ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪವಾಸ, ಯಾತ್ರೆ ಪ್ರದರ್ಶನ ಕಲೆ ಮೋದಿಗೆ ಬೇಕಿಲ್ಲ

By * ಅವಿನಾಶ್, ಮಂಗಳೂರು
|
Google Oneindia Kannada News

Narendra Modi
ನರೇಂದ್ರ ಮೋದಿ ಈಗ ಪ್ರದಾನ ಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬಂತೆ ಮಾಧ್ಯಮಗಳು ಬಿಂಬಿಸುತ್ತಿದೆ.

ಹಿಂದೂ ಮೂಲಭೂತವಾದಿಗಳಾದ ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಮುಂತಾದ ಹಿಂದೂ ಪರ ಸಂಘಟನೆಗಳ ನೆಲೆಗಟ್ಟಿನ ಮೇಲೆ ನಿಂತಿರುವ ಮೋದಿ ಸದ್ಯಕ್ಕೆ ಸದ್ಭಾವನೆ ಉಪವಾಸ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದಾರೆ.

ಆದರೆ, ಗುಜರಾತ್ ಮುಖ್ಯಮಂತ್ರಿಯಾದ ನಂತರ ಅಲ್ಲಿನ ಅಲ್ಪಸಂಖ್ಯಾತ ಮುಸಲ್ಮಾನರು ಒಂದಲ್ಲ ಒಂದು ರೀತಿಯಲ್ಲಿ ಚಿತ್ರಹಿಂಸೆಗೊಳಗಾಗಿದ್ದಾರೆ. 2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮುಸಲ್ಮಾನರಿಗೆ ಒಂದು ರೀತಿಯ ಸಿಂಹ ಸ್ವಪ್ನವಾಗಿ ಕಾಡುತ್ತಿದೆ.

ಮುಸಲ್ಮಾನರನ್ನು ದ್ವೇಷಿಸಿಕೊಂಡೇ ಬಂದ ನರೇಂದ್ರ ಮೋದಿ ಇದ್ದಕ್ಕಿದ್ದ ಹಾಗೆ ಉಪವಾಸ ಕೂತು 'ಅಲ್ಲಾ - ಹೋ ಅಕ್ಬರ್' ಎಂಬ ಘೋಷಣೆ ಕೂಗುತ್ತಾ ಮುಸಲ್ಮಾರನ್ನು ಒಲಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅನಗತ್ಯ.

ಏಕೆಂದರೆ ಇತ್ತೀಚೆಗೆ ಮುಸಲ್ಮಾನರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕಷ್ಟ. ನರೇಂದ್ರ ಮೋದಿ ಮುಸಲ್ಮಾನರನ್ನು ಓಲೈಸದೆ ಪ್ರಧಾನಿ ಹುದ್ದೆಗೆ ಏರುವುದು ಕಷ್ಟವಾಗುತ್ತದೆ.

ಮೋದಿ ಅವರು ಕೇವಲ ಮತಕ್ಕಾಗಿ ಮುಸಲ್ಮಾನರನ್ನು ಓಲೈಸದಿರಲಿ. ಈಗ ಅಲ್ಪಸಂಖ್ಯಾತರಿಗೆ ನೀಡಿರುವ ಸೌಲಭ್ಯಗಳನ್ನು ಇನ್ನಷ್ಟೂ ಹೆಚ್ಚಿಸಿ, ಜನರ ವಿಶ್ವಾಸ ಗಳಿಸಲಿ.

ಉಪವಾಸ ಕೂತಿದ್ದ ಸಮಯದಲ್ಲಿ ಸೌಹಾರ್ದತೆಯ ಸಂಕೇತವಾಗಿ ಮುಸ್ಲಿಮ್ ಮುಖಂಡರೊಬ್ಬರು ಟೋಪಿ ಹಾಕಲು ಬಂದಾಗ ಮೋದಿ ಏಕೆ ಹಾಕಿಸಿಕೊಳ್ಳಲಿಲ್ಲ? ಎಂದು ಅನೇಕ ಮಾಧ್ಯಮಗಳು ಪ್ರಶ್ನಿಸಿದೆ.

ಆದರೆ, ಸರಿಯಾದ ಸಮರ್ಥನೆ ನೀಡಿಲ್ಲ. ಅಭಿವೃದ್ಧಿ ಪಥ ಬಿಟ್ಟು ಪ್ರದರ್ಶನ ಕಾರ್ಯಕ್ರಮಗಳಿಗೆ ಇಳಿದರೆ ಹೀಗೆ ಆಗುವುದು.

ಜನರು ಮೋದಿಯನ್ನು ಮೆಚ್ಚಿರುವುದು ಅವರು ಕೈಗೊಂಡಿರುವ ಯೋಜನೆಗಳಿಂದ ಮಾತ್ರ. ಉಪವಾಸ, ರಥಯಾತ್ರೆ ಮುಂತಾದ ಪ್ರದರ್ಶನ ಕಲೆ ನೀಡಲು ಬಿಜೆಪಿಯಲ್ಲಿ ಬೇರೆಯದೆ ಆದ ನಾಯಕರಿದ್ದಾರೆ.

ಆರ್‌ಎಸ್‌ಎಸ್‌, ಹಿಂದೂ ಪರ ಸಂಘಟನೆಗಳ ಕೈಗೊಂಬೆಯಾಗದೆ ನರೇಂದ್ರ ಮೋದಿಯವರು ಭವಿಷ್ಯದಲ್ಲಿ ಜನಪರ ಯೋಜನೆಗಳನ್ನು ವಿಸ್ತರಿಸುತ್ತಾ ಕೋಮು ಸೌಹಾರ್ದತೆಯ ಹರಿಕಾರ ನಾಗಲಿ ಎಂಬುದು ನಮ್ಮೆಲ್ಲರ ಆಶಯ.

English summary
Can Gujarat CM Narendra Modi stick to his Sadhbhavana philosophy and maintain communal harmony. Modi is known for his development schemes not exhibition programs like fasting, Rath Yatra. He must continue his good work and win hearts of many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X