• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಟಿ ಬಗ್ಗೆ ರವಿ ಬೆಳಗೆರೆ ಬರೆದದ್ದು ಎಷ್ಟು ಸರಿ?

By Staff
|

;?

‘ಸ್ವಾಮಿ, ನೆಗಡಿ ಬಂದಲ್ಲಿ ಮೂಗನ್ನೇ ಕತ್ತರಿಸುವ ಸಲಹೆ ಕೊಡಬೇಡಿ’ ಎನ್ನುವ ಈ ಓದುಗರು, ಜಾಗತೀಕರಣದ ಇನ್ನೊಂದು ಮುಖವನ್ನು, ಅದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಮ್ಮದೇ ಆದ ವಾದವನ್ನು ಮುಂದಿಟ್ಟುಕೊಂಡು ಸಮರ್ಥಿಸಿದ್ದಾರೆ.

  • ಶ್ರೀನಿವಾಸ ಭಟ್ಟ, ಪೊಮೂನ, ಕ್ಯಾಲಿಫೊರ್ನಿಯ

vrbhats@verizon.net

ರವಿ ಬೆಳೆಗೆರೆ ಅವರೇ,

ಲೇಖನಿ ಚೂರಿಗಿಂತ ಹರಿತ. ಹರಿತವಾದ ಚೂರಿಯಿಂದ ಹಣ್ಣನ್ನಾದರು ಚೂರು ಮಾಡಬಹುದು, ಜಾಗ್ರತೆ ತಪ್ಪಿದಲ್ಲಿ ಹಚ್ಚುವ ಬೆರಳನ್ನೂ ಕತ್ತರಿಸಬಹುದು, ಬೇಕಾದಲ್ಲಿ ಕೊಲೆಯನ್ನೂ ಮಾಡಬಹುದು. ನಿಮ್ಮ ಲೇಖನ ನಿಮ್ಮದೇ ಆದ ಒಂದು ದೃಷ್ಟಿಕೋನವನ್ನು ಬಹಳ ನಾಟಕೀಯವಾಗಿ ಚಿತ್ರಿಸಿದೆ. ವೃತ್ತಿಯಲ್ಲಿ ಪತ್ರಕರ್ತನಲ್ಲದ, ಬರಹಗಾರನೂ ಅಲ್ಲದ, ಎಪ್ಪತ್ತರ ದಶಕದಲ್ಲಿ ಬೆಂಗಳೂರನ್ನು ಬಿಟ್ಟು ಈಗ ಅಮೆರಿಕದಲ್ಲಿ ನೆಲೆಸಿರುವ ನನ್ನ ವೈಯಕ್ತಿಕ ನೋಟ ಇಲ್ಲಿದೆ.

ನಿಜ, ಕಂಪ್ಯೂಟರ್‌ ತಿನ್ನಲು ಸಾಧ್ಯವಿಲ್ಲ, ಡಾಲರ್‌ ಹೊಟ್ಟೆ ತುಂಬಿಸುವುದಿಲ್ಲ.. ಹಲವು ವರ್ಷಗಳ ಹಿಂದೆ ಭಾರತದ ಖಜಾನೆಯಲ್ಲಿ ಡಾಲರ್‌ ಸೊನ್ನೆಯಾದಾಗ ದೇಶದ ಚಿನ್ನವನ್ನು ಮಾರುವ ಸ್ಥಿತಿಗೆ ಬಂದಿತ್ತು ನಮ್ಮ ಸರಕಾರ. ಇಂದು ಮುಖ್ಯವಾಗಿ ಐಟಿ ಕಂಪನಿಗಳ ದೆಸೆಯಿಂದ ಭಂಡಾರದಲ್ಲಿ ಬಿಲಿಯನ್‌ ಗಟ್ಟಲೆ ಡಾಲರ್‌ ಸೇರಿದೆ. ಇದರಿಂದ ಅಗತ್ಯವಾದ ತೈಲ, ಬೇಕಾದ ಆಹಾರ ಪದಾರ್ಥಗಳನು ಖರೀದಿಸಬಹುದು. ಮೇಲಾಗಿ ಪರದೇಶಕ್ಕೆ ಹೋಗಬಯಸುವ ವಿದ್ಯಾರ್ಥಿಗಳು, ವ್ಯಾಪಾರಿಗಳು, ವಿಜ್ಞಾನಿಗಳು, ನಿಮ್ಮಂತಹ ಪತ್ರಕರ್ತರು, ಮತ್ತು ಸಾಹಿತಿಗಳಿಗೂ ಅಗತ್ಯವಿದ್ದಲ್ಲಿ ದೊರೆಯುತ್ತಿದೆ.

ಎಪ್ಪತ್ತರ ದಶಕದಲ್ಲಿ ಯಾರ ಹಂಗೂ ಇಲ್ಲದೆ ಸರಕಾರಿ ಕಾಲೇಜಿನಲ್ಲಿ ಪದವಿಪಡೆದ ಸಹಸ್ರಾರು ಮಂದಿಯಲ್ಲಿ ನಾನೂ ಒಬ್ಬ. ಸರಕಾರಿ ಹುದ್ದೆ ಗಿಟ್ಟಿಸಲು ಬೇಕಾದ ಇನ್‌ಫ್ಲೋಯೆನ್ಸ್‌ ಇಲ್ಲದೇ, ಉನ್ನತ ವಿದ್ಯಾಭ್ಯಾಸಕ್ಕೆ ಅಡ್ಡಬಂದ ಮೀಸಲಾತಿ, ಮೇಲಾಗಿ ಸ್ನೇಹಿತರ ಸಹಾಯ, ಸ್ವಂತ ಪ್ರತಿಭೆ, ದೇವರ ದಯೆಯಿಂದ ದೇಶಬಿಟ್ಟು ಅಮೆರಿಕ ಸೇರಿದವರು ಬಹಳ ಮಂದಿ. ಅವರಲ್ಲಿ ವೈದ್ಯರು, ಇಂಜಿನಿಯರುಗಳು, ವಿಜ್ಞಾನಿಗಳು ಇದ್ದಾರೆ. ಎರಡು ಮೂರು ವರ್ಷಕ್ಕೊಮ್ಮೆ ತಾಯ್ನಾಡಿಗೆ ಭೇಟಿ, ಭಾರತದಿಂದ ಬರುವ ಪರಿಚಿತರಿಗೆ (ಪತ್ರಕರ್ತರಿಗೂ) ಇಲ್ಲಿ ಆತಿಥ್ಯ ನೀಡುವುದನ್ನು ಬಿಟ್ಟರೆ ನಮ್ಮಂತವರ ಕಾಣಿಕೆ ನಮ್ಮ ತಾಯ್ನಾಡಿಗೆ ಸೊನ್ನೆ ಎನ್ನಬಹುದು.

ಆದರೆ ಇಂದಿನ ಪದವೀಧರರಿಗೆ (ರೈತರ ಮಕ್ಕಳೂ, ಬಡವರ ಮಕ್ಕಳೂ) ಪದವಿಮುಗಿಯುವ ಮುಂಚೆಯೇ ಅವರ ಪ್ರತಿಭೆಯನ್ನು ಗುರುತಿಸಿ, ಉತ್ತಮ ಅವಕಾಶಗಳನ್ನು ಹುಟ್ಟಿಬೆಳೆದ ಊರಿನಲ್ಲೇ ಒದಗಿಸುತ್ತಿರುವ ಸಂಸ್ಥೆಗಳು : ಇನ್‌ಫೋಸಿಸ್‌, ವಿಫ್ರೋ ಇತ್ಯಾದಿ. ಇದರಿಂದ ನಮ್ಮ ನಗರ, ರಾಜ್ಯ, ದೇಶಕ್ಕಾಗುವ ಲಾಭದ ಬಗ್ಗೆ ಜನಸಾಮನ್ಯರು ಅರ್ಥಮಾಡಿಕೊಳ್ಳಬಲ್ಲರು.

ಇಂತಹ ಅವಕಾಶಗಳು ಬೆಂಗಳೂರಿಂದ ಜಾರಿಹೋಗುವ ದಿನಗಳು ಬಹಳ ದೂರವಿಲ್ಲ !. ಪ್ರಪಂಚದಲ್ಲಿ ಹಲವಾರು ದೇಶಗಳು (ಚೀನಾ, ಮಲೇಶಿಯ. ರಷ್ಯಾ, ದಕ್ಷಿಣ ಅಮೆರಿಕ) ನಮ್ಮಿಂದ ಕಬಳಿಸಲು ಹಾತೊರೆಯುತ್ತಿವೆ. ನೀವೆಣಿಸಿದಂತೆ ಈ ‘ಗುಲಾಮ ಸೇವೆಯನ್ನು‘ ಅಮೆರಿಕ ನಮ್ಮ ದೇಶದ ಮೇಲೆ ಹೊರಿಸುತ್ತಿಲ್ಲ.

ಹಿಂದೆ, ಬಹಳ ದಶಕಗಳ ಹಿಂದೆ, ಒಂದು ಊರು, ಹಳ್ಳಿ ಸಂಪೂರ್ಣ ಸ್ವಾವಲಂಬಿಯಾಗಿತ್ತು.. ಬೆಳೆಯುವ ರೈತರು, ವ್ಯಾಪಾರಿಗಳು, ಕಮ್ಮಾರರು, ಹೊಲಿಗೆಯವರು, ವೈದ್ಯರು, ಪೂಜಾರಿಗಳು.. ಅಂತಹ ಒಂದು ಸಣ್ಣ ಗುಂಪಿನ ಚೌಕಟ್ಟನ್ನು ನಿರ್ಮಿಸಿದ್ದು- ಸಾರಿಗೆ - ಸಂಪರ್ಕ (Transportation and communication that can be covered by a common man within 24 hours for perishable goods, and weeks at most for non perishable commodities). ಇಂದು ಇದೇ ಚೌಕಟ್ಟಿನಲ್ಲಿ ಇಡೀ ಪ್ರಪಂಚವನ್ನೆ ಸೆರೆಹಿಡಿಯಬಹುದು - ಜಾಗತೀಕರಣ, ವಿಜ್ಞಾನದ ಕೊಡುಗೆ. ಇದರಿಂದಾದ ಒಳಿತು ಕೆಡಕಿನಬಗ್ಗೆ ಕಾಳಜಿ ಏನಿದ್ದರು ಬುದ್ಧಿಜೀವಿಗಳ ಲೇಖನಿಗೆ ಕಸರತ್ತು, ಕಾರಣ, ಇದನ್ನು ತಡೆಯುವ ಕಾಲ ಮಿಂಚಿದೆ. ಇದು ಚರಿತ್ರೆ.

ಪ್ರತಿಯಾಂದು ದೇಶವು (ಊರು) ಅಲ್ಲಿನ ಭೌತಿಕ ಲಕ್ಷಣ, ಹವಾಮಾನ, ರಾಜಕೀಯ ಮುಖಂಡರ ದಕ್ಷತೆ, ಕಾರ್ಮಿಕರ ಕಾರ್ಯನಿಷ್ಟೆ, ಯುವಜನಾಂಗದ ಜ್ಞಾನ ದಾಹ, ಬಂಡವಾಳಶಾಹಿಗಳ ದೂರದೃಷ್ಟಿ, ಸಮಾಜ ಸುಧಾರಕರ (ಪತ್ರಕರ್ತರ) ನಿಸ್ಪ್ರಹತೆ, ಗಳನ್ನು ರೂಡಿಸಿ ಮಾನವ ಕುಲಕ್ಕೆ ಅಗತ್ಯವಾದ (ಅಗತ್ಯವಿಲ್ಲದ, ಆದರೆ ಬೇಕೆನಿಸುವ) ಪದಾರ್ಥಗಳನ್ನು, ಸೇವೆಯನ್ನು, ಉತ್ಪಾದಿಸಬೇಕು.

ಇದರಲ್ಲಿ ಯಾವುದೇ ತರಹದ (ಮೀಸಲಾತಿ, ಸಾರ್ವಜನಿಕ ಸಮಾನತೆ, ದೇಶಪ್ರೇಮ, ಮಾನವ ಸಹಜ ಕರುಣೆ- ದೀನದಲಿತರಮೇಲೆ) ‘ಇಸಮ್‌’ಗಳಿಗೂ ಅವಕಾಶವಿಲ್ಲ - ಕ್ಯಾಪ್ಟಲಿಸಮ್‌ ಬಿಟ್ಟರೆ. ಇದರ ಇಂಧನವೇ ಮಾನವ ಸಹಜವಾದ ಆಸೆ (ದುರಾಸೆ). ಈ ಪಂದ್ಯದ ನಿಯಮ - survival of the fittest.

ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ದೇಶ ಟಾಟಾ, ಬಿರ್ಲಾ ರಂತಹ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದೆ. ಇದಕ್ಕೆ ಹೋಲಿಸಿದಲ್ಲಿ ಇಂದಿನ ಐಟಿ ಕಂಪನಿಗಳಿಗೆ ನೀಡುತ್ತಿರುವ ಸಹಾಯ ತೀರ ಕಡಿಮೆ. ಆದರೆ ಈ ಕಂಪನಿಗಳು ಇತರ ದೇಶಗಳೊಡನೆ ಸ್ಪರ್ಧಿಸಬೇಕು. ಹೊರಗಿನ ದೇಶಗಳು ಅಲ್ಲಿನ ಕಂಪನಿಗಳಿಗೆ ನೀಡುವ ಸಹಾಯ ಕಡಿಮೆಯೇನಲ್ಲ.

ಒಟ್ಟಿನಲ್ಲಿ ಅನಿರೀಕ್ಷಿತವಾಗಿ, ಆದರೆ ಹಲವರ(ನಾರಾಯಣ ಮೂರ್ತಿ) ದೂರದೃಷ್ಟಿಯಿಂದ ಯುವಜನಾಂಗಕ್ಕೆ ವರವಾಗಿಬಂದ ಐಟಿ ಗಾಳಿ ಜೊತೆಯಲ್ಲಿ ಕೆಲವು ತಾತ್ಕಾಲಿಕ ತೊಂದರೆಗಳು ಬಂದಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ, ಸಲಹೆ ಸೂಚನೆಗಳನ್ನು ಸ್ವೀಕರಿಸಿ, ನಿಭಾಯಿಸುವುದು ಸರಕಾರದ, ಬುದ್ಧಿಜೀವಿಗಳಾದ ನಿಮ್ಮಂತಹ ಪತ್ರಕರ್ತರ ಕರ್ತವ್ಯ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮಂತಹ ಪತ್ರಕರ್ತರು ಹೊಣೆ, ಜವಾಬ್ದಾರಿ ಅರಿತು constructive criticism ಕೊಡುವ ಬದಲು ಸಂಕುಚಿತ ಮನೋಭಾವವನ್ನು ಹರಡುವ ಪ್ರಯತ್ನ ನಿಜಕ್ಕೂ ವಿಷಾದಕರ. ಸ್ವಾಮಿ, ನೆಗಡಿ ಬಂದಲ್ಲಿ ಮೂಗನ್ನೇ ಕತ್ತರಿಸುವ ಸಲಹೆ ಕೊಡಬೇಡಿ, ಕಾರಾಣ ಹುಡುಕಿ.

ಪೂರಕ ಓದಿಗೆ-

ಆಗಷ್ಟೆ ನಿನಗೆ ಗೊತ್ತಾಗುತ್ತದೆ ಹಣವನ್ನು ತಿನ್ನಲಾಗುವುದಿಲ್ಲವೆಂದು...

ನಾರಾಯಣಮೂರ್ತಿ ಎಲೆಕ್ಷನ್ನಿಗೆ ನಿಲ್ಲಬೇಕಾ? ರಾಷ್ಟ್ರಪತಿಯಾಗಬೇಕಾ?

ಊರು ಕೆಡವಿ ಊರು ಕಟ್ಟಲು ಇಲ್ಲಿ ಯಾವನಿಗೂ ನಾಯಿ ಕಚ್ಚಿಲ್ಲ!

ಇನ್‌ಫೋಸಿಸ್‌ನ ಹಿರಿಯ ಹೆಣ್ಣು ಮಗಳು ಸುಧಾಮೂರ್ತಿ ಅವರಿಗೆ..!

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more