ಸೋನೆಬೆಲ್ಲದಂಥ ಮಿತ್ರರಿಗೆ ಮಾತ್ರ!
ಇಲ್ಲಿರುವ ಇಮೇಜ್‌ಗಳು ಯಾವುದರದ್ದು ಹೇಳ್ತೀರಾ? ಛೇ, ಪಾಪ ಸದಾ ಬಿಜಿಯಾಗಿರುವ ಪತ್ರಕರ್ತರಿಗೆ ನಾನು ಈ ರೀತಿ ತೊಂದರೆ ಕೊಡುವುದು ಸರಿಯಲ್ಲ. ಶೀರ್ಷಿಕೆಗಳನ್ನು ಓದಿ ಬಿಡಿ ಸಾಕು!
ಇಲ್ಲಿ ನೀವು ನೋಡುತ್ತಿರುವ ಬೆಲ್ಲದಷ್ಟು ಹೊಸತಾಗಿ, ಸಿಹಿಯಾಗಿ, ಮೃದುವಾಗಿ, ಮಧುರವಾಗಿರಲಿ ನಿಮ್ಮ ಮತ್ತು ನಿಮ್ಮ ಟೀಮ್‌ನ ಹಾಗು ನಿಮ್ಮ ಓದುಗರ 2007!
ಅಂದಹಾಗೆ, ಈ ದೃಶ್ಯ ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದದ್ದು ಎಲ್ಲಿ ಗೊತ್ತಾ? ಚಿತ್ರದುರ್ಗದಿಂದ ಹಂಪೆ ಕಡೆಗೆ ಹೋಗುವಾಗ ಕೂಡ್ಲಿಗಿ ಎನ್ನುವ ಗ್ರಾಮದ ಬಳಿ. ನಾವು ಕೂತಲ್ಲೇ ನೀವು ಸುದ್ದಿ ನೀಡುತ್ತೀರ ಹೈ-ಟೆಕ್ ಸುದ್ದಿಮನೆಯಿಂದ! ಆದರೆ, ಯಾವ ತಾಂತ್ರಿಕತೆಯ ಅರಿವೂ ಇಲ್ಲದೆ ಸವಿಯಾದ ಬೆಲ್ಲ ನೀಡುತ್ತಿದ್ದಾರೆ ಆಲೆಮನೆಯಲ್ಲಿ ಈ ಜನ.
ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.
01/ಜನವರಿ/2007













Click it and Unblock the Notifications