ಮಾಜಿ ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್ ಖಚ್ಚು ಯಾರ ತಲೆಗೆ?

ತಮ್ಮ 38 ತಿಂಗಳಿನ ಅಧಿಕಾರಾವಧಿಯಲ್ಲಿ, ಯಡಿಯೂರಪ್ಪನವರು (ಪ್ರತಿ ತಿಂಗಳು ಸರಾಸರಿ 30 ರಿಂದ 40 ಲಕ್ಷ ಖರ್ಚು ಆಗಿದೆಯಂತೆ!), ಸುಮಾರು 15 ಕೋಟಿ ಆಗಿದೆ! ಅನಿವಾರ್ಯ ಇರಲಿ ಇಲ್ಲದಿರಲಿ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿದ್ದಾರೆ!
ಹಾವೇರಿಯಲ್ಲಿ ಗೋಲೀಬಾರ್ ಆದಾಗ ಅಲ್ಲಿಗೆ ಹೋಗಲಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನ ತತ್ತರಿಸಿದಾಗಲೂ ಹೆಲಿಕಾಪ್ಟರ್ ಬಳಸಿಲ್ಲ! ಹೆಲಿಕಾಪ್ಟರ್‌ನಲ್ಲಿ ಮಠ, ಮಂದಿರ ಸುತ್ತಿದ್ದೇ ಜಾಸ್ತಿ!
ಸದ್ಯದ ಮುಖ್ಯಮಂತ್ರಿ ಸದಾನಂದ ಗೌಡರು ಹೆಲಿಕಾಪ್ಟರ್ ಬಳಸದಿದ್ದರೂ, ಡಿಸೆಂಬರ್ ಅಂತ್ಯದವರೆಗೆ, ಆಗಿರುವ ಕರಾರಿನ ಮೇರೆಗೆ, ತಿಂಗಳಿಗೆ, ಹತ್ತು ಲಕ್ಷ ಬಾಡಿಗೆ ಭರಿಸಲೇಬೇಕು! ಮುಖ್ಯಮಂತ್ರಿಯನ್ನೂ ಸಹ ಸಾಮಾನ್ಯ ಪ್ರಜೆಯೆಂದೇ ಪರಿಗಣಿಸುವ ನಮ್ಮ ಸಂವಿಧಾನ, ಎಲ್ಲೋ ಎಡವಿದೆ ಅನಿಸುತ್ತದೆ!
ಮುಖ್ಯಮಂತ್ರಿಯಾದವರು, ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರದ ಹಣವನ್ನು ಹೀಗೆ ದುಂದು ವೆಚ್ಚ ಮಾಡಲು ಅವಕಾಶ ಮಾಡಿಕೊಟ್ಟದ್ದು ಯಾರ ತಪ್ಪು?! ಕಾಯಲು ಬಿಟ್ಟ ಆನೆಯು, ಇಡೀ ತೋಟವನ್ನು ತಿಂದು ಹಾಳುಮಾಡುವುದು ಸಹಜ! ಮುಖ್ಯಮಂತ್ರಿಯ ಅಧಿಕಾರಕ್ಕೆ ಅಂಕುಶ ಅಗತ್ಯ.












Click it and Unblock the Notifications