ಶೋಭಾ ಕರಂದ್ಲಾಜೆಯನ್ನು ಮುಖ್ಯಮಂತ್ರಿ ಮಾಡಿ

ಮಹಿಳಾ ರಾಜ್ಯಪಾಲರು ಬಂದರೂ ಮಹಿಳೆಯರಿಗೆ ಮುಖ್ಯಮಂತ್ರಿ ಪದವಿ ದಕ್ಕಲಿಲ್ಲ. ಪುರುಷ ಪ್ರಧಾನವಾದ ಈ ದೇಶದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಲಭಿಸಬೇಕಾದರೆ ಅವರಲ್ಲಿರಬೇಕಾದ ಮುಖ್ಯ ಅರ್ಹತೆ ಎಂದರೆ ದಿಟ್ಟತನ'. ಈ ದೃಷ್ಟಿಯಲ್ಲಿ ಇಂದಿರಾಗಾಂಧಿ, ಪ್ರತಿಭಾ ಪಾಟೀಲ್, ಜಯಲಿಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ದೇಶದ ಮಂಚೂಣಿ ಸಾಲಿನಲ್ಲಿ ನಿಲ್ಲುವ ಮಹಿಳೆಯರಾಗಿದ್ದಾರೆ,
ನಮ್ಮ ರಾಜ್ಯದಲ್ಲಿ ನಾಗರತ್ನ, ಸರೋಜಿನಿ ಮಹಿಷಿ, ಮಾರ್ಗರೇಟ್ ಆಳ್ವ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಹಿಳೆಯರ ಪಟ್ಟಿಯಲ್ಲಿ ಸೇರುವ ಅರ್ಹತೆ ಹೊಂದಿರುವ ಮಹಿಳೆಯರೆಂದರೆ ಶೋಭಾ ಕರಂದ್ಲಾಜೆ. ಮುಖ್ಯಮಂತ್ರಿ ಪದವಿಗೇರುವ ಅರ್ಹತೆ ಪಡೆದಿರುವ ಶೋಭಾ ಅವರಿಗೆ ಪುರುಷ ಪಟಾಲಂನ್ನು ನಿಭಾಯಿಸಲು ಹೈಕಮಾಂಡ್ ಅವಕಾಶ ಮಾಡಿಕೊಡಬೇಕು. ಆಗಲಾದರೂ ಕರ್ನಾಟಕ ರಾಜ್ಯದ ಜನತೆಗೆ ಮಹಿಳಾ ಮುಖ್ಯಮಂತ್ರಿಯ ಆಡಳಿತ ನೋಡುವ ಅವಕಾಶ ಸಿಗಬಹುದೇನೋ ?
ಶೋಭಾ ಅವರು ಮುಖ್ಯಮಂತ್ರಿ ಆದರೆ, ಇರುವಷ್ಟು ಕಾಲ ಪಕ್ಷಕ್ಕೂ ಹಿತ, ನಾಡಿಗೂ ಹಿತ. ಯಾವುದೇ ಕಷ್ಟಕರವಾದ ಯೋಜನೆಯನ್ನು ಪೂರ್ಣಗೊಳಿಸುವ ಛಾತಿ ಶೋಭಾ ಅವರಲ್ಲಿದೆ. ಕರಾವಳಿ, ಮಲೆನಾಡು ಜಿಲ್ಲೆಗಳ ಜನತೆಗೆ ಶೋಭಾ ಮುಖ್ಯಮಂತ್ರಿಯಾದರೆ ಒಂದಿಷ್ಟು ಒಳ್ಳೆ ದಿನಗಳನ್ನು ಕಾಣುವ ಸಾಧ್ಯತೆಯ ಕನಸು ಬೀಳುತ್ತಿದೆ.











Click it and Unblock the Notifications