ಬಳ್ಳಾರಿಯಿಂದಲೇ ರಥಯಾತ್ರೆ ಆರಂಭವಾಗಲಿ ಅಡ್ವಾಣಿ

advani-yatra-should-begin-from-bellary
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿಯವರ ಭ್ರಷ್ಟಾಚಾರದ ವಿರುದ್ಧ ಮತ್ತೊಂದು ರಥಯಾತ್ರೆಯನ್ನು ನಡೆಸಲು ಘೋಷಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.

ಆದರೆ ಈ ಹೋರಾಟ ಕೇವಲ ಯು.ಪಿ.ಎ ವಿರುದ್ಧ ಮಾತ್ರವೇ ಆಗಬಾರದು. ಈ ಹೋರಾಟ ಮೊದಲು ಅವರದೇ ಪಕ್ಷದ ಭ್ರಷ್ಟರ ವಿರುದ್ಧ, ಭ್ರಷ್ಟ ರಾಜ್ಯ ಸರಕಾರಗಳ ವಿರುದ್ಧ ಧ್ವನಿ ತೆಗೆಯುವ ದಿಟ್ಟತನದ ಯಾತ್ರೆಯಾಗಬೇಕು.

ಇಲ್ಲದಿದ್ದರೆ ಈ ಹಿಂದೆ ರಾಜಕೀಯ ಉದ್ದೇಶಗಳಿಗಾಗಿ ಹಲವಾರು ಯಾತ್ರೆಗಳನ್ನು ನಡೆಸಿ ಇಂದಿಗೂ ಸಹ ಆ ಯಾತ್ರೆಗಳ ಫಲವಾಗಿ ದೇಶ ಅನುಭವಿಸುತ್ತಿರುವ ಅನೇಕ ಆತಂಕದ ಕ್ಷಣಗಳು ಮುಂದುವರಿಯುವಂತಹ ಎಲ್ಲಾ ಸಾಧ್ಯತೆಗಳಿರುತ್ತದೆ. ಬಿಜೆಪಿಯ ಅಧ್ಯಕ್ಷರಾದ ನಿತಿನ್ ಗಡ್ಕರಿಯವರು ಭ್ರಷ್ಟರ ವಿರುದ್ಧ ಧ್ವನಿ ತೆಗೆಯುವುದು ಎಂದರೆ ಯುಪಿಎ ವಿರುದ್ಧ ಮಾತ್ರ.

ಅವರ ಪಕ್ಷದ ಭ್ರಷ್ಟರು ನೀಡುವ ಸನ್ಮಾನ ಸ್ವೀಕರಿಸಿ ಸಂತೃಪ್ತ ಭಾವದಿಂದ ಹೊಗಳಿಕೆಯ ಮಾತುಗಳನ್ನಾಡುತ್ತಾರೆ. ಅದ್ವಾನಿಯವರ ಧ್ವನಿ ಮೊದಲು ಇವರ ವಿರುದ್ಧ ಇರಬೇಕಾಗುತ್ತದೆ.

ಕರ್ನಾಟಕದಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ತುಮಕೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಆಗಿದೆ ಎಂದು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ಕೇವಲ ಆರೋಪಕ್ಕೆ ಸೀಮಿತವಾಗದೆ ಮೊಕದ್ದಮೆಗಳನ್ನು ದಾಖಲಿಸಿ ಬಂಧನದ ಪ್ರಕರಣಗಳು ನಡೆದಿರುವಾಗ ಅಡ್ವಾಣಿಯವರ ಹೋರಾಟದ ಧ್ವನಿ ಇದರ ವಿರುದ್ಧ ಇರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+