ಭವಿಷ್ಯ ಹೇಳಿ ಗೊತ್ತಿಲ್ಲ, ಸರ್ಕಾರ ಉರುಳಿಸೋಲ್ಲ: ಬಿಎಸ್ ವೈ

ಭವಿಷ್ಯದ ಬಗ್ಗೆ : ಬಳ್ಳಾರಿ ಗೆಲ್ಲುವ ಮೂಲಕ ಜನರ ಮನಸ್ಸಿನಲ್ಲಿ ವಿಪಕ್ಷಗಳು ಬಿತ್ತಿರುವ ವಿಷಬೀಜವನ್ನು ಕಿತ್ತಾಕುವುದು ನಮ್ಮ ಮೊದಲ ಆದ್ಯತೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸುವುದು. ಪಕ್ಷದ ಬಲವರ್ಧನೆ ಇದೇ ನನ್ನ ಮುಂದಿನ ಯೋಜನೆ.
ಸೂಪರ್ ಸಿಎಂ ಮಾಧ್ಯಮದ ಸೃಷ್ಟಿ. ಸದಾನಂದ ಗೌಡರ ಅವರನ್ನು ಅವರ ಕ್ಯಾಬಿನೆಟ್ ಅನ್ನು ಕಂಟ್ರೋಲ್ ಮಾಡ್ತಾ ಇಲ್ಲ ಎಂದರು. 150 ಅಸೆಂಬ್ಲಿ ಸೀಟು, 22 ಲೋಕಸಭೆ ಸೀಟು ಗೆಲ್ಲುವುದು ಎಲ್ಲವೂ ಮೊನ್ನೆ ಮೊನ್ನೆ ದಿನಪತ್ರಿಕೆಗೆ ನೀಡಿದ ಸಂದರ್ಶನದ ಪ್ರತಿ ಓದುತ್ತಿರುವಂತೆ ಎನಿಸಿತು.
[ಸುವರ್ಣವಾಹಿನಿ ಸಂದರ್ಶನದ ವಿಡಿಯೋ ನೋಡಿ: ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6]
ಜೈಲಲ್ಲಿ ಅತ್ಯಂತ ಶಾಂತಿ ರೀತಿಯಲ್ಲಿ ಕಳೆದೆ. ಏನೋ ಶನಿಕಾಟ ಎನ್ನುತ್ತಾರಲ್ಲ ಆ ರೀತಿ ಎಲ್ಲರಿಗೂ ಕಷ್ಟಕಾಲ ಬರುತ್ತೆ. ಹಳೆ ದಿನಗಳನ್ನು ಮೆಲಕು ಹಾಕಿಕೊಂಡೆ. ನನ್ನ ಕೊರತೆಗಳು, ನಂಬಿದವರೇ ಹೇಗೆ ಕೈ ಕೊಟ್ರು ಎಂಬುದರ ಬಗ್ಗೆ ಎರಡು ಡೈರಿಗಳಾಗುವಷ್ಟು ಪ್ರತಿ ಸಿದ್ಧವಾಗಿದೆ.
ಜೈಲಿನ ಸಿಬ್ಬಂದಿ ನೀಡಿದ ಸನ್ಮಾನ ಮನಸ್ಸಿಗೆ ತಟ್ಟಿತು. ಜೈಲಿನಿಂದ ಹೊರ ಬಂದ ನಂತರ ಜಯಲಲಿತಾ ರೀತಿಯಲ್ಲಿ ಮತ್ತೆ ಸಿಎಂ ಪಟ್ಟದಲ್ಲಿ ಕೂಡಲು ಯಾಕೆ ಯತ್ನಿಸುತ್ತಿಲ್ಲವೇ ಎಂದರೆ...
ನನಗೆ ಭವಿಷ್ಯ ಹೇಳಿ ಗೊತ್ತಿಲ್ಲ. ಸದಾನಂದ ಗೌಡ ಸರ್ಕಾರ ಎಷ್ಟು ಕಾಲ ಗೊತ್ತಿಲ್ಲ. ನನ್ನ ಬೆಂಬಲಿಗರು ಸರ್ಕಾರ ಉರುಳಿಸುವುದಿಲ್ಲ ಎಂದರು.
ಆದರೆ, ಇದು(ಬಳ್ಳಾರಿ ಉಪ ಚುನಾವಣೆ) ಬಿಜೆಪಿ ಸರ್ಕಾರದ ಕೊನೆ ಚುನಾವಣೆಯೇ ಎಂದು ಪ್ರಶ್ನಿಸಿದರೆ, ಗೊತ್ತಿಲ್ಲ ಎಂದು ಮೌನವಾದರೂ ಆದರೆ, ನಂತರ ಯಾವುದೇ ಚುನಾವಣೆ ಬಂದರೂ ನಾನು ಪಕ್ಷದ ಪರವಾಗಿ ನಿಲ್ಲುತ್ತೇನೆ. ಅಭ್ಯರ್ಥಿ ನನ್ನ ಬೆನ್ನಿಗೆ ಚೂರಿ ಹಾಕಿದವನಾದರೂ ಅವನ ಪರ ಪ್ರಚಾರ ಕೈ ಗೊಳ್ಳುತ್ತೇನೆ ಎಂದರು.
ಒಟ್ಟಿನಲ್ಲಿ ಯಡಿಯೂರಪ್ಪ ಬದಲಾಗಿದ್ದಾರೆ, ಅವರ ಸುತ್ತಮುತ್ತಲಿನವರು ಇದೇ ರೀತಿ ಬದಲಾದರೆ ರಾಜ್ಯಕ್ಕೆ ಒಳಿತು. ಇಲ್ಲದಿದ್ದರೆ ಅಂಕಿ ಅಂಶದಲ್ಲಿ ಮಾತ್ರ ಕರ್ನಾಟಕ ದೇಶದಲ್ಲಿ ನಂ.2 ಆಗಿ ಮುಂದುವರೆಯಲಿದೆ ಅಷ್ಟೆ.












Click it and Unblock the Notifications