ವಿದ್ಯುತ್ ಕೊರತೆ : ನಾಟ್ಕ ಸಾಕು ಶೋಭಾ ಮೇಡಂ

Shobha Karandlaje
ರಾಜ್ಯದಲ್ಲಿ ಮಳೆ ಕೈಕೊಟ್ಟಿದೆ. ಹಾಗೆಯೇ ವಿದ್ಯುತ್ ತೀವ್ರ ಅಭಾವವೂ ತಲೆದೋರಿದೆ. ವಿದ್ಯುತ್ ಲೋಡ್‌ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಇದು ಎಲ್ಲೆಡೆ ಇರುವ ಸಮಸ್ಯೆ ಎಂದು ಮಾನ್ಯ ಇಂಧನ ಸಚಿವರು ಅಸಹಾಯಕತೆ ತೋರಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ.

ತೆಲಂಗಾಣ ಬಂದ್ ನಿಂದ ಕಲ್ಲಿದ್ದಲು ಸಿಕ್ಕಿಲ್ಲ ಎಂದು ಗೋಳಾಡಿದ್ದಾರೆ. ಅವರ ಸಂಕಟಕ್ಕೆ ನಮ್ಮ ಸಹಾನುಭೂತಿ ಇದೆ. ಆದರೆ, ತೆಲಂಗಾಣ ಸಮಸ್ಯೆ ತಿಳಿಯಾಗಿ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲ್ಲು ಸರಬರಾಜು ಆರಂಭವಾದರೂ ಈ ಬಗ್ಗೆ ಸಚಿವೆ ಶೋಭಾ ಆಗಲಿ, ಕೆಪಿಟಿಸಿಎಲ್ ಅಧಿಕಾರಿಗಳಾಗಲಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿಯಾಗಲಿ, ಲೋಡ್ ಶೆಡ್ಡಿಂಗ್ ಅವಧಿ ತಗ್ಗಿಸುವ ಮಾತಾಡಿಲ್ಲ ಏಕೆ.

ನಮ್ಮ ಕಣ್ಣಿಗೆ ಸುಣ್ಣ ಏಕೆ?: ಜನರ ಸಮಸ್ಯೆಗಿಂತ ಈವರೆಗೆ ಯಡಿಯೂರಪ್ಪ ಪ್ರಸಂಗವೇ ಹೆಚ್ಚಾಯಿತೇ. ಗ್ರಾಮಾಂತರ ಪ್ರದೇಶಗಳಿಗೆ 9 ಗಂಟೆಗೆ ವಿದ್ಯುತ್ ಇಲ್ಲ . ಇದರಲ್ಲಿ ಕೇವಲ ಮೂರು ಗಂಟೆ ತ್ರಿಪೇಸ್‌ನಲ್ಲಿ. ಅದು ಸಿಗುವುದು ಅಪರ ವೇಳೆಯಲ್ಲಿ ಮಾತ್ರ.

ನಗರ ಪ್ರದೇಶಗಳಿಗೆ ಕಡಿಮೆ ಅವಧಿ ಲೋಡ್ ಶೆಡ್ಡಿಂಗ್. ಇದು ತಾರತಮ್ಯ ನೀತಿಯಲ್ಲವೇ. ಈ ನಡುವೆ ರಾಜ್ಯದಲ್ಲಿನ ಸುಮಾರು 20 ಲಕ್ಷ ಕೃಷಿ ಪಂಪ್ ಸೆಟ್‌ಗಳಿದ್ದು ವಿದ್ಯುತ್ ಅs ವದಿಂದ ಪಂಪ್‌ಸೆಟ್ ಆಧಾರಿತ ನೀರಾವರಿಯೂ ಕುಸಿತವಾಗಿದೆ ಎಂದು ಹೇಳಲಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ಮೊದಲೇ ವಿದ್ಯುತ್ ಸರಬರಾಜು ಸರಿಯಿಲ್ಲ . ಕರೆಂಟ್ ಬರುವುದು, ಹೋಗುವುದು ನಡೆದೇ ಇರುತ್ತದೆ. ನಗರ, ಪಟ್ಟಣಗಳಿಗೆ ನೀಡುವ ಆದ್ಯತೆಯನ್ನು ಗ್ರಾಮೀಣ ಪ್ರದೇಶಗಳಿಗೂ ನೀಡಬೇಕಲ್ಲವೇ ?

ಪದೇಪದೇ ವಿದ್ಯುಚ್ಛಕ್ತಿ ಏರಿಕೆ, ವಿದ್ಯುತ್ ಕಡಿತ, ಲೋಡ್ ಶೆಡ್ಡಿಂಗ್, ತಾಂತ್ರಿಕ ದೋಷಗಳು ಇವು ಮಾಮೂಲು ವಿಚಾರವಾಗಿ ಗ್ರಾಹಕರು ತೊಂದರೆಪಡುವುದು ತಪ್ಪುತ್ತಿಲ್ಲ. ಸರಕಾರ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲದಿರುವುದೇ ಈ ಸಮಸ್ಯೆಗಳಿಗೆ ಕಾರಣ.

ಜಲವಿದ್ಯುತ್ ಉತ್ಪಾದನಾ ಘಟಕಗಳ ಸುಧಾರಣೆಯಾಗಬೇಕು. ಗ್ರಾಮೀಣ ಪ್ರದೇಶಗಳಿಗೆ ನಿಯಮಿತದಂತೆ ವಿದ್ಯುತ್ ಪೂರೈಕೆ ಮಾಡುವ ಕಾಳಜಿಯನ್ನು ಹೊಂದಿರಬೇಕು. ಪರಿಸರಕ್ಕೆ ಹಾನಿಯಾಗದಂತೆ ವಿದ್ಯುತ್ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಬೇಕು.

ವಿದ್ಯುತ್ ವಿಚಾರದಲ್ಲಿ ಸರಕಾರ ಮುಂದಾಲೋಚನೆ ಮಾಡದಿರುವುದೇ ಈ ರಾದ್ಧಾಂತಗಳಿಗೆ ಕಾರಣ. ವಿದ್ಯುತ್ ಉತ್ಪಾದನೆ ಹಾಗೂ ಬೇಡಿಕೆ ಮಟ್ಟವನ್ನು
ಅರಿತು ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಯ್ಮೋನ್ಮುಖವಾಗಬೇಕು.

ಸದ್ಯದ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದು, ರಾಜ್ಯದ ಹಿತ ದೃಷ್ಟಿಯಿಂದ ಸೂಕ್ತ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ನಿಲ್ಲಲೇಬಾರದು. ಇಲ್ಲದಿದ್ದರೆ ಸಿಟಿ ಹುಡ್ಗರ ಲ್ಯಾಪ್ ಟಾಪ್ ಗೆ ಕೊಡೊ ಕರೆಂಟ್ ಕಿತ್ತು ನಮ್ಮ ಪಂಪ್ ಸೆಟ್ ಗೆ ಕೊಡಿ ನಾವು ಬೆಳೆದ ಬೆಳೆ ನಿಮ್ಮ ಹೊಟ್ಟೆಗೆ ಹಾಕ್ತೀವಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+