ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಧಾರ್ಮಿಕ ಸಂಸ್ಥೆಗಳೂ ಮಾಹಿತಿ ಹಕ್ಕು ವ್ಯಾಪ್ತಿಗೆ ಬರಲಿ

By ಐ. ಪ್ರಭಾಕರ ಅಮ್ಮನ್ನ, ಉಡುಪಿ
|
Google Oneindia Kannada News

religious-bodies-under-right-to-information-perview
ಮಾಹಿತಿ ಹಕ್ಕು ಕಾಯಿದೆಯು ಸಾರ್ವಜನಿಕರಿಗೆ ನಿಜಕ್ಕೂ ದೊಡ್ಡ ಶಕ್ತಿಯನ್ನೇ ತುಂಬಿದೆ. ರಾಜಕಾರಣಿಗಳು, ಅಧಿಕಾರವರ್ಗ, ಅವರ ಕಾರ್ಯಭಾರ ಕುರಿತು ಪಾರದರ್ಶಕತೆಯ ವಿಚಾರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಆಗುತ್ತಿದೆ.

ಇಂದು ಮಾಹಿತಿ ಹಕ್ಕು ಕಾನೂನು ಸಾಮಾನ್ಯ ಪ್ರಜೆಗಳ ಕೈಯಲ್ಲಿ ಜನಹಿತ ಆಯುಧವೆಂದೇ ಕರೆಯಬಹುದು. ಆಡಳಿತ ವರ್ಗದ ನಿರ್ಣಯಗಳೆಲ್ಲವೂ ಇಂದು ಸಾಮಾನ್ಯ ಪ್ರಜೆಗಳಿಗೂ ದೊರೆಯುವಂತಾಗಿ ಪ್ರತಿಯೊಂದು ನಿರ್ಣಯದ ಸಾಧಕ-ಬಾಧಕಗಳು 'ಜನಸಾಮಾನ್ಯನ ನ್ಯಾಯಾಲಯ'ದಲ್ಲಿ ಚರ್ಚೆಗೆ ಒಳಗಾಗುತ್ತಿದೆ.

ಹಾಗೆ ಆಡಳಿತದಲ್ಲಿ ಸುಧಾರಣೆ ಅಭಿವೃದ್ಧಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಹಾಯವಾಗುತ್ತದೆ. ಇದೇ ರೀತಿ ಸಾಮಾಜಿಕ ವಲಯದಲ್ಲಿ ನಿರತವಾಗಿರುವ ಇತರ ಕಾರ್ಯ ಕ್ಷೇತ್ರಗಳಿಗೂ ಮಾಹಿತಿ ಹಕ್ಕು ಕಾಯ್ದೆಯನ್ನು ವಿಸ್ತರಿಸಿದರೆ ಆಡಳಿತದಲ್ಲಿ ಇನ್ನಷ್ಟು ಸುಧಾರಣೆ, ಪಾರದರ್ಶಕತೆಗೆ ಅವಕಾಶವಾಗುತ್ತದೆ.

ಧಾರ್ಮಿಕ ಸಂಸ್ಥೆಗಳ ಅಧೀನದಲ್ಲಿರುವ ವಿವಿಧ ವಿದ್ಯಾ ಸಂಸ್ಥೆಗಳು, ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನೂ ಮಾಹಿತಿ ಹಕ್ಕು ಕಾಯ್ದೆಗೆ ಒಳಪಡಿಸಬೇಕು.

ಇದು ಸಮಾಜದ ಆರೋಗ್ಯದ ದೃಷ್ಟಿಯಿಂದ ಇಂದು ಅತ್ಯಂತ ತುರ್ತಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಕ್ರಮ ಕೈಗೊಳ್ಳುವುದು ಸಮಯೋಚಿತವಾಗಿದೆ.

English summary
I. Prabhakara Ammanna from Udupi has demanded the Central Government to bring all educational institutions run by various religious bodies amd matts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X