ಬಿಕಿನಿ ಮೇಲೆ ಹಿಂದೂ ದೇವತೆ; ಛೀ...ಛೀ ...ಥೂ...ಥೂ
ಈ
ವಿದೇಶಿ ವಸ್ತ್ರ ವಿನ್ಯಾಸಕರ ಕಣ್ಣಿಗೆ ಹಿಂದೂ ದೇವಾನುದೇವತೆಗಳು ಅದು ಹೇಗೆ ಕಾಣುತ್ತವೋ ಏನೋ ಗೊತ್ತಿಲ್ಲ? ತಮ್ಮ ಮನಬಂದಂತೆ ಹಿಂದೂ ದೇವತೆಗಳನ್ನು ಬಳಸಿಕೊಳ್ಳುವ ಮೂಲಕ ಅಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಆಸ್ಟ್ರೇಲಿಯಾದ ವಸ್ತ್ರ ವಿನ್ಯಾಸಕಿಯೊಬ್ಬಳು ಸ್ವಿಮ್‌ಸೂಟ್‌ನಲ್ಲಿ ಹಿಂದು ದೇವತೆ ಲಕ್ಷ್ಮಿ ಚಿತ್ರವನ್ನು ಬಿಡಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. id="toptextpromo">ರೂಪದರ್ಶಿ
ತೊಟ್ಟಿರುವ ವಸ್ತ್ರಗಳ ಮುಂಭಾಗ, ಹಿಂಭಾಗದಲ್ಲೆಲ್ಲಾ ಲಕ್ಶ್ಮಿ ಚಿತ್ರಗಳನ್ನು ಈ ವಿನ್ಯಾಸಕಿ ಬಿಡಿಸಿರುವುದು ಹಿಂದೂಗಳ ಪಿತ್ತ ಕೆರಳಿಸಿದೆ. ಲಕ್ಷ್ಮಿ ಚಿತ್ರದ ಸ್ವಿಮ್‌ಸೂಟ್‌ನಲ್ಲಿ ರೂಪದರ್ಶಿ ಕ್ಯಾಟ್ ವಾಕ್ ಮಾಡುತ್ತಿರುವ ದೃಶ್ಯಗಳು ಈಗ ಎಲ್ಲೆಲ್ಲೂ ಹರಿದಾಡುತ್ತಿವೆ. ಒಂದು ಧರ್ಮದ ಭಾವನೆಗಳನ್ನು ಕೆರಳಿಸುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇಂತಹ ವಿನ್ಯಾಸಕಾರರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಹಿಂದೆ ಹಿಂದೂ ದೇವತೆಗಳಾದ ಶ್ರೀಕೃಷ್ಣ, ಗಣೇಶ ಹಾಗೂ ಓಂ ಸಂಕೇತಗಳನ್ನ್ನು ಇದೇ ರೀತಿ ಬಳಸಿಕೊಳ್ಳಲಾಗಿತ್ತು. ಹಿಂದು ದೇವಾನುದೇವತೆಗಳನ್ನು ಹೀಗೆ ಬಳಸಿಕೊಂಡರೆ ಸುಲಭವಾಗಿ ಪ್ರಚಾರ ಗಿಟ್ಟಿಸಬಹುದು ಎಂಬುದು ವಿದೇಶಿ ವಿನ್ಯಾಸಕರ ಲೆಕ್ಕಾಚಾರ. ಬಳಿಕ ಸಾರಿ ಕೇಳಿದರಾಯಿತು ಎಂಬ ಬೇಜವಾಬ್ದಾರಿ. ಇವರಿಗೆ ಬುದ್ಧಿ ಕಲಿಸುವವರು ಯಾರು?











Click it and Unblock the Notifications