುವುದಿಲ್ಲವೇ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State BJP government ministers including former CM BSY involved in so many cases, but Oppisition party not strong enough in the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more