ನಮ್ಮ ಮೆಟ್ರೋ ನಮ್ಮ ಅನುಕೂಲಕ್ಕಿರಲಿ

ಮೆಟ್ರೋ ರೈಲಿನ ಒಳಗೆ ಹಾಕಲಾಗುವ ಭದ್ರತಾ ಸೂಚನೆಗಳು, ಮಾರ್ಗಗಳ ಪಟ್ಟಿ, ಟಿಕೆಟ್, ಪಾಸು ಮತ್ತು ಉಳಿದೆಲ್ಲ ಮಾಹಿತಿ ಕನ್ನಡದಲ್ಲಿ ಲಭ್ಯವಾಗಬೇಕು. ಇದರಿಂದ ಮೆಟ್ರೋದಲ್ಲಿ ಪ್ರಯಾಣಿಸುವ ಬಹುಪಾಲು ಜನರಿಗೆ ಅನುಕೂಲವಾಗುತ್ತದೆ.
ಪ್ರಪಂಚದ ಪ್ರಗತಿ ಹೊಂದಿರುವ ದೇಶಗಳಾದ ಜರ್ಮನಿ, ಫ್ರಾನ್ಸ್, ಚೈನಾ, ಜಪಾನ್ ಮುಂತಾದ ದೇಶಗಳಲ್ಲಿ ಮೆಟ್ರೋ ರೈಲು ಕೆಲಸ ಮಾಡುವ ರೀತಿಯಲ್ಲೇ ನಮ್ಮ ಮೆಟ್ರೋ ಕನ್ನಡಕ್ಕೆ ಪ್ರಾಧಾನ್ಯತೆ ಕೊಡುವುದರಿಂದ ಮೆಟ್ರೊ ಕಾಮಗಾರಿಗೆ ಹಾಕಿರುವ ನಮ್ಮ ಕೋಟ್ಯಂತರ ರುಪಾಯಿ ತೆರಿಗೆ ಹಣದ ಸದ್ಬಳಕೆಯಾದಂತಾಗುತ್ತದೆ.
ರೈಲು ಚೀಟಿಗಳು ಹಾಗು ಮೆಟ್ರೋ ನಿಲ್ದಾಣಗಳಲ್ಲಿ ಮಾಡುವ ಘೋಷಣೆಗಳು ಕೂಡ ಕನ್ನಡದಲ್ಲಿದ್ದಲ್ಲಿ ಜನ ಸಾಮಾನ್ಯರಿಗೆ ಪ್ರಯೋಜನವಾಗುತ್ತದೆ. ಕನ್ನಡ ಬಾರದೆ ಇರುವ ಹೊರನಾಡಿನ ಅತಿಥಿಗಳು ಇದರಿಂದ ಕನ್ನಡ ಕಲಿಯಬೇಕಾದ ವಾತಾವರಣ ಸೃಷ್ಟಿಯಾಗುತ್ತದೆ. ಅವರು ಸಹಾ ಕನ್ನಡ ಕಲಿತು ಬಳಕೆ ಮಾಡುವುದರೆ ಒಳಿತು. ಕಡೆಯದಾಗಿ, ಮೆಟ್ರೋ ರೈಲಿನೊಳಗೆ ಹಾಗೂ ನಿಲ್ದಾಣದಲ್ಲಿ ಕನ್ನಡ ಹಾಡುಗಳು, ಕನ್ನಡ ಚಿತ್ರಗಳನ್ನ ಪ್ರಸಾರ ಮಾಡಿದ್ರೆ ಎಷ್ಟು ಚಂದ ಅಲ್ಲವೇ?











Click it and Unblock the Notifications