ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯಾಬ್ಬ ಕನ್ನಡಿಗನಿಗೂ ಇದು ಎಚ್ಚರಿಕೆಯ ಘಂಟೆ!

By Staff
|
Google Oneindia Kannada News


‘ನಮ್ಮ ಸಂಸ್ಕೃತಿಯನ್ನೇ ಬುಡಮೇಲು ಮಾಡುವ ಅಭಿವೃದ್ಧಿ , ಗ್ಲೋಬಲೀಕರಣ ನಮಗೆ ಬೇಕಾಗಿಲ್ಲ. ಅಭಿವೃದ್ಧಿಯ ಭರದಲ್ಲಿ ನಮ್ಮತನ ಕಳೆದು ಹೋಗಬಾರದು!’ ಎನ್ನುವ ಈ ಓದುಗರು, ಕನ್ನಡಕ್ಕೆ ಪಿಜಾ ಹಟ್‌ನಲ್ಲಿ ಅವಮಾನವಾಗಿದೆ ಎಂಬ ನಾಗೇಶ್‌ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವುದು ಹೀಗೆ...

ಸಂಪಾದಕರೇ,

ನಾಗೇಶ್‌ರವರ ‘ಪಿಜಾ ಹಟ್‌ನಲ್ಲಿ ಕನ್ನಡ ಔಟ್‌’ ಪತ್ರ ಓದಿ ತುಂಬ ವ್ಯಥೆಯಾಯಿತು. ಬೆಂಗಳೂರಿನ ಹೃದಯ ಭಾಗದಲ್ಲಿರುವ ಮತ್ತು ಕನ್ನಡ ಹೆಚ್ಚು ಮಾತನಾಡುವ ಪ್ರದೇಶವನ್ನು ಹೊಂದಿರುವ ಬಸವೇಶ್ವರನಗರದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಈ ಹೈಟೆಕ್‌ ಪಿಜಾ ಶಾಪ್‌ನಲ್ಲಿ ಕನ್ನಡದ ಬಗ್ಗೆ ಹೊಂದಿರುವ ಅಸಡ್ಡೆ ಖಂಡನೀಯ.

ಅಲ್ಲಿರುವ ಎಲ್ಲಾ ಕಾರ್ಮಿಕರು ಕನ್ನಡೇತರರು ಅಂದರೆ ಎಲ್ಲಿಗೆ ಬಂತು ಪರಿಸ್ಥಿತಿ! ನಮ್ಮ ಕನ್ನಡ ಹೋರಾಟ, ಕನ್ನಡ ಕೂಗು ಪ್ರಸ್ತುತ ಕೊಚ್ಚಿ ಹೋಗುತ್ತಿದೆ ಎಂಬುದು ಆಶ್ಚರ್ಯಕರ ಸಂಗತಿ.

ನಾವೆಲ್ಲಾ ನಮ್ಮ ಧ್ವನಿಯನ್ನು ಪತ್ರಿಕೆಗಳಲ್ಲಿ, ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತೇವೆ. ನಮ್ಮ ಜನರಿಗೆ, ನಮಗೆ ಮತ್ತು ನಮ್ಮ ಕನ್ನಡಕ್ಕೆ ಆಗುತ್ತಿರುವ ಅವಮಾನಗಳನ್ನು ಪ್ರಕಟಿಸುತ್ತಿದ್ದೇವೆ. ಹಾಗೆಯೇ ಆ ಮಂದಿ, ತಮ್ಮ ಕನ್ನಡ ವಿರೋಧಿ ತನವನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುತ್ತಾರೆ. ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತು ಆದರಲ್ಲಿಯೇ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ.

ಹಾಗೆಯೇ ನಾಗೇಶ್‌ರಂಥವರ ಕೂಗು ಆ ರೀತಿಯ ಸ್ಥಳದಲ್ಲಿ ಒಂಟಿ ಧ್ವನಿಯಾಗಿರುತ್ತದೆ. ಅಲ್ಲಿರುವ ಯಾವೊಬ್ಬ ಕನ್ನಡಿಗನಿಂದಲೂ ಬೆಂಬಲವಾಗಿ ಹತ್ತಾರು ಮರು ಧ್ವನಿಗಳು ಬರುವುದಿಲ್ಲ... ಇದೇ ಮಾನೋಭಾವದಿಂದಾಗಿ, ಹೈಟೆಕ್‌ ಕಲ್ಚರ್‌ ಮಳಿಗೆಗಳು ರಾಜಾರೋಷವಾಗಿ ಕನ್ನಡ-ಕನ್ನಡಿಗರನ್ನು ಕೀಳಾಗಿ ಕಡೆಗಣಿಸುತ್ತವೆ.

ನಮ್ಮ ನಾಡಿನಲ್ಲಿಯೇ ನಾವುಗಳು ಪರಕೀಯರಂತೆ ಬಾಳುವ ಧೌರ್ಬಗ್ಯ ಬಂದಿರುವುದು ವಿಷಾದನೀಯ. ಈ ರೀತಿಯ ಮಳಿಗೆಗಳಿಗೆ ಸರ್ಕಾರ ತನ್ನ ಅನುಮತಿಯನ್ನು ಕೊಡುವಾಗ ಕಡ್ಡಾಯವಾಗಿ ಕನ್ನಡ, ಕನ್ನಡಿಗರಿಗೆ ಅವಕಾಶವನ್ನು ಕೊಡುವಂತೆ ತಾಕೀತು ಮಾಡುವುದು ಇಂದಿನ ಸಮಯದಲ್ಲಿ ಅನಿವಾರ್ಯ. ಇಲ್ಲವಾದರೆ ಇಷ್ಟರಲ್ಲಿಯೇ ಕನ್ನಡವನ್ನೆಲ್ಲಾ ಗಾಳಿಗೆ ತೂರಿ ತಮ್ಮ ಬಾವುಟವನ್ನು ರಾಜಧಾನಿಯ ತುಂಬೆಲ್ಲಾ ನೆಡುತ್ತಾರೆ.

ಹಾಗೆಯೇ ನಮ್ಮ ಸಂಸ್ಕೃತಿಯನ್ನೇ ಬುಡಮೇಲು ಮಾಡುವ ಅಭಿವೃದ್ಧಿ , ಗ್ಲೋಬಲೀಕರಣ ನಮಗೆ ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಎಲ್ಲಾ ಸಂಸ್ಕೃತಿಗಳಿಗೆ ತಾಯಿ ಇದ್ದಂತೆ. ನಾವುಗಳು ನಮ್ಮ ಅಭಿವೃದ್ಧಿಯ ಭರದಲ್ಲಿ ನಮ್ಮ ನಾಡು ನಮ್ಮ ನುಡಿಯನ್ನು ಕಡೆಗಣಿಸಿದರೆ ಏನು ಸಾರ್ಥಕವಿಲ್ಲ. ಇದರ ಬಗ್ಗೆ ನಮ್ಮ ಎಲ್ಲ ಜನರೂ ಸಹ ಚಿಂತಿಸಬೇಕಾಗಿದೆ.

ಗ್ಲೋಬಲಿಕರಣ ಅಂದರೆ ನಮ್ಮ ತನವನ್ನು ಜಗತ್ತಿಗೆ ಹೇಳುವುದು ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಬೇರೆಯವರಿಗೂ ಸಹ ಅಸಕ್ತಿ ಮೂಡುವಂತೆ ಮಾಡುವುದಾಗಬೇಕು. ಅದು ಬಿಟ್ಟು ನಾವೇ ನಮ್ಮನ್ನು ಮರೆಯುವುದಲ್ಲ ಅಲ್ಲವಾ?

ಕನ್ನಡ ರಾಜ್ಯ ಸುವರ್ಣವೋತ್ಸವವನ್ನು ಆಚರಿಸುವ ಈ ಸಮಯದಲ್ಲಿ, ಈ ಕನ್ನಡ ಮಾಸದಲ್ಲಿ, ಈ ರೀತಿಯ ಮನ ನೋಯುವ ಘಟನೆ ನಡೆದಿರುವುದು ಪ್ರತಿಯಾಬ್ಬ ಕನ್ನಡಿಗನಿಗೆ ಎಚ್ಚರಿಕೆಯ ಘಂಟೆಯೇ ಸರಿ.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X