ಪೊಲೀಸರು ರಾಜಕೀಯ ಜೀತದಾಳುಗಳೇನಲ್ಲ

ಸಂಘಟನೆಯ ಹಕ್ಕು ಮತ್ತು ಸಂವಿಧಾನದ ಹಕ್ಕು ಮೊಟಕು ಮಾಡುತ್ತಾ ಇಲಾಖೆಯಲ್ಲಿ ಮಾತೆತ್ತಿದರೆ ಅಟೆನ್ಷನ್, ಷಟಪ್ ಮತ್ತು ಡೋಂಟ್ ಟಾಕ್ ಎಂಬ ಈ ಮೂರು ಕಟು ಶಬ್ದಕ್ಕೆ ಪೊಲೀಸರನ್ನು ಒಳಪಡಿಸಿ ತಮ್ಮ ಹಿಡಿತದಲ್ಲಿಟ್ಟುಕೊಂಡು ಅಮಾನವೀಯತೆಯಿಂದ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಪೊಲೀಸರು ಸದಾ ಜಿಗಿದ ಹಗ್ಗದ ಮೇಲೆ ನಡೆಯುವಂತಾಗಿದೆ.
ಅವರ ಕಠೋರ ಕರ್ತವ್ಯದ ಚಿಂತನೆಯನ್ನು ಸರ್ಕಾರ ಕಿಂಚಿತ್ತೂ ಯೋಚಿಸದೆ ಅವರ ಮೇಲೆ ಗೂಬೆಯಂತೆ ಕಣ್ಣಿಟ್ಟು ಇಂದಿಗೂ ಬೆದರಿಸುತ್ತಲೇ ಇದೆ. ಹೀಗಾಗಿ ಪೊಲೀಸರು ದೈಹಿಕ ಮತ್ತು ಮಾನಸಿಕ ಅಸ್ಪೃಶ್ಯತೆಯಿಂದ ನರಳುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಸಮಾನತೆಗಳಿಂದಲೂ ಇಲಾಖೆ ನರಳುತ್ತಿದೆ. ಪೊಲೀಸರ ಬಗ್ಗೆ ಪರಿಣಾಮಕಾರಿಯಾಗಿ ಶಾಸನ ಸಭೆಗಳಲ್ಲಿ ಯಾರೊಬ್ಬ ಮಂತ್ರಿಗಳಾಗಲಿ, ಶಾಸಕರಾಗಲಿ, ವಾದಗಳನ್ನು ಮಂಡಿಸುತ್ತಿಲ್ಲ. ಪೊಲೀಸರ ನೋವು, ಸಂಕಷ್ಟಗಳನ್ನು ಕೇಳುವವರಿಲ್ಲ.
ನಮ್ಮ ಸಮಾಜವೂ ಪೊಲೀಸರನ್ನು ಸದಾ ಸಂಶಯದಿಂದಲೇ ಕಾಣುತ್ತಿದೆ. ಪ್ರತಿಯೊಬ್ಬ ಪ್ರಜೆ ಹಾಗೂ ರಾಜಕಾರಣಿಯೂ ಪೊಲೀಸರಿಂದ ಸಹಾಯ ಪಡೆದು ಅವರನ್ನು ಹೊಗಳಿ ನಂತರ ತೆಗಳುತ್ತಾರೆ. ಈ ರೀತಿ ಹೊಗಳಿದವರು ಪೊಲೀಸರ ಜ್ವಲಂತ ಸಮಸ್ಯೆಗಳ ಬಗ್ಗೆ ಏಕೆ ಚಿಂತಿಸುತ್ತಿಲ್ಲ?
ಪೊಲೀಸರಿಗೆ ನಿರ್ದಿಷ್ಟವಾದ ಕೆಲಸದ ವೇಳೆಯಿಲ್ಲ. ದುಡಿತಕ್ಕೆ ಸಮಾನವಾದ ವೇತನವಾಗಲೀ, ಹಬ್ಬ-ಹರಿದಿನಗಳಲ್ಲಿ ದುಡಿಸಿಕೊಳ್ಳುವ ಕೆಲಸಕ್ಕೂ ವೇತನವನ್ನಾಗಲೀ ನೀಡುತ್ತಿಲ್ಲ. ಅವರ ಕುಟುಂಬದ ಲಾಲನೆ, ಪಾಲನೆ, ಆರೈಕೆಗಳ ಕಡೆಗೆ ಗಮನ ನೀಡದೆ ಕೋಮುಗಲಭೆಗಳಲ್ಲಿ ಮತ್ತು ಇತರೆ ಕಠೋರ ರಾಜಕೀಯ ಚಳವಳಿಗಳಲ್ಲಿ ಕರ್ತವ್ಯ ನಿರತರಾದ ಪೊಲೀಸರ ಊಟೋಪಚಾರಕ್ಕೂ ಅವಕಾಶ ನೀಡುತ್ತಿಲ್ಲ.
ಮತಾಂಧರು, ಮತಹೀನರೂ, ಪುಂಡುಪೋಕರಿಗಳು ಮತ್ತು ಪೊಲೀಸರನ್ನು ದೂರುವ ರಾಜಕಾರಣಿಗಳು, ಪೊಲೀಸರ ಕಠೋರ ಕರ್ತವ್ಯವನ್ನು ನೋಡಿ ಮರುಗದಿರುವುದು ನಾಚಿಕೆಗೇಡು ಪೊಲೀಸರು ಕಾನೂನಿನಡಿ ಸದಾ ಎಚ್ಚರ ವಹಿಸಿ ಕರ್ತವ್ಯ ಮಾಡಿದರೂ ಕಾನೂನು ಗಂಧವಿಲ್ಲದವರು ಪೊಲೀಸರನ್ನು ದೂಷಿಸುವುದು ಸರಿಯಲ್ಲ.
ಪೊಲೀಸ್ ಅಧಿಕಾರಿ ತನ್ನ ಸಮಯ ಪ್ರಜ್ಞೆಯಿಂದ ಅಹಿತಕರ ಘಟನೆ ಮತ್ತು ಕಾನೂನು ಸುವ್ಯವಸ್ಥೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಅಪರಾಧಿಯನ್ನು ಬಂಧಿಸುವುದಕ್ಕೆ ಹೊತ್ತು ಗೊತ್ತು ನಿಗದಿ ಪಡಿಸಿಲ್ಲ. ಅವರು ಎಲ್ಲಿಯಾದರೂ, ಯಾವಾಗಲಾದರೂ, ಹೋಗಿ ದಸ್ತಗಿರಿ ಮಾಡಬಹುದು.
ಇಂದು ಪೊಲೀಸರ ಕರ್ತವ್ಯದ ಬಗ್ಗೆ ಸಮಾಜವಾಗಲಿ, ರಾಜಕಾರಣಿಗಳಾಗಲಿ ಚಿಂತಿಸುತ್ತಿಲ್ಲ. ಇದರಿಂದ ನೂರಕ್ಕೆ ತೊಂಬತ್ತು ಮಂದಿ ತಮ್ಮ ನಿವೃತ್ತಿ ಹೊಂದುವುದಕ್ಕೆ ಮುಂಚೆಯೇ ಮರಣ ಹೊಂದುತ್ತಿದ್ದಾರೆ. ಈ ಇಲಾಖೆಯಲ್ಲಿ ದುಡಿಯುತ್ತಿರುವ ಬಹು ಮಂದಿ ಅಧಿಕಾರಿಗಳು ದೈಹಿಕ, ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಾ ಆರ್ಥಿಕ, ಸಾಂಸ್ಕೃತಿಕ ಅಸಮಾನತೆಗಳಿಂದ ಕೊರಗುತ್ತಿದ್ದಾರೆ.
ಗೂಂಡಾಗಳನ್ನು, ಸಮಾಜ ದ್ರೋಹಿಗಳನ್ನು, ದರೋಡೆಕೋರರನ್ನು, ಕಳ್ಳಕಾಕರನ್ನು, ಜಾಣ್ಮೆಯಿಂದ ಬಂಧಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿರುವಾಗ ಅವರನ್ನು ಸಮಾಜ ದಂಡಿಸುವುದು ಹಾಗೂ ದೂರುವುದು ಸರಿಯೇ?
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications