ಐ.ಟಿ ಕಂಪನಿಗಳಲ್ಲಿ ಯುಗಾದಿ/ಹೋಳಿ ರಜೆಯಲ್ಲಿ ತಾರತಮ್ಯ!
ಮತ್ತೊಂದು ಚಾಂದ್ರಮಾನ ಯುಗಾದಿ ಬಂದಿದೆ. ಇಂದಿನ ದಿನವನ್ನು ನಾಡಿನೆಲ್ಲಡೆ ಹೊಸವರ್ಷದ ಪ್ರಾರಂಭವೆಂದು ಆಚರಿಸಲಾಗುತ್ತದೆ. ಇದು ಕೋಟ್ಯಂತರ ಜನಕ್ಕೆ ಶ್ರದ್ಧೆಯ ಹಬ್ಬ. ಈ ದಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿಗಳು ರಜೆ ಘೋಸುವುದು ವಾಡಿಕೆ. ಆದರೆ ಬೆಂಗಳೂರಿನ ಇನ್ಫೋಸಿಸ್ ಮತ್ತು ಅಕ್ಸೆಂಚರ್‌ನಂತಹ ಕೆಲ ಐ.ಟಿ ಕಂಪನಿಗಳಲ್ಲಿ ಈ ಬಾರಿಯ ಯುಗಾದಿಗೆ ರಜೆ ಇಲ್ಲ.
ಇನ್ಫೋಸಿಸ್‌ನ ಉದಾಹರಣೆಯನ್ನೇ ತೆಗೆದುಕೊಂಡರೆ - ಆ ಸಂಸ್ಥೆಯ ಆಂಧ್ರಪ್ರದೇಶದ ಶಾಖೆಗೆ ಯುಗಾದಿಗೆ, ತಮಿಳುನಾಡು ಶಾಖೆಯಲ್ಲಿ ತಮಿಳು ಉಗಾದಿಗೆ ಮತ್ತು ಪೊಂಗಲ್ ಹಬ್ಬಕ್ಕೆ, ಕೇರಳ ಶಾಖೆಯಲ್ಲಿ ಓಣಮ್ ಹಬ್ಬಕ್ಕೆ ( 2 ದಿನ ), ಭುವನೇಶ್ವರದ ಶಾಖೆಯಲ್ಲಿ ಅಲ್ಲಿನ ರಥೋತ್ಸವಕ್ಕೆ ರಜೆ ನೀಡಲಾಗಿದೆ. ಆದರೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಅಂದರೆ ಕರ್ನಾಟಕದ ತನ್ನೆಲ್ಲ ಶಾಖೆಗಳಲ್ಲಿ ಯುಗಾದಿಯ ರಜೆ ನೀಡಲಾಗಿಲ್ಲ. ರಜಾ ಪಟ್ಟಿಯನ್ನು ನಿರ್ಧರಿಸುವ ಹಕ್ಕು ಆ ಸಂಸ್ಥೆಗಳಿಗೆ ಖಂಡಿತಾ ಇದೆ. ಆದರೆ ತಾವು ಯಾವ ನಾಡಿನ ಸಕಲ ಸೌಲಭ್ಯ ಪಡೆದು ಕಾರ್ಯನಿರ್ವಹಿಸುತ್ತಿವೆಯೋ ಆ ನಾಡಿನ ಮಹತ್ವದ ಹಬ್ಬಕ್ಕೆ ರಜೆಯನ್ನು ನೀಡದಿರುವುದು ಏನನ್ನು ಸೂಚಿಸುತ್ತದೆ ? ಕರ್ನಾಟಕದ ಮಹತ್ವದ ಹಬ್ಬ ಮರೆತ ಈ ಸಂಸ್ಥೆಗಳು ಹೋಳಿ ಹಬ್ಬಕ್ಕೆ ರಜೆ ನೀಡಲು ಮರೆಯುವುದಿಲ್ಲ. ಯಾಕೆ ಈ ತಾರತಮ್ಯ? ಕನ್ನಡಿಗರ ಮೇಲೆ ಏನನ್ನು ಹೇರಿದರೂ ನಡೆಯುತ್ತದೆ ಎಂಬ ಧೋರಣೆ ತೋರುತ್ತಿರುವ ಈ ಸಂಸ್ಥೆಗಳು ಇಡೀ ನಾಡಿಗೆ ಅಪಚಾರ ಎಸಗಿವೆ. ಈ ಮೂಲಕ ಕನ್ನಡಿಗರ ಮನನೋುಸಿವೆ.
ಈ ಬಗ್ಗೆ ಪ್ರಶ್ನಿಸಿದ ಸಂಸ್ಥೆಯ ಸಿಬ್ಬಂದಿಗಳಿಗೆ ಬೇಕಾದರೆ ರಜೆ ಹಾಕಿಕೊಳ್ಳಿ ಎಂಬ ಉಡಾಫ‚ೆಯ ಉತ್ತರವನ್ನೂ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ನೀಡುತ್ತಿರುವುದು, ಆ ಸಂಸ್ಥೆಯಲ್ಲಿ ಕನ್ನಡ ಮತ್ತು ಕನ್ನಡಿಗರ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ.
ಕನ್ನಡಿಗರ ಆಚರಣೆಗಳಿಗೆ ಮಹತ್ವ ನೀಡದ ಇಂತಹ ಸಂಸ್ಥೆಗಳ ಕನ್ನಡ ವಿರೋಧಿ ನಿಲುವು ಖಂಡನೀಯ. ಈ ಬಗ್ಗೆ ನಾಡಿನ ಕನ್ನಡಪರ ಸಂಘಟನೆಗಳು, ಸರ್ಕಾರ, ಜನತೆ, ಪ್ರಜಾಪ್ರತಿನಿಧಿಗಳು, ಸಾಹಿತಿಗಳು ಒಕ್ಕೊರಲಿನಿಂದ ದನಿ ಎತ್ತುವ ಅಗತ್ಯವಿದೆ.
- ನೊಂದ ಕನ್ನಡಿಗ











Click it and Unblock the Notifications