keyboard_backspace

ಜನರಿಗೆ 'ದೆಹಲಿ ಮಾದರಿ' ಬೇಕು, ಪಂಜಾಬ್‌-ಗೋವಾದಲ್ಲಿ ಎಎಪಿ ಗೆಲುವು ನಿಶ್ಚಿತ: ಕೇಜ್ರಿವಾಲ್‌

Google Oneindia Kannada News

ನವದೆಹಲಿ, ನವೆಂಬರ್‌ 11: ಪಂಜಾಬ್, ಗೋವಾ, ಯುಪಿ ಮತ್ತು ಉತ್ತರಾಖಂಡದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಜನರು "ದೆಹಲಿ ಮಾದರಿಯ ಆಡಳಿತಕ್ಕೆ" ಖಂಡಿತವಾಗಿ ಮತ ಹಾಕುತ್ತಾರೆ ಎಂದು ಆ‌ಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ, ಗೋವಾ, ಪಂಜಾಬ್‌ ಹಾಗೂ ಉತ್ತರಾಖಂಡದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಪಕ್ಷಗಳು ಈಗಲೇ ತಯಾರಿಯನ್ನು ನಡೆಸುತ್ತಿದೆ. ಎಎಪಿ ಯು ಕೂಡಾ ಭರ್ಜರಿ ತಯಾರಿಯಲ್ಲಿ ತೊಡಗಿದೆ.

ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ ಮಾಡಿದ ದೆಹಲಿ ಸರ್ಕಾರತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ ಮಾಡಿದ ದೆಹಲಿ ಸರ್ಕಾರ

ಈ ಬಗ್ಗೆ ಟೈಮ್ಸ್‌ ನೌನ ಕಾರ್ಯಕ್ರಮದಲ್ಲಿ ಮಾತನಾಡಿದ ಆ‌ಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಜನರಿಗೆ ದೆಹಲಿ ಮಾದರಿಯ ಸರ್ಕಾರ ಬೇಕಾಗಿದೆ. ದೇಶದ ಪ್ರತಿ ಮೂಲೆ ಮೂಲೆಯಲ್ಲೂ ದೆಹಲಿ ಮಾದರಿಯ ಸರ್ಕಾರವನ್ನು ಜನರು ಬಯಸುತ್ತಾರೆ. ಜನರಿಗೆ ನಾವು ಬೇಕು ಎಂದು ಆದಾಗ, ನಾವ್ಯಾಕೆ ಆ ರಾಜ್ಯಗಳಿಗೆ ಹೋಗದೆ ಇರಬೇಕು," ಎಂದು ಪ್ರಶ್ನಿಸಿದ್ದಾರೆ.

 People Want Delhi Model In Every Part of India says Arvind Kejriwal

"ಶಾಲೆಯ ಗುಣಮಟ್ಟವನ್ನು ಅಧಿಕ ಮಾಡುವ ನಿಟ್ಟಿನಲ್ಲಿ, ಉತ್ತಮ ಆಸ್ಪತ್ರೆಯನ್ನು ಒದಗಿಸಲು ಹಾಗೂ ಜನರಿಗೆ ವಿದ್ಯುತ್‌ ಅನ್ನು ಒದಗಿಸುವ ನಿಟ್ಟಿನಲ್ಲಿ ನಾವು ಜನರಲ್ಲಿ ಮತಯಾಚನೆ ಮಾಡುತ್ತೇವೆ. ನಾವು ದೆಹಲಿಯಲ್ಲಿ ಇದೇ ರೀತಿಯ ಕಾರ್ಯವನ್ನು ಮಾಡಿದ್ದೇವೆ," ಎಂದು ಎಎಪಿಯ ಚುನಾವಣಾ ಕಾರ್ಯತಂತ್ರದ ಬಗ್ಗೆ ಪ್ರತಿಕ್ರಿಯಿಸುತ್ತಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಇನ್ನು "ಅದರಲ್ಲೂ ಮುಖ್ಯವಾಗಿ ಗೋವಾ ಹಾಗೂ ಪಂಜಾಬ್‌ನಲ್ಲಿ ಜನರು ದೆಹಲಿ ಮಾದರಿಯನ್ನು ಮೆಚ್ಚಿ ನಮಗೆ ಮತ ನೀಡಲಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ಒಳಜಗಳವನ್ನು ಜನರು ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಶಿರೋಮಣಿ ಅಕಾಳಿದಳದ ವಿರುದ್ಧ ಜನರಿಗೆ ಇರುವ ಅಸಮಾಧಾನವು ಎಎಪಿ ಪಂಜಾಬ್‌ನಲ್ಲಿ ಜನರ ನಂಬಿಕೆ ಗಳಿಸಲು ದಾರಿ ದೀಪವಾಗಲಿದೆ," ಎಂದು ಕೂಡಾ ಕೇಜ್ರಿವಾಲ್‌ ಉಲ್ಲೇಖ ಮಾಡಿದ್ದಾರೆ.

ಗೋವಾ ಜನತೆಗೆ ಅರವಿಂದ್ ಕೇಜ್ರಿವಾಲ್‌ರಿಂದ ಭರವಸೆಯ ಮಹಾಪೂರಗೋವಾ ಜನತೆಗೆ ಅರವಿಂದ್ ಕೇಜ್ರಿವಾಲ್‌ರಿಂದ ಭರವಸೆಯ ಮಹಾಪೂರ

ಏಕತೆಯೇ ನಿಜವಾದ ಹಿಂದುತ್ವ

"ನಾನು ದೇಶದ 130 ಕೋಟಿ ಜನರನ್ನು ಐಕ್ಯವಾಗಿರಿಸಲು ಬಯಸುತ್ತೇನೆ, ಇದುವೇ ನಿಜವಾದ ಹಿಂದುತ್ವ. ಜನರನ್ನು ಧರ್ಮದ ಆಧಾರದಲ್ಲಿ ವಿಂಗಡನೆ ಮಾಡುವುದು, ಗಲಭೆಗಳನ್ನು ಸೃಷ್ಟಿ ಮಾಡುವುದು, ದಲಿತರ ವಿರುದ್ಧ ದೌರ್ಜನ್ಯವನ್ನು ಎಸಗುವುದು ನಿಜವಾದ ಹಿಂದುತ್ವ ಅಲ್ಲ. ಜನರು ಪರಸ್ಪರ ಏಕತೆಯಿಂದ ಇರುವುದೇ ನಿಜವಾದ ಹಿಂದುತ್ವ," ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ಇದೀಗ ಅಯೋಧ್ಯೆಯ ರಾಮಲಲ್ಲಾ ದರ್ಶನವನ್ನೂ ತೀರ್ಥಯಾತ್ರೆಗೆ ಸೇರಿಸಲಾಗಿದೆ. ಹಿರಿಯ ನಾಗರಿಕರಿಗೆ ಉಚಿತ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ಯಾತ್ರೆ ಕೈಗೊಳ್ಳುವ ಹಿರಿಯರ ನಾಗರಿಕರು ಸಹಾಯಕ್ಕೆ ತಮ್ಮ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬಹುದು ಎಂದು ಇತ್ತೀಚೆಗೆ ಕೇಜ್ರಿವಾಲ್‌ ಹೇಳಿದ್ದರು, ಆ ಬೆನ್ನಲ್ಲೇ ಕೇಜ್ರಿವಾಲ್‌ ಮೃದು ಹಿಂತುತ್ವವಾದಿ ಎಂದು ಆರೋಪ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್‌, "ನನಗೆ ಮೃದು ಹಿಂದುತ್ವ ಬೇಡ. ನಗಗೆ ದೇಶದ 130 ಕೋಟಿ ಜನರಲ್ಲಿ ಐಕ್ಯತೆ ಕಾರಬೇಕು. ಜನರ ನಡುವೆ ಪರಸ್ಪರ ಐಕ್ಯತೆ ಬೇಕು. ಇದು ಹಿಂದುತ್ವ, ಹಿಂದುತ್ವವೇ ಏಕತೆ. ಹಿಂದುತ್ವ ಯಾರನ್ನು ವಿಭಜನೆ ಮಾಡುವುದಿಲ್ಲ," ಎಂದು ಅರವಿಂದ್‌ ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ,

"ಪ್ರಸ್ತುತ ದೇಶದಲ್ಲಿ ಹಿಂದುತ್ವದ ಹೆಸರಲ್ಲಿ ಏನು ನಡೆಯುತ್ತಿದೆಯೋ ಅದು ಹಿಂದುತ್ವ ಅಲ್ಲ. ಈ ಜನರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಭಾಷೆಯಲ್ಲಿ ನಿಂದನೆ ಮಾಡುತ್ತಾರೆ, ಜನರಿಗೆ ಬೆದರಿಕೆ ಹಾಕುತ್ತಾರೆ, ಇಂಜಿನಿಯರ್‌ ಗಲಭೆ ಮಾಡುತ್ತಾರೆ, ಇದು ನಿಜವಾದ ಹಿಂದುತ್ವ ಅಲ್ಲ," ಎಂದು ಯಾವುದೇ ಪಕ್ಷವನ್ನು ಉಲ್ಲೇಖ ಮಾಡದೆಯೇ ಅರವಿಂದ್ ಕೇಜ್ರಿವಾಲ್‌ ತಿಳಿಸಿದರು.

ಯಾವ ರಾಜ್ಯದಲ್ಲಿ, ಎಷ್ಟು ಕ್ಷೇತ್ರದಲ್ಲಿ ಎಎಪಿ ಸ್ಪರ್ಧೆ

ಎಎಪಿ ಉತ್ತರಾಖಂಡದಲ್ಲಿ ಎಲ್ಲಾ 70 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಪಕ್ಷವು ಹೇಳಿದೆ. ಗೋವಾದಲ್ಲಿ 40 ವಿಧಾನಸಭೆ ಕ್ಷೇತ್ರಗಳು ಇದ್ದು, ಇಲ್ಲಿಯೂ ಕೂಡಾ ಎಎಪಿ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ದೆಹಲಿ ಸಚಿವ ಮನೀಶ್‌ ಸಿಸೋಡಿಯಾ ತಿಳಿಸಿದ್ದಾರೆ. ಇನ್ನು ಪಂಜಾಬ್‌ನಲ್ಲಿ ಒಟ್ಟಿ 117 ಕ್ಷೇತ್ರಗಳು ಇದ್ದು, ಈ ಎಲ್ಲಾ ಕ್ಷೇತ್ರದಲ್ಲಿ ಎಎಪಿ ಸ್ಪರ್ಧೆಗೆ ಸಜ್ಜಾಗಿದೆ. ಇನ್ನು ಉತ್ತರ ಪ್ರದೇಶದಲ್ಲಿ ಒಟ್ಟು 403 ಕ್ಷೇತ್ರಗಳು ಇದ್ದು, ಈ ಎಲ್ಲಾ ಕ್ಷೇತ್ರದಲ್ಲಿ ಎಎಪಿ ಸ್ಪರ್ಧಿಸಲಿದೆ ಎಂದು ಹೇಳಿದೆ.

(ಒನ್ಇಂಡಿಯಾ ಸುದ್ದಿ)

English summary
People Want Delhi Model In Every Part of India says Arvind Kejriwal.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X